ಆ ದೇಶಗಳ ಯುವತಿಯರ ವಿವಾಹ ಮಾಡಿಕೊಂಡರೆ ಕಠಿಣ ಕ್ರಮ ; ಸೌದಿ ಅರೇಬಿಯಾ
ರಿಯಾದ್ , ಮಾ 20: ಸೌದಿ ಅರೇಬಿಯಾದ ನಾಗರೀಕರು ವಿದೇಶಿ ಯುವತಿಯರನ್ನು ವಿವಾಹ ಮಾಡಿಕೊಳ್ಳುವ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಈ ಪ್ರವೃತ್ತಿಗೆ ತಡೆಯೊಡ್ಡಲು ಸೌದಿ ಆಡಳಿತ ಮುಂದಾಗಿದೆ. ಈ ಭಾಗವಾಗಿ, ತನ್ನ ದೇಶದ ನಾಗರೀಕರು ವಿದೇಶಿ ಮಹಿಳೆಯನ್ನು ವಿವಾಹ ಕೊಳ್ಳಬೇಕೆಂದರೆ ಕೆಲ ಹೆಚ್ಚುವರಿ ನಿಯಮಗಳನ್ನು ಪಾಲಿಸಬೇಕು ಎಂದು ಸೌದಿ ಸರ್ಕಾರ ಘೋಷಿಸಿದೆ.
ನಿಯಮಗಳ ಭಾಗವಾಗಿ, "ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಹಾಗೂ ಮ್ಯಾನ್ಮಾರ್ ದೇಶಗಳಿಗೆ ಸೇರಿದ ಯುವತಿಯರನ್ನು ವಿವಾಹ ಮಾಡಿಕೊಳ್ಳುವಂತಿಲ್ಲ ಎಂದು ಸೌದಿ ಆಡಳಿತ ಆದೇಶ ಜಾರಿಗೊಳಿಸಿದೆ. ಎಂದು ಸೌದಿ ಮಾಧ್ಯಮಗಳು ವರದಿ ಮಾಡಿವೆ ಎಂದು ಪಾಕಿಸ್ತಾನದ “ ಡಾನ್” ಪತ್ರಿಕೆ ವರದಿ ಮಾಡಿದೆ. ಇದು ತೀವ್ರ ವಿವಾದಕ್ಕೆ ಕಾರಣವಾಗುತ್ತಿದೆ.
ಸೌದಿ ಅರೇಬಿಯಾದಲ್ಲಿ ಈ ನಾಲ್ಕು ದೇಶಗಳಿಗೆ ಸೇರಿದ 5 ಲಕ್ಷ ಮಹಿಳೆಯರಿದ್ದಾರೆ. ಈವರೆಗೆ ಸೌದಿ ಅರೇಬಿಯಾ ಪುರುಷರು ವಿದೇಶಿ ಯುವತಿಯರ ವಿವಾಹಕ್ಕೆ ಯಾವುದೇ ನಿರ್ಬಂಧಗಳಿರಲಿಲ್ಲ. . ಈಗ ಈ ನಾಲ್ಕು ದೇಶಗಳ ಯುವತಿಯರನ್ನು ಮದುವೆಯಾಗದಂತೆ ಸೌದಿ ಸರ್ಕಾರದ ನಿರ್ಧಾರ ಕೈಗೊಂಡಿದ್ದು, ಇದರಿಂದ ಸೌದಿ ಮಾತ್ರವಲ್ಲದೆ ನಾಲ್ಕು ದೇಶಗಳಲ್ಲೂ ವಿವಾದಕ್ಕೆ ಕಾರಣವಾಗಿದೆ.
ವಿದೇಶಿಯರನ್ನು ವಿವಾಹ ಮಾಡಿಕೊಳ್ಳಬೇಕು ಎಂದರೆ ವಿಶೇಷವಾಗಿ ಸೌದಿ ಪುರುಷರು, ಈಗ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಮೆಕ್ಕಾ ಪೊಲೀಸ್ ನಿರ್ದೇಶಕ ಮೇಜರ್ ಜನರಲ್ ಅಸ್ಸಫ್ ಅಲ್-ಖುರಾಶಿ ಅವರನ್ನು ಉಲ್ಲೇಖಿಸಿ ಮೆಕ್ಕಾ ದಿನಪತ್ರಿಕೆಯೊಂದು ವರದಿ ಮಾಡಿದೆ. ಆ ದೇಶಗಳ ಮಹಿಳೆಯರನ್ನು, ವಿಶೇಷವಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಮತ್ತು ಮ್ಯಾನ್ಮಾರ್‌ನ ಮಹಿಳೆಯರನ್ನು ಮದುವೆಯಾಗಲು ಕಠಿಣ ನಿಯಮಗಳಿವೆ ಎಂದು ಮೆಕ್ಕಾ ಡೈಲಿ ವರದಿ ಮಾಡಿದೆ.