ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಪತ್ತೆ
Mobile phone found in Karwar District Jail
ಕಾರವಾರ 15: ಇಲ್ಲಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಬಳಿ ಮೊಬೈಲ್ ಪತ್ತೆಯಾಗಿವೆ. ಏಳು ಮೊಬೈಲ್‌ಗಳನ್ನು ಕಾರವಾರ ಜೈಲು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೈಲು ಅಧಿಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ನೇತೃತ್ವದಲ್ಲಿ ಸೋಮವಾರ ಕಾರ್ಯಾಚರಣೆ ಮಾಡುವ ವೇಳೆ ಮೊಬೈಲ್ ಪತ್ತೆಯಾದವು.
ಇದೇ ಡಿಸೆಂಬರ್ ಮೊದಲ ವಾರದಲ್ಲಿ ಜೈಲಿನಲ್ಲಿ ಕೈದಿಗಳಿಂದ ಗಲಾಟೆ ನಡೆದಿತ್ತು. ಗಾಂಜಾ ಕೊಡಲಿಲ್ಲ ಎನ್ನುವ ಕಾರಣಕ್ಕೆ ಮಂಗಳೂರು ಜೈಲ್ ನಿಂದ ವರ್ಗಾವಣೆಯಾಗಿ ಬಂದಿದ್ದ ನಿಹಾಲ್ ಮತ್ತು ಅಹಮ್ಮದ್ ,ಮೂವರು ಜೈಲು ಸಿಬ್ಬಂದಿಗಳ ಮೇಲೆ ಕೈದಿಗಳು ದಾಳಿ ಮಾಡಿದ್ದರು. ಮತ್ತೊಂದು ಪ್ರಕರಣದಲ್ಲಿ ಜೈಲಿನ ಸಭಾ ಭವನದಲ್ಲಿದ್ದ ಟಿವಿಯನ್ನ ಒಡೆದುಹಾಕಿದ್ದರು. ಮಂಗಳೂರು ಮೂಲದ ಮೂವರು ವಿಚಾರಣಾಧೀನ ಖೈದಿಗಳು ಜೈಲಿನಲ್ಲಿ ಗಲಾಟೆ ಎಬ್ಬಿಸಿದ್ದರು.
ಈ ಹಿನ್ನಲೆಯಲ್ಲಿ ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದರು. ತಪಾಸಣೆ ವೇಳೆ ಏಳು ಮೊಬೈಲ್ ಹಾಗೂ ಚಾರ್ಜರ್ ಗಳು ಪತ್ತೆಯಾಗಿವೆ. ಈ ಸಂಭಂದ ಕಾರವಾರ ನಗರ ಠಾಣೆಯಲ್ಲಿ ಜೈಲು ಅಧಿಕಾರಿ ದೂರು ನೀಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 