ಹುಕ್ಕೇರಿ

ಹಿಡಕಲ್ ಡ್ಯಾಂನಲ್ಲಿ ಶಕ್ತಿ ಸದನ ಕೇಂದ್ರದಿಂದ ರಾಷ್ಟ್ರೇ​‍್ರಮದ ಸಂದೇಶ

ಹಿಡಕಲ್ ಡ್ಯಾಂನಲ್ಲಿ ಶಕ್ತಿ ಸದನ ಕೇಂದ್ರದಿಂದ ರಾಷ್ಟ್ರೇ​‍್ರಮದ ಸಂದೇಶ

ಹುಕ್ಕೇರಿ 14 : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂನಲ್ಲಿರುವ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ವತಿಯಿಂದ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕಿರಣ್ ಚೌಗಲಾ ಮಾತನಾಡಿ, “ಹರ್ ಘರ್ ತಿರಂಗಾ ಅಭಿಯಾನವು ಪ್ರತಿಯೊಬ್ಬ ಭಾರತೀಯನಲ್ಲೂ ರಾಷ್ಟ್ರೇ​‍್ರಮ, ಏಕತೆ ಹಾಗೂ ದೇಶದ ಬಗ್ಗೆ ಹೆಮ್ಮೆಯ ಭಾವನೆ ಮೂಡಿಸುವ ಮಹತ್ವದ ಅಭಿಯಾನವಾಗಿದೆ. ಸ್ವಾತಂತ್ರ್ಯವೆಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಪ್ರತಿಯೊಬ್ಬ ಮಹಿಳೆಯೂ ಹಿಂಸೆ, ಶೋಷಣೆ, ಭಯ ಹಾಗೂ ಅವಲಂಬನೆಯಿಂದ ಮುಕ್ತಳಾಗಿ ಸ್ವಾಭಿಮಾನ ಮತ್ತು ಸ್ವಾವಲಂಬನೆಯೊಂದಿಗೆ ಬದುಕುವಂತಾಗಬೇಕು. ಮಹಿಳೆಯರ ಸಬಲೀಕರಣದಿಂದಲೇ ಸದೃಢ ಹಾಗೂ ಸಶಕ್ತ ಭಾರತ ನಿರ್ಮಾಣ ಸಾಧ್ಯ,” ಎಂದು ಹೇಳಿದರು.  

ಶಕ್ತಿ ಸದನದಲ್ಲಿ ಆಶ್ರಯ ಪಡೆದಿರುವ ಮಹಿಳೆಯರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ, ಸ್ವಾವಲಂಬನೆ ಹಾಗೂ ರಾಷ್ಟ್ರೇ​‍್ರಮದ ಮನೋಭಾವ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳೆಯರು ತ್ರಿವರ್ಣ ಧ್ವಜಗಳನ್ನು ಹಿಡಿದು “ಹರ್ ಘರ್ ತಿರಂಗಾ”, “ವಂದೇ ಮಾತರಂ” ಹಾಗೂ “ಭಾರತ್ ಮಾತಾ ಕೀ ಜೈ” ಘೋಷಣೆಗಳನ್ನು ಕೂಗುವ ಮೂಲಕ ರಾಷ್ಟ್ರೇ​‍್ರಮ ವ್ಯಕ್ತಪಡಿಸಿದರು.  

ಕಾರ್ಯಕ್ರಮದಲ್ಲಿ ಪೂಜಾ ಚೌಗಲಾ, ಹೇಮಲತಾ ಘರಾಣೆ ಹಾಗೂ ಮಂದಾಕಿನಿ ಹಟ್ಟಿ ಉಪಸ್ಥಿತರಿದ್ದರು. ಶಕ್ತಿ ಸದನದ ಸಿಬ್ಬಂದಿ ಹಾಗೂ ಕೇಂದ್ರದ ನಿವಾಸಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು. 


ಸುದ್ದಿ ಓದಿ