ಅಂತರರಾಷ್ಟ್ರೀಯ

ಉದ್ಯೋಗಿಗಳಿಗೆ ಕೊರೊನಾ ಬೋನಸ್ ಘೋಷಿಸಿದ ಮೈಕ್ರೋಸಾಫ್ಟ್ .... !

ಉದ್ಯೋಗಿಗಳಿಗೆ  ಕೊರೊನಾ  ಬೋನಸ್  ಘೋಷಿಸಿದ ಮೈಕ್ರೋಸಾಫ್ಟ್ .... !

ವಾಷಿಂಗ್ಟನ್,  ಜುಲೈ 9: ಪ್ರಮುಖ  ಟೆಕ್ ದೈತ್ಯ  ಮೈಕ್ರೋಸಾಫ್ಟ್  ಮಹತ್ವದ   ನಿರ್ಧಾರ ಕೈಗೊಂಡಿದೆ.  ಅಮೆರಿಕಾ ಸೇರಿದಂತೆ   ಜಗತ್ತಿನೆಲ್ಲೆಡೆಯಿರುವ ತನ್ನ ಉದ್ಯೋಗಿಗಳಿಗೆ ತಲಾ  1,500  ಡಾಲರ್‌  (ರೂ. 1.12 ಲಕ್ಷ)   ಸಿಂಗಲ್‌  ಟೈಮ್‌  ಬೋನಸ್ ಘೋಷಿಸಿದೆ. ಸಾಂಕ್ರಾಮಿಕ ರೋಗದಿಂದಾಗಿ  ಸಂಕಷ್ಟದಿಂದ    ಆರ್ಥಿಕ ವರ್ಷ ಮುಗಿದ  ಹಿನ್ನೆಲೆಯಲ್ಲಿ ತನ್ನ ಉದ್ಯೋಗಿಗಳ   ಕಠಿಣ  ಪರಿಶ್ರಮವನ್ನು ಗುರುತಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ   ಎಂದು ಕಂಪನಿ ತಿಳಿಸಿದೆ. 

ಕಾರ್ಪೊರೇಟ್ 'ಉಪಾಧ್ಯಕ್ಷ'  ಮಟ್ಟಕ್ಕಿಂತ ಕೆಳಗಿರುವ ಎಲ್ಲಾ ಉದ್ಯೋಗಿಗಳಿಗೆ ಬೋನಸ್ ಅನ್ವಯಿಸುತ್ತದೆ.  ಮಾರ್ಚ್ 31, 2021 ರ ಮುನ್ನ  ಇರುವ   ಎಲ್ಲಾ ಉದ್ಯೋಗಿಗಳಿಗೆ  ಈ ಕೊಡುಗೆ ನೀಡಲಾಗುವುದು ಎಂದು ತಿಳಿಸಿದೆ.

ವಿಶ್ವಾದ್ಯಂತ ಮೈಕ್ರೋಸಾಫ್ಟ್  1,75,508 ಉದ್ಯೋಗಿಗಳನ್ನು ಹೊಂದಿದೆ.  ಇವರೆಲ್ಲರ   ಬೋನಸ್‌ಗಳಿಗಾಗಿ  ಕಂಪನಿ  ಹೆಚ್ಚುವರಿ  200 ಮಿಲಿಯನ್ ಡಾಲರ್‌  ಹಂಚಿಕೆ  ಮಾಡಿದೆ.  ಆದರೆ,  ಕಂಪನಿಯ ಅಂಗಸಂಸ್ಥೆಗಳಾದ  ಲಿಂಕ್ಡ್‌ಇನ್, ಗಿಟ್‌ಹಬ್,  ಜೆನಿಮ್ಯಾಕ್ಸ್‌ನ  ಉದ್ಯೋಗಿಗಳು   ಮಾತ್ರ ಬೋನಸ್‌ಗೆ ಅರ್ಹರಲ್ಲ. ಫೇಸ್‌ಬುಕ್ ತನ್ನ 45,000 ಉದ್ಯೋಗಿಗಳಿಗೆ  1,000 ಡಾಲರ್‌  ಬೋನಸ್ ಘೋಷಿಸಿದೆ. ಹಾಲಿಡೇ ಬೋನಸ್ ಅಡಿಯಲ್ಲಿ ಅಮೆಜಾನ್  300 ಡಾಲರ್‌ ಘೋಷಿಸಿದೆ.

ಸುದ್ದಿ ಓದಿ