ಉದ್ಧವ್ ಠಾಕ್ರೆ ಭೇಟಿಯಾದ ಬೆಳಗಾವಿ ಝಾಪಾ ಮುಖಂಡರು : ಎಮ್ ಇಎಸ್ ನಿಯೋಗದಲ್ಲಿ ರಮಾಕಾಂತ ಕೊಂಡುಸ್ಕರ ಭಾಗಿ

ಉದ್ಧವ್ ಠಾಕ್ರೆ ಭೇಟಿಯಾದ ಬೆಳಗಾವಿ ಝಾಪಾ ಮುಖಂಡರು : ಎಮ್ ಇಎಸ್ ನಿಯೋಗದಲ್ಲಿ ರಮಾಕಾಂತ ಕೊಂಡುಸ್ಕರ ಭಾಗಿ

ಬೆಳಗಾವಿ : ಠಾಕ್ರೆ ಬಣದ ಶಿವಸೇನಾ ಪಕ್ಷದ ಮುಖ್ಯಸ್ಥ ಉದ್ಧವ್  ಠಾಕ್ರೆ ಅವರನ್ನು ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿಯ ಎಮ್ ಇಎಸ್ ನಿಯೋಗ ಮುಂಬೈನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದೆ.

   ಮುಂಬೈನ ಆಜಾದ್ ಮೈದಾನದಲ್ಲಿ ಮಂಗಳವಾರ ಬೆಳಗಾವಿ ಮರಾಠಿ ಭಾಷಿಕರ ವಿವಿಧ ಬೇಡಿಕೆಗಳಿಗಾಗಿ ಧರಣಿ ಚಳವಳಿ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ಎಮ್ ಇಎಸ್ ನಿಯೋಗ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿ ಮುಂದಿನ ಕ್ರಮದ ಕುರಿತು ಚರ್ಚೆ ನಡೆಸಿದೆ.

   ಆರಂಭದಲ್ಲಿ ಪ್ರಮೋದ ಮುತಾಲಿಕ್ ಅವರ ಶ್ರೀರಾಮ ಸೇನೆಯಲ್ಲಿ  ಗುರುತಿಸಿಕೊಂಡಿದ್ದ ರಮಾಕಾಂತ ಕೊಂಡುಸ್ಕರ ನಂತರದ ದಿನಗಳಲ್ಲಿ ಶ್ರೀರಾಮ ಸೇನೆ ಹಿಂದುಸ್ತಾನ ಸಂಘಟನೆ ಮೂಲಕ ಬೆಳಗಾವಿಯಲ್ಲಿ ಹೋರಾಟ ನಡೆಸುತ್ತಿದ್ದರು. ಆದರೆ ಇದೀಗ ಅವರು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಯೋಗದೊಂದಿಗೆ ತೆರಳಿ ಉದ್ದವ ಠಾಕ್ರೆ ಅವರನ್ನು ಭೇಟಿ ಆಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

    ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಮುಖಂಡ ರಮಾಕಾಂತ್ ಕೊಂಡುಸ್ಕರ್, ಎಮ್ ಇಎಸ್ ಮುಖಂಡರಾದ ಆರ್.ಎಂ.  ಚೌಗುಲೆ, ಮದನ್ ಬಾಮನೆ, ಶಿವಾನಿ ಪಾಟೀಲ್, ಸಾಧನಾ ಪಾಟೀಲ್, ಬಲವಂತ ಶಿಂದೋಲ್ಕರ್, ಸುಹಾಸ್ ಹುದ್ದಾರ್ ಮೊದಲಾದವರು ಮುಂಬೈನ ಮಾತೋಶ್ರೀ ಬಂಗಲೆಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಸುದ್ದಿ ಓದಿ