ಅಣುಕು ಪ್ರದರ್ಶನ: ವಿದ್ಯಾರ್ಥಿಗಳಿಗೆ ಅಗ್ನಿ ಅನಾಹುತಗಳ ಮಾಹಿತಿ
ಮೂಡಲಗಿ 12: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಶಿವಭೋದರಂಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗೋಕಾಕದ ಅಗ್ನಿ ಶಾಮಕ ದಳದವರಿಂದ ವಿದ್ಯಾರ್ಥಿಗಳಿಗೆ ಅಗ್ನಿ ಅನಾಹುತಗಳ ಬಗ್ಗೆ ಅಣುಕು ಪ್ರದರ್ಶನದ ಮೂಲಕ ಮಾಹಿತಿಯನ್ನು ನೀಡಿದರು
ಗೋಕಾಕ ಅಗ್ನಿ ಶಾಮಕ ದಳದ ಅಧಿಕಾರಿ ಎಮ್.ಎಮ್.ಹದ್ಲಿ ಮಾತನಾಡಿ, ಅಗ್ನಿ ಅನಾಹುತಗಳು ಸಂಭವಿಸಿದಾಗ ನಿಖರವಾದ ಮಾಹಿತಿ ಕೊರತೆಯಿಂದಾಗಿ ಬಹಳಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ. ಬೆಂಕಿ ದುರಂತ ಸಂಭವಿಸಿದಾಗ ಅಗ್ನಿ ಶಾಮಕ ಠಾಣೆಗೆ ಕರೆ ಮಾಡುವವರು ಘಟನೆ ಸಂಭವಿಸಿರುವ ಸ್ಥಳ, ಅಲ್ಲಿಗೆ ಬರಬೇಕಾದ ಮಾರ್ಗ ಕುರಿತು ಸರಿಯಾದ ಮಾಹಿತಿ ನೀಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನ ತಲುಪುವುದು ತಡವಾಗುತ್ತದೆ. ದುರಂತದ ಬಗ್ಗೆ ಸರಿಯಾದ ಮಾಹಿತಿ ನೀಡುವುದರ ಜತೆಗೆ ಬೆಂಕಿ ನಂದಿಸುವ ಪ್ರಾಥಮಿಕ ಹಂತದ ಪ್ರಯತ್ನಗಳನ್ನು ಕೈಗೊಳ್ಳುವುದರಿಂದ ಪ್ರಾಣ, ಆಸ್ತಿ ಹಾನಿಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಸಿಲಿಂಡರ್ಗೆ ಬೆಂಕಿ ಹತ್ತಿದಾಗ ಬೆಂಕಿಯನ್ನು ಆಮ್ಲಜನಕ ತಡೆಯುವುದರ ಮೂಲಕ ಬಕೆಟ್ ಮತ್ತು ಒದ್ದೆ ಬಟ್ಟೆಗಳ ಮೂಲಕ ಬೆಂಕಿಯನ್ನು ಆರಿಸುವುದನ್ನು ಪ್ರಾಯೋಗಿಕವಾಗಿ ಪ್ರದರ್ಶನ ಮಾಡುವುದರ ಮೂಲಕ ತಿಳಿಸಿದರು. ಮತ್ತು ಮನೆ ಬಳಕೆಯ ಸಿಲಿಂಡರ್ ಗ್ಯಾಸ್ ನಿಂದ ಆಗುವ ಅನಾಹುತಗಳನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದರು.
ಇಲಾಖೆಯ ಸಿಬ್ಬಂದಿಗಳಾದ ಎಮ್.ಎಮ್. ಹದ್ಲಿ, ಸಿ.ಎಸ್.ಚಿಪ್ಪಲಕಟ್ಟಿ, ಆರ್.ಎಸ್.ಹಳಿಗೌಡರ, ಆರ್.ಬಿ.ಪೂಜಾರಟ್ಟಿ, ಜಿ.ವ್ಹಿ.ಬನಶಂಕರಿಯವರು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಪ್ರದರ್ಶನ ನೀಡುವುದರ ಮೂಲಕ ಕಟ್ಟಡಗಳಿಗೆ ಮತ್ತು ಬನವಿಗೆ ಬೆಂಕಿ, ಪೆಟ್ರೋಲ್ ಬಂಕ್ಗೆ ಬೆಂಕಿ, ಹೊಲ ಗದ್ದೆಗಳಿಗೆ ಬೆಂಕಿ, ಮತ್ತು ಕಟ್ಟಡ ಮೇಲ್ಚಾವಣಿಗಳಿಗೆ ಬೆಂಕಿ ತಗುಲಿದಾಗ ಅದನ್ನು ಹೇಗೆ ನಂದಿಸಬೇಕೆಂದು ಅಗ್ನಿ ಶಾಮಕ ವಾಹನದ ಮೂಲಕ ಪ್ರಾಯೋಗಿಕವಾಗಿ ಅಣುಕು ಪ್ರದರ್ಶನ ಮಾಡುವುದರ ಮೂಲಕ ವಿದ್ಯಾರ್ಥಿ ಮತ್ತು ಉಪನ್ಯಾಸಕರಿಗೆ ಅಗ್ನಿ ಅನಾಹುತಗಳ ಬಗ್ಗೆ ಅರಿವು ಮೂಡಿಸಿದರು.
ಕಾಲೇಜಿನ ಪ್ರಾಚಾರ್ಯ ಎಮ್.ಎಸ್.ಪಾಟೀಲ ಮಾತನಾಡಿ, ಅಗ್ನಿ ಅನಾಹುತದ ಸಂರಕ್ಷಣಾ ಕ್ರಮಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳವುದು ಅವಶ್ಯ ಎಂದರು.
ಕಾಲೇಜಿನ ಉಪನ್ಯಾಸಕರಾದ ಬಿ.ಜಿ.ಗಡಾದ, ಎಸ್.ಕೆ.ಹೀರೆಮಠ, ಡಾ.ಆರ್.ಪಿ.ಬಿರಾದರ, ಹೆ.ಡಿ.ಚಂದರಗಿ, ಹೆ.ಎಮ್.ಹತ್ತರಕಿ, ಎಸ್.ಕೆ.ಮಠದ, ಎಸ್.ಎಲ್.ಶಿಡ್ಲೆಪ್ಪಗೋಳ, ಆರ್.ಎಸ್.ಹಾದಿಮನಿ ಮತ್ತು ಎನ್.ಪಿ.ಗುಳ್ಳೆದಗುಡ, ಸಿ.ಜಿ.ಭಸ್ಮೆ, ಸುಬಾಸ ಕಾನಪ್ಪಗೋಳ, ಲವಾ ಶೆಕ್ಕಿ ಮತ್ತಿತರರು ಇದ್ದರು.