ಶಿರಹಟ್ಟಿ

ತಾಯಂದಿರ ಪಾದಪೂಜೆಯಿಂದ ಮಕ್ಕಳಲ್ಲಿ ಮಾತೃಪ್ರೇಮ ವೃದ್ಧಿಸುತ್ತದೆ: ಶರಣಬಸವ ಪಾಟೀಲ

ತಾಯಂದಿರ ಪಾದಪೂಜೆಯಿಂದ ಮಕ್ಕಳಲ್ಲಿ ಮಾತೃಪ್ರೇಮ ವೃದ್ಧಿಸುತ್ತದೆ: ಶರಣಬಸವ ಪಾಟೀಲ

ಶಿರಹಟ್ಟಿ 06:  ವಿದ್ಯಾರ್ಥಿಗಳು ಪಠ್ಯಕ್ರಮದ ಅಭ್ಯಾಸದೊಂದಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕು. ಅಕ್ಷರದೊಂದಿಗೆ ಉತ್ತಮ ಸಂಸ್ಕಾರವೂ ದೊರೆಯಬೇಕು ಎಂದು ಶಿರಹಟ್ಟಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸನಗೌಡ ಪಾಟೀಲ ಹೇಳಿದರು. 

ಅವರು ತಾಲೂಕಿನ ಸಾಸರವಾಡ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಯಂದಿರ ಸಭೆ ಹಾಗೂ ತಾಯಂದಿರ ಪಾದ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಲಕರು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿಕೊಂಡು ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳ ಶಿಕ್ಷಣಕ್ಕೆ ಬಡತನ ಅಡ್ಡಿಯಾಗಬಾರದು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ತಂದೆ-ತಾಯಂದಿರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಪ್ರತಿಜ್ಞೆ ಕೂಡ ಮಾಡಿದರು. 

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮೃತ್ಯುಂಜಯ ಸೂರಣಗಿಮಠ  ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಸಿ.ಆರ್‌.ಪಿ ಸತೀಶ ಪಶುಪತಿಹಾಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತಾಯಂದಿರ ಪಾತ್ರ, ತಾಯಂದಿರು ಶಾಲೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಎಸ್‌.ಡಿ.ಎಮ್‌.ಸಿ. ಅಧ್ಯಕ್ಷರಾದ ಬಾಲಚಂದ್ರಸ್ವಾಮಿ ಕುಲಕರ್ಣಿ ಅವರು ಅಧ್ಯಕ್ಷೀಯ ನುಡಿಗಳನ್ನು ನುಡಿದರು.  

ಶಾಲೆಯ 1ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಗುರುಗಳಾದ ಶರಣಬಸವಗೌಡ ಪಾಟೀಲ ತಮ್ಮ ಸ್ವಂತ ಖರ್ಚಿನಲ್ಲಿ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರೇಖಾ ಅಳವಂಡಿ, ಸುಶೀಲಮ್ಮ ಛಬ್ಬಿ,  ಚನ್ನವೀರಸ್ವಾಮಿ ಕುಲಕರ್ಣಿ, ಸುರೇಶ ಛಬ್ಬಿ, ಮಾರುತಿ ಯರಲಕಟ್ಟಿ, ನಾಗನಗೌಡ ಕೋಟಿ, ಶಿವು ಹರಿಜನ, ವಿಜಯಲಕ್ಷ್ಮಿ ಪಾಟೀಲ, ಅಕ್ಷತಾ ತಂಬ್ರಳ್ಳಿ,  ಕುಸುಮಾ ಶಂಕಿನದಾಸರ, ವಿನಾಯಕ ಕೂಡ್ಲಮಠ, ಎಸ್‌. ಡಿ. ಎಮ್‌. ಸಿ. ಸದಸ್ಯರು, ಅಡುಗೆ ಸಹಾಯಕರು, ತಾಯಂದಿರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ