ಮಿಶ್ರತಳಿ, ದೇಸಿ ಜಾನುವಾರು ಕರುಗಳ ಪ್ರದರ್ಶನ
ಮೂಡಲಗಿ 26: ರೈತರು ಕರುಗಳನ್ನು ಹೆಚ್ಚಾಗಿ ಸಾಕಿ ಸರಿಯಾಗಿ ಆರೈಕೆ ಮಾಡುವದರಿಂದ ಕರುಗಳು ಬೆಳೆದು ದೊಡ್ಡವು ಆದಮೇಲೆ ಹೆಚ್ಚು ಲಾಭವನ್ನು ನೀಡುತ್ತವೆ ಎಂದು ತಾಲೂಕಾ ಸಹಾಯಕ ನಿರ್ದೇಶಕ ಎಮ್ ಬಿ ವಿಭೂತಿ ಹೇಳಿದರು.
ಅವರು ಹಳ್ಳೂರ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಮಿಶ್ರತಳಿ ಹಾಗೂ ದೇಸಿ ಜಾನುವಾರು ಕರುಗಳ ಪ್ರದರ್ಶನ ಸಭೆಯಲ್ಲಿ ಮಾತನಾಡಿ ರೈತರಿಂದ ಉತ್ತಮ ಸ್ಪಂದನೆ ದೊರೆತು ಬಹಳಷ್ಟು ಸಂಖ್ಯೆಯಲ್ಲಿ ಕರುಗಳು ಸೇರಿದ್ದವು. ಉತ್ತಮ ತಳಿಯ ಆಯ್ದ ಕರುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಹಳ್ಳೂರು ಪಶುವೈದ್ಯಾಧಿಕಾರಿ ಡಾ. ವಿಶ್ವನಾಥ್ ಹುಕ್ಕೇರಿ, ಡಾ. ಬಿ. ಎಸ್. ಗೌಡರ್, ಡಾ. ಶಿವಾನಂದ ಸವಸುದ್ದಿ, ಡಾ. ಪ್ರಶಾಂತ್ ಕುರುಬೇಟ್ ರಾಮಯ್ಯ್ ಮಠಪತಿ, ಬಸಪ್ಪ ಮಾಲಗಾರ, ಹಣಮಂತ ಸಪ್ತಸಾಗರ, ಅಶೋಕ ಶಿವಾಪೂರ, ಎಲ್ಲಪ್ಪ ಪೂಜೇರಿ, ಭೀಮಪ್ಪ ನಿಡೋಣಿ ಸೇರಿದಂತೆ ರೈತ ಬಾಂಧವರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿದ ರೈತರಿಗೆ ಪ್ರೋತ್ಸಾಹಕಾರಿಯಾಗಿ ಬಹುಮಾನ ವಿತರಿಸಲಾಯಿತು.