ಅಂತರರಾಷ್ಟ್ರೀಯ

ಮುಲ್ಲಾ ಅಬ್ದುಲ್ ಘನಿ ಬರದಾರ್ ಅಫ್ಘಾನಿಸ್ತಾನ ಹಂಗಾಮಿ ಅಧ್ಯಕ್ಷ...?

ಮುಲ್ಲಾ ಅಬ್ದುಲ್  ಘನಿ ಬರದಾರ್   ಅಫ್ಘಾನಿಸ್ತಾನ ಹಂಗಾಮಿ ಅಧ್ಯಕ್ಷ...?

ಕಾಬೂಲ್‌,  ಆಗಸ್ಟ್‌  16: ರಕ್ತಪಾತವಿಲ್ಲದೆ  ಅಫ್ಘಾನಿಸ್ತಾನ   ತಾಲಿಬಾನಿಗಳ  ವಶವಾಗಿದೆ.  ಕತಾರ್‌ನಿಂದ   ಕಾಬೂಲ್‌ಗೆ ಆಗಮಿಸಿದ  ತಾಲಿಬಾನ್  ಉನ್ನತ  ನಾಯರುಗಳಿಗೆ   ಖುದ್ದು  ಸರ್ಕಾರಿ ಅಧಿಕಾರಿಗಳು  ಘನ  ಸ್ವಾಗತಕೋರಿದ್ದಾರೆ.   

ಅಧ್ಯಕ್ಷೀಯ ಅರಮನೆಯಲ್ಲಿ  ತಾಲಿಬಾನ್‌  ನಾಯಕರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಅಫ್ಘಾನಿಸ್ತಾನದ ಹೆಸರು    ಇನ್ನೂ  ಮುಂದೆ   ಇಸ್ಲಾಮಿಕ್‌  ಎಮಿರೇಟ್ಸ್‌  ಆಫ್‌  ಅಫ್ಘಾನಿಸ್ತಾನ್‌   ಎಂದು  ಬದಲಿಸಲಾಗುವುದು  ಎಂದು ಘೋಷಿಸಿದ್ದಾರೆ.  

ಇನ್ನೂ ಅಧ್ಯಕ್ಷ ಅಶ್ರಫ್ ಘನಿ ನಿನ್ನೆ ಮಧ್ಯಾಹ್ನದವರೆಗೆ  ಅಧ್ಯಕ್ಷೀಯ ಅರಮನೆಯಲ್ಲೇ ಇರುವುದಾಗಿ ಎಲ್ಲರನ್ನೂ  ನಂಬಿಸಿ   ವಿಶೇಷ ವಿಮಾನದಲ್ಲಿ ತಜಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆ.  ಅವರು  ಸುರಕ್ಷಿತವಾಗಿ ಅಫ್ಘಾನಿಸ್ತಾನ  ತೊರೆದ ನಂತರವೂ, ಅಧ್ಯಕ್ಷರು ಪಲಾಯನದ   ವಿಷಯವನ್ನು  ಬಹಿರಂಗಪಡಿಸಲಿಲ್ಲ.    ಅಶ್ರಫ್ ಘನಿ ಎಲ್ಲಿದ್ದಾರೆ ಎಂದು ಕಂಡುಕೊಳ್ಳಲು  ಪ್ರಯತ್ನಿಸಲಾಗುವುದು ಎಂದು  ತಾಲಿಬಾನ್ ವಕ್ತಾರರು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ  ಇನ್ನೂ ಹಂಗಾಮಿ ಸರ್ಕಾರ  ರಚಿಸಲಿದ್ದೇವೆ,   ತಮ್ಮ  ಅಧ್ಯಕ್ಷರಾಗಿ  ಬರಾದರ್‌   ಕಾರ್ಯನಿರ್ವಹಿಸಲಿದ್ದಾರೆ ಎಂದು   ಪ್ರತಿಕ್ರಿಯಿಸಿದ್ದಾರೆ. ತಾಲಿಬಾನ್  ಸರ್ಕಾರ   ರಚನೆಯೊಂದಿಗೆ, ವಿವಿಧ ದೇಶಗಳು ತಮ್ಮ ರಾಯಭಾರ ಕಚೇರಿಯನ್ನು ಖಾಲಿ ಮಾಡುತ್ತಿವೆ.   ತನ್ನ ಸಿಬ್ಬಂದಿಯನ್ನು ಕರೆತರಲು  ಅಮೆರಿಕಾ  3,000 ಹೆಚ್ಚುವರಿ ಪಡೆಗಳನ್ನು ಕಳುಹಿಸಿದೆ. ತಾಲಿಬಾನ್ ಆಕ್ರಮಣದಿಂದ, ಕಾಬೂಲ್‌ನಲ್ಲಿ ದೌರ್ಜನ್ಯಗಳು ಆರಂಭಗೊಂಡಿವೆ.  ತಾಲಿಬಾನ್ ಪಡೆಗಳು ನಗರವನ್ನು ಸುತ್ತುವರಿದು ಸಂಚಾರ  ನಿಷೇಧಿಸಿವೆ. ಮತ್ತೊಂದೆಡೆ ಅಂಗಡಿಗಳು ಮತ್ತು ಮನೆಗಳ ಲೂಟಿ ಕೂಡ ಆರಂಭವಾಗಿದೆ.  ಲೂಟಿ  ತಡೆಯಲು ತಾಲಿಬಾನ್ ಪಡೆಗಳನ್ನು ನಿಯೋಜಿಸಿದೆ. ಮತ್ತೊಂದೆಡೆ, ತಾಲಿಬಾನ್‌ಗೆ ಅಂತರರಾಷ್ಟ್ರೀಯ ಬೆಂಬಲ ಹೆಚ್ಚುತ್ತಿರುವಂತೆ ಕಾಣುತ್ತಿದೆ. ಆದಾಗ್ಯೂ, ಪಾಕಿಸ್ತಾನ    ತಾಲಿಬಾನ್ ಅನ್ನು  ಮೊದಲಿಂದಲೂ ಬೆಂಬಲಿಸಿದೆ.

ಭಾರತವನ್ನು  ಇಕ್ಕಟ್ಟಿಗೆ   ಸಿಲುಕಿಸಲು  ಚೀನಾ ಕೂಡ   ತಾಂತ್ರಿಕವಾಗಿ ತಾಲಿಬಾನ್‌ಗೆ ಬೆಂಬಲ  ವ್ಯಕ್ತಪಡಿಸಿದೆ.  ಅತ್ತ  ರಷ್ಯಾ ಕೂಡಾ ತಾಲಿಬಾನ್ ಸರ್ಕಾರವನ್ನು  ಮಾನ್ಯ ಮಾಡಲು   ಸಿದ್ಧವಾಗಿದೆ  ಎಂದು ಕಂಡುಬರುತ್ತಿದೆ.  ತಾಲಿಬಾನ್   ಆರ್ಥಿಕ ಮೂಲಗಳ ಕುರಿತು ವಿಶ್ವಾದ್ಯಂತ  ಚರ್ಚೆ ನಡೆಯುತ್ತಿದೆ.  ಅಫ್ಗಾನಿಸ್ತಾನದ  ಸೇನಾ   ಬಜೆಟ್‌  ಗಿಂತ  ತಾನಿಬಾನಿಗಳ    ಸೇನಾ ಬಜೆಟ್‌  ಹೆಚ್ಚು  ಎಂದು ಹೇಳಲಾಗುತ್ತಿದೆ.  

ಫೋರ್ಬ್ಸ್ 2016 ರ ಪಟ್ಟಿಯ ಪ್ರಕಾರ, ತಾಲಿಬಾನ್ ವಿಶ್ವದ ಐದನೇ  ಶ್ರೀಮಂತ ಭಯೋತ್ಪಾದಕ ಸಂಘಟನೆಯಾಗಿದೆ. ಆ ಸಮಯದಲ್ಲಿ, ತಾಲಿಬಾನ್ ವಾರ್ಷಿಕ 2900 ಕೋಟಿ ವಹಿವಾಟು ನಡೆಸುತ್ತಿತ್ತು.  ಕಳೆದ ವರ್ಷ ತಾಲಿಬಾನ್ ವಾರ್ಷಿಕ ಬಜೆಟ್ 11,829 ಕೋಟಿ ಎಂದು ನ್ಯಾಟೋ ಹೇಳಿದೆ. 

ಸುದ್ದಿ ಓದಿ