ಮಾತಾಡ್ ಮಾತಾಡ್ ಕನ್ನಡ ಸ್ಪರ್ಧೆ: ಡಾ. ಸಂಜಯ ಪ್ರಥಮ
ಮೂಡಲಗಿ 31: ಮೂಡಲಗಿ ತಾಲೂಕು ಆಡಳಿತದಿಂದ ಏರಿ್ಡಸಿದ್ದ ಅನ್ಯ ಭಾಷೆ ಪದಗಳನ್ನು ಬಳಸದೇ 4 ನಿಮಿಷ ಕನ್ನಡದಲ್ಲಿ ಮಾತನಾಡುವ ‘ಮಾತಾಡ್ ಮಾತಾಡ್ ಕನ್ನಡ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಡಾ. ಸಂಜಯ ಎ. ಶಿಂಧಿಹಟ್ಟಿ ಪಡೆದುಕೊಂಡಿರುವರು. ದ್ವಿತೀಯ ಸ್ಥಾನವನ್ನು ಅಪೇಕ್ಷಾ ಮುರುಗೇಶ ಕತ್ತಿ ಮತ್ತು ತೃತೀಯ ಸ್ಥಾನವನ್ನು ಶಿವಾಂದ ತೋಣಗಟ್ಟಿ ಪಡೆದುಕೊಂಡಿರುವರು.
ಸ್ಪರ್ಧೆಯಲ್ಲಿ ಒಟ್ಟು 7 ಜನರು ಭಾಗವಹಿಸಿದ್ದರು. ವಿಜೇತರಿಗೆ ನ. 1ರಂದು ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ಸಂಘಟರು ತಿಳಿಸಿದ್ದಾರೆ.