ಮಹಿಳೆ ಕಾಣೆ
ಮೂಡಲಗಿ 05: ತಾಲೂಕಿನ ನಾಗನೂರ ಗ್ರಾಮದ ಗಂಗವ್ವ ಅವನಪ್ಪ ಹುಲಕುಂದ (40) ಜುಲೈ 26ರಂದು ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ಅದೆ ಗ್ರಾಮದ ಸಿಳನವರ ಎಂಬುವವರ ಮನೆಗೆ ಹೋಗಿ ಬರುವುದಾಗಿ ತಿಳಿಸಿ, ಮನೆಯಿಂದ ಎಲ್ಲಿಯೋ ಹೋಗಿ ಮರಳಿ ಬಾರದೆ ಕಾಣೆಯಾಗಿದ್ದಾಳೆ ಎಂದು ಕಾಣೆಯಾದ ಮಹಿಳೆಯ ಪತಿ ಅವನಪ್ಪ ಹುಲಕುಂದ ಮೂಡಲಗಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಪೋಲಿಸ್ ಪ್ರಕಟಣೆ ತಿಳಿಸಿದೆ.
ಕಾಣೆಯಾದ ಮಹಿಳೆಯ ಎತ್ತರ 5ಅಡಿ 5 ಇಂಚ ಎತ್ತರ ಸಾಧಾರನ ಮೈಕಟ್ಟು, ದುಂಡು ಮುಖ ಗೋದಿ ಬಣ್ಣ ಹೊಂದಿದ್ದು ಮನೆಯಿಂದ ಹೋಗುವಾಗ ನೀಲಿ ಬಣ್ಣದ ಸೀರೆ ಮತ್ತು ಕಪ್ಪು ಬಣ್ಣದ ಬ್ಲೌಜ ಧರಿಸಿದ್ದು ಕನ್ನಡ ಮಾತನಾಡುತ್ತಾಳೆ ಇವಳ ಬಗ್ಗೆ ಮಾಹಿತಿ ತಿಳಿದವರು ಮೂಡಲಗಿ ಪೋಲಿಸ ಠಾಣೆ 08334-251333 ಅಥವಾ ಪೋಲಿಸ್ ನಿಂತ್ರಣ ಕೋಣೆಗೆ ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.