ವಿದ್ಯಾಥರ್ಿಗಳಿಗೆ ಸೈಕಲ್ ವಿತರಣೆ
ಶಾಲಾ ವಿದ್ಯಾಥರ್ಿಗಳಿಗೆ ಸೈಕಲ್ ವಿತರಿಸುವಾಗ ಮಲ್ಲಿಕಾಜರ್ುನ ಕೋರೆ ಹಾಗೂ ಇನ್ನಿತರರು.
ಮಾಂಜರಿ 02: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆ.ಎಲ್.ಇ. ಸಂಸ್ಥೆಯ ಶಾರದಾದೇವಿ ಕೋರೆ ಪ್ರೌಢಶಾಲೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಮಲ್ಲಿಕಾಜರ್ುನ ಕೋರೆಯವರು ಕನರ್ಾಟಕ ಸರಕಾರದಿಂದ ವಿದ್ಯಾಥರ್ಿಗಳಿಗೆ ಕೊಡಮಾಡಿದ ಸೈಕಲ್ಲುಗಳನ್ನು ವಿತರಿಸಿ -"ಮಕ್ಕಳ ಓದಿಗೆ ಪೂರಕವಾಗುವ ಸೈಕಲ್ ವಿತರಣೆ ಸರಕಾರದ ಶ್ಲಾಘನೀಯ ಸೇವೆಯೆಂದು ಬಣ್ಣಿಸಿ, ಮಕ್ಕಳು ಇದರ ನಿಜವಾದ ಸದುಪಯೋಗ ಪಡೆದುಕೊಳ್ಳಬೇಕೆಂದು" ಮಾತನಾಡಿದರು. ಉಪಸ್ಥಿತ ಉಪಪ್ರಾಚಾರ್ಯ ಸಿ ಬಿ ಚೌಗುಲೆ "ದೂರದಿಂದ ಶಾಲೆಗೆ ಬರುವ ಮಕ್ಕಳಿಗೆ ಸೈಕಲ್ ಬಹು ಪ್ರಯೋಜನಕಾರಿ; ಇದನ್ನು ಪಡೆದ ವಿದ್ಯಾಥರ್ಿಗಳ ಓದು ಚೆನ್ನಾಗಿ ಸಾಗಬೇಕೆಂದು" ಅಭಿಪ್ರಾಯಬಿಟ್ಟರು. ಹಿರಿಯ ಶಿಕ್ಷಕರಾದ ಕೆ. ಬಿ. ಶಿಂದೆ, ವ್ಹಿ. ಡಿ. ನಾಯಿಕ, ಎಸ್. ಆರ್. ಮಾನೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪ್ರಯೋಜನ ಪಡೆಯುವ ವಿದ್ಯಾಥರ್ಿಗಳು, ಪಾಲಕರು ಭಾಗಿಯಾಗಿದ್ದರು. ಸರಕಾರದ ಈ ಸೇವೆ ನಿಜವಾಗಿಯೂ ಅಭಿನಂದನೀಯವೆಂಬುದು ಪಾಲಕರ ಆಶಯ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 