ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ತಾಯಂದಿರ ದಿನಾಚರಣೆ
Mother's Day celebration at KLE Centenary Charitable Hospital
ಲೋಕದರ್ಶನ ವರದಿ
ಬೆಳಗಾವಿ 11: ತಾಯಿಯ ಆರೋಗ್ಯವೇ ಕುಟುಂಬದ ಆರೋಗ್ಯದ ಆಧಾರವಾಗಿದೆ ಎಂದು ಆಸ್ಪತ್ರೆಯ ಸ್ತ್ರೀರೊಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ. ಸತೀಶ ದಾಮಣಕರ ಅವರು ಇಂದು ಯಳ್ಳೂರು ರಸ್ತೆಯಲ್ಲಿನ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಬೆಳಗಾವಿಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದಿಂದ ಆಸ್ಪತ್ರೆಯ ಓಪಿಡಿ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಾಯಂದಿರ ದಿನಾಚರಣೆಯನ್ನು ಕುರಿತು ಮಾತನಾಡುತ್ತಿದ್ದರು. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ ಮಹಿಳೆಯರು ತಮ್ಮ ಆರೋಗ್ಯ ಕಡೆ ಹೆಚ್ಚಿನ ಗಮನ ಹರಿಸಬೇಕೇಂದು ಸಲಹೆ ನೀಡಿದರು ನಿಯಮಿತ ಆರೋಗ್ಯ ತಪಾಸಣೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಳಜಿ ಅತ್ಯಗತ್ಯವೆಂದು ತಿಳಿಸಿ ನಮ್ಮ ಆಸ್ಪತ್ರೆಯಲ್ಲಿ ದೊರೆಯುವ ಸೇವೆಗಳ ಬಗ್ಗೆ ತಿಳಿಸಿದರು.
ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಶ್ರೀ ನವೀಣ ಎನ್, ಅವರು ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡುತ್ತಾ ತಾಯಿಯ ಕರುಳಬಳ್ಳಿಯಿಂದ ಬೆಳೆದ ಮಗುವನ್ನು ಒಬ್ಬ ಪ್ರಜೆಯಾಗಿ ರೂಪಿಸುವಲ್ಲಿ ತಾಯಿಯ ಪಾತ್ರವು ಮಹತ್ವದ್ದು, ತಾಯಿಯ ತ್ಯಾಗ, ಪ್ರೀತಿ, ಮಮತೆಯನ್ನು ನೆನೆಯುವದಕ್ಕಾಗಿ ಪ್ರತಿ ವರ್ಷ ಮೇ 10ನೇ ದಿನಾಂಕದಂದು ವಿಶ್ವದೆಲ್ಲೆಡೆ ವಿಶ್ವ ತಾಯಂದಿರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ತಾಯಿಯ ಮಮತೆಯನ್ನು ಪಡೆದು ಅವರಿಗೆ ಗೌರವ ಸಲ್ಲಿಸಲು ಸಿಕ್ಕಿರುವ ಈ ಅವಕಾಶಕ್ಕೆ ಚಿರ ಋಣಿ ಎಂದು ಎಲ್ಲ ತಾಯಂದಿರಿಗೆ ತಾಯಿಯಂದರ ದಿನಾಚರಣೆಯ ಶುಬಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ್ದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸಂಜಯ ಕಂಬಾರ ಅವರು ಮಾತನಾಡುತ್ತ ಒಬ್ಬ ವ್ಯಕ್ತಿಯ ಜೀವನ ರೂಪಿಸುವಲ್ಲಿ ತಾಯಿ ತಂದೆಯರ ಪಾತ್ರ ನಗಣ್ಯ. ತಾಯ್ತನ ಅಂದರೆ ಮಮತೆ, ಕರುಣೆ, ಪ್ರೀತಿ ಮತ್ತು ಜವಾಬ್ದಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಸ್.ಕಡ್ಡಿ ಮಾತನಾಡುತ್ತ, ತಾಯಂದಿರಲ್ಲಿ ಇರುವ ತಪ್ಪು ಕಲ್ಪನೆ ಹಾಗೂ ಮೂಢನಂಬಿಕೆಯ ಬಗ್ಗೆ ವಿವರಿಸಿದರು, ನವಜಾತ ಶಿಶುಗಳಿಗೆ ಕಪ್ಪು ಕಾಡಿಗೆ ಹಾಕುವುದು ಹಲವಾರು ಕುಟುಂಬಗಳಿಗಲ್ಲಿ ರೂಢಿ ಇದ್ದು ಆದರೆ ಬಹುತೇಕ ಕಪ್ಪು ಕಾಡಿಗೆಗಳಲ್ಲಿ ಹಾನಿಕಾರಕ ಪದಾರ್ಥಗಳು, ಧೂಳು ಇರಬಹುದು ಆದ್ದರಿಂದ ಅದನ್ನು ತಪ್ಪಿಸಿ ಆರೋಗ್ಯಕರ ಆರೈಕೆ ಕ್ರಮಗಳನ್ನು ಅನುಸರಿಸಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಯಂದಿರಿಗೆ ಉಚಿತವಾಗಿ ಆರೊಗ್ಯ ಕಾಳಜಿ ಕಿಟ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಯುಎಸ್‌ಎಂ ಕೆಎಲ್‌ಇ ನಿರ್ದೇಶಕರಾದ ಡಾ. ಹೆಚ್. ಬಿ. ರಾಜಶೇಖರ ಅವರು ಎಲ್ಲಾ ತಾಯಂದಿರಿಗೂ ತಾಯಂದಿರ ದಿನದ ಶುಭಾಶಯಗಳನ್ನು ತಿಳಿಸಿ, ತಾಯಿಯ ಪ್ರೀತಿ, ತ್ಯಾಗ ಮತ್ತು ಸಮಾಜ ನಿರ್ಮಾಣದಲ್ಲಿ ತಾಯಿಯ ಮಹತ್ವವನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ವೈದ್ಯರಾದ. ಡಾ. ಗೀತಾಂಜಲಿ ತೋಟಗಿ ಡಾ. ಕೆ ಎನ್ ಹೋಳಿಕಟ್ಟಿ, ಡಾ. ಪ್ರೀಯಾಂಕಾ, ಡಾ. ಸಯ್ಯದಾ ಹಾಗೂ ಚಿಕ್ಕ ಮಕ್ಕಳ ವಿಭಾಗದ ವೈದ್ಯರಾದ ಡಾ. ಸೌಮ್ಯ ವೆರನೇಕರ, ಡಾ.ಯೋಗೇಶ ರಾವಳ ಸೇರಿದಂತೆ ಉಳಿದ ವೈದ್ಯಕೀಯ ವೈದ್ಯಕೀಯೇತರ ಸಿಬ್ಬಂದಿ, ಗರ್ಭಿಣಿಯರು, ತಾಯಂದಿರು ಮತ್ತು ಪೋಷಕರು ಬಾಗವಹಿಸಿದ್ದರು. ಕಾರ್ಯಕ್ರಮವನ್ನು ಪ್ರಭಾವತಿ ತೇಗೂರ ನಿರೂಪಿಸಿ ವಂದಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 