ಹುಕ್ಕೇರಿ

ಹತ್ತರಗಿ ಹರಿ ಮಂದಿರಕ್ಕೆ ಸಚಿವ ಸತೀಶ ಭೇಟಿ: ಸನ್ಮಾನ

ಹತ್ತರಗಿ ಹರಿ ಮಂದಿರಕ್ಕೆ ಸಚಿವ ಸತೀಶ ಭೇಟಿ: ಸನ್ಮಾನ

ಲೋಕದರ್ಶನ ವರದಿ

ಯಮಕನಮರಡಿ 14: ಸಮೀಪದ ಹತ್ತರಗಿ ಹರಿ ಮಂದಿರಕ್ಕೆ ರಾಜ್ಯ ಲೋಕೋಪಯೋಗಿ ಸಚಿವರು ದಿ. 14 ರಂದು ಭೇಟಿ ನೀಡಿದಾಗ ಶ್ರೀಗಳು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು ಶ್ರೀಮಠದ ಅಭಿವೃದ್ಧಿ ಕಾರ್ಯಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಶ್ರೀಮಠವು ಪ್ರಾರಂಭಿಸಿರುವ ಸಂಸ್ಕೃತ ಪಾಠಶಾಲೆ ಕುರಿತು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಈ ಶಾಲೆಗೆ ಬೇಕಾಗುವ ಸರಕಾರದ ಎಲ್ಲ ಅನುಕೂಲತೆಗಳನ್ನು ಮಾಡಿಕೊಡಲಾಗುವುದು. ಶ್ರೀಮಠದ ಸುತ್ತಮುತ್ತಲಿನ ಎಲ್ಲ ರಸ್ತೆಗಳನ್ನು ಸಿ.ಸಿ. ರಸ್ತೆಯನ್ನಾಗಿ ಮಾಡಲು ಸಚಿವರು ಸೂಚಿಸಿದರು. ಅಲ್ಲದೇ ಇಲ್ಲಿ ಸಂಪೂರ್ಣ ಹೈಮಾಸ್ಕ್ ದೀಪದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿದರು. 

ಆನಂದ ಮಹಾರಾಜ ಗೋಸಾವಿ ಹಾಗೂ ಮಹಾದೇವ ಪಟೋಳಿ, ರವೀಂದ್ರ ಜಿಂಡ್ರಾಳಿ, ಸೇರಿದಂತೆ ಅಪಾರ ಸಚಿವರ ಅಭಿಮಾನಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ