ಮೋದಿ ಸರ್ಕಾರಕ್ಕೆ 12 ವರ್ಷ: ನಾನಾ ಕಾರ್ಯಕ್ರಮ
Modi government marks 12 years: Various programs
ಬೆಳಗಾವಿ 31: ರವಿವಾರದಂದು ನಗರದ ಧರ್ಮನಾಥ ಭವನ ಹತ್ತಿರವಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಜಿರವರ ದೂರದರ್ಶಿ ನಾಯಕತ್ವದಲ್ಲಿ ಎನ್ಡಿಎ ಸರ್ಕಾರ ಐತಿಹಾಸಿಕ ಸಾಧನೆಗಳೊಂದಿಗೆ 2026ರ ಜೂನ್ 7 ರಂದು 12 ವರ್ಷಗಳನ್ನು ಪೂರೈಸಲಿದೆ "12 ವರ್ಷಗಳ ವಿಶ್ವಾಸ, ಅಭಿವೃದ್ಧಿ ಮತ್ತು ಜನಕಲ್ಯಾಣ"ದ ಸಂಭ್ರಮಾಚರಣೆಯ ನಿಟ್ಟಿನಲ್ಲಿ ಜೂನ್ 5, ರಿಂದ ಜೂನ್21, ರವರೆಗೆ ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಪರಿಸರ ದಿನಾಚರಣೆ ಅಂಗವಾಗಿ ಶಾಲಾ-ಕಾಲೇಜುಗಳ ಆವರಣದಲ್ಲಿ "ತಾಯಿಯ ಹೆಸರಲ್ಲಿ ಒಂದು ಗಿಡ", ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಬಿರ ಆಯೋಜನೆ, ಮಾಧ್ಯಮ ಸಂವಾದ, ವಿಶೇಷ ಸಂಪರ್ಕ ಅಭಿಯಾನ, ಕಲ್ಯಾಣ ಶಿಬಿರ, ಸಭಾಂಗಣದ ಸಭೆಗಳು, ಮೋದಿ ಸರ್ಕಾರದ ಸಾಧನೆಗಳ ಪ್ರದರ್ಶಿನಿ,ಸಾವಯವ ಕೃಷಿ ಕಾರ್ಯಾಗಾರಗಳು ಹೀಗೆ ನಾನಾ ಕಾರ್ಯಕ್ರಮಗಳು ನಡೆಯಲಿದ್ದು ರಾಜ್ಯದ ಪಕ್ಷದ ಪ್ರಮುಖ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಅಭಿಯಾನದ ಜಿಲ್ಲಾ ಸಂಚಾಲಕರಾದ ಶಂಕರ ಹುರಕಡ್ಲಿ, ಶ್ರೀಕಾಂತ ಇಟಗಿ, ನಿಂಗಪ್ಪ ಚೌಡಣ್ಣವರ,ಮಂಜುನಾಥ ತೊಟ್ಟಲಮನಿ,ಈರಣ್ಣ ಚಂದರಗಿ, ಪ್ರಮೋದ ನುಗ್ಗಾನಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 