ಯುವಕ ಕಾಣೆ ..
ಲೋಕದರ್ಶನ ವರದಿ
ಮೂಡಲಗಿ 20: ತಾಲೂಕಿನ ನಾಗನೂರ ಗ್ರಾಮದ ವಿಠ್ಠಲ ಕಲ್ಲಪ್ಪ ಸುಣಧೋಳಿ(21) ಇದೇ ನ. 14ರಂದು ಬೆಳಿಗ್ಗೆ 6ಗಂಟೆ ಸುಮಾರಿಗೆ ಬಹಿರ್ದೆಸೆಗೆ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ಆತನ ಮಾವ ಲಕ್ಷ್ಮಣ ವಿಠ್ಠಲ ಹೆಬ್ಬಾಳ ಮೂಡಲಗಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
5 ಫೂಟ್ 05ಇಂಚ ಎತ್ತರ, ಸಾಧಾರಣ ಮೈಕಟ್ಟು, ಸಾದಾ ಕಪ್ಪು ಮೈಬಣ್ಣ, ದುಂಡು ಮುಖ, ಹೊಂದಿದ್ದು, ಕನ್ನಡ ಮಾತನಾಡುತ್ತಾನೆ. ಈತನನ್ನು ಕಂಡವರು ಆಥವಾ ಈತನ ಬಗ್ಗೆ ಮಾಹಿತಿ ಸಿಕ್ಕವರು ಮೂಡಲಗಿ ಪೋಲಿಸ್ ಠಾಣೆ 08334-251333, ಸಿ.ಪಿ.ಆಯ್. 08334-251499 ಸಂಪರ್ಕಿಸಲು ಕೋರಿದ್ದಾರೆ.