ಶ್ರೀ.ಮ.ನಿ.ಪ್ರ.ಜ. ಮರಿಶಾಂತವೀರಶಿವಯೋಗಿಗಳು
(01.07.2024ರಂದು ಪುಣ್ಯಸ್ಮರಣೋತ್ಸವ ನಿಮಿತ್ಯ)
ಲೇಖಕರು: ಎಸ್.ಎಮ್.ಕಂಬಾಳಿಮಠ, ವಿಶ್ರಾಂತ ಅಧ್ಯಾಪಕರು, ಕೊಪ್ಪಳ.
ಶಿಕ್ಷಣವೆತ್ತರು-ಶಿಕ್ಷಣ ಪ್ರೇಮಿಗಳು ಹಾಗೂ ಶಿಕ್ಷಣಾಭಿಮಾನಿಗಳಾಗಿದ್ದ ಶ್ರೀ.ಮ.ನಿ.ಪ್ರ.ಜಽಽ ಮರಿಶಾಂತವೀರ ಶಿವಯೋಗಿಗಳವರು ಒಂದು ನಾಡಿನ ಪ್ರಗತಿಜನತೆಯ ಸರ್ವಾಂಗೀಣಉದ್ಧಾರ ಶಿಕ್ಷಣದಿಂದಲೇ ಮಾತ್ರ ಸಾಧ್ಯವೆಂದು ನಂಬಿದವರಾಗಿದ್ದರು. ಸ್ವತಃ ವಿದ್ವಾಂಸರೂಆಗಿದ್ದ ಪೂಜ್ಯರು, ಶಿಕ್ಷಣದ ಮಹತ್ವ ಹಾಗೂ ಅದರ ಶಕ್ತಿ, ಸಾಮರ್ಥ್ಯವನ್ನುಅರಿತವರಾಗಿದ್ದಕಾರಣ ಶಿಕ್ಷಣದ ಬಗ್ಗೆ ಅಪಾರ ವಿಶ್ವಾಸವನ್ನು ಹೊಂದಿದವರಾಗಿದ್ದರು, ಈ ಹಿನ್ನಲೆಯಲ್ಲಿಯೇ 1957ರಲ್ಲಿ ಶ್ರೀ ಗವಿಸಿದ್ಧೇಶ್ವರ ಮಿಡ್ಲಸ್ಕೂಲನ್ನು ಪ್ರಾರಂಭಿಸಿ ಶಿಕ್ಷಣ ಪ್ರಸಾದಂತಹ ಮಹಾಯಜ್ಞವನ್ನೇಕೈಗೊಂಡ ಪ್ರಾತಃ ಸ್ಮರಣೀಯರು. ಹೈದ್ರಾಬಾದಕರ್ನಾಟಕ ಭಾಗದಲ್ಲಿ ಪ್ರಥಮವಾಗಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದುದಲ್ಲದೇ ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಪ್ರಾರಂಭಿಸಿದರು. ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಶಾಲಾಪೀಜು, ಬಟ್ಟೆಬರೆ ಇತ್ಯಾದಿಗಳನ್ನೆಲ್ಲಾ ಶ್ರೀಮಠದಿಂದಲೇ ಪೂರೈಸುತ್ತಿದ್ದರು.ಅಸಂಖ್ಯ ಬಡವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವುದನ್ನು ಕರ್ತೃಶ್ರೀ ಗವಿಸಿದ್ಧೇಶನ ಆರಾಧನೆಗೆ ಸಮಾನವೆಂದೇ ಭಾವಿಸಿದ್ದ ಶಿವಯೋಗಿಗಳು ವಿದ್ಯಾಭ್ಯಾಸಕ್ಕೆಉದಾರಾಶ್ರಯ ನೀಡಿದವರಾಗಿದ್ದರು.ಶಿಕ್ಷಣ ಪ್ರಸಾರ ವ್ಯಾಪಕಗೊಳ್ಳಬೇಕು ಹಾಗೂ ನಿರಂತರ ಸಾಗುತ್ತಿರಬೇಕು ಏಂಬ ದೂರದೃಷ್ಟಿ ಹೊಂದಿದ್ದ ಪೂಜ್ಯರು 1963ರಲ್ಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕಟ್ರಸ್ಟ ಸ್ಥಾಪಿಸಿದರು.ಶ್ರೀಮಠದ 400 ಎಕರೆಗಿಂತಲೂ ಮಿಕ್ಕಿ ಫಲವತ್ತಾದ ಭೂಮಿಯನ್ನೆಲ್ಲಾ ಸಂಸ್ಥೆಗೆ ಉದಾರವಾಗಿದಾನ ನೀಡಿದರು.ಶಿಕ್ಷಣ ಪ್ರಸಾರ ನಿತ್ಯ ನಿರಂತರಗೊಳ್ಳಲು ಅವಕಾಶ ಮಾಡಿಕೊಟ್ಟ ಜಽಽ ಮರಿಶಾಂತವೀರ ಶಿವಯೋಗಿಗಳು ದಿಟಕ್ಕೂ ಪ್ರಾತಃಸ್ಮರಣೀಯರಾಗಿದ್ದಾರೆ.
ಪೂಜ್ಯ ಶಿವಯೋಗಿವರೇಣ್ಯರು ಸ್ಥಾಪಿಸಿದ ವಿದ್ಯಾಸಂಸ್ಥೆಇಂದು ವಟವೃಕ್ಷವಾಗಿ ಬೆಳೆದು ನಿಂತಿದೆ. ಕೊಪ್ಪಳದಲ್ಲಿ ಕಲಾ-ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯಇನ್ನೊಂದುವಿಶೇಷ ವಾಣಿಜ್ಯ ವಿದ್ಯಾಲಯ, ಸ್ನಾತಕೋತ್ತರ ಕೇಂದ್ರಗಳು ಕುಕನೂರು ಹಾಗೂ ಕೊಪ್ಪಳದಲ್ಲಿ ಒಂದೊಂದು ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳು ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಯುರ್ವೇದಆಸ್ಪತ್ರೆ, ಶಿಕ್ಷಣ ತರಬೇತಿಕೇಂದ್ರ ಬಿ.ಎಡ್ ಹೀಗೆ ಸುಮಾರು 25ಕ್ಕಿಂತಲೂ ಮಿಕ್ಕಿ ವಿದ್ಯಾಸಂಸ್ಥೆಗಳು ಸ್ಥಾಪನೆಗೊಂಡುಅತ್ಯಂತ ಪ್ರಗತಿ ಪಥದಲ್ಲಿ ಸಾಗುತ್ತಿವೆ. ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದಅಸಂಖ್ಯ ಪ್ರತಿಭೆಗಳು ಇಂದು ದೇಶ-ವಿದೇಶಗಳಲ್ಲಿ ಅನೇಕ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿ ತಮ್ಮಎತ್ತರದ ಸಾಧನೆ-ಸಿದ್ದಿಗಳ ಮೂಲಕ ಬೆಳಗುತ್ತಿದ್ದಾರೆ. ಸಹಸ್ರಾರು ಕುಟುಂಬಗಳಿಗೆ ಉದ್ಯೋಗ ನೀಡುವ ಮೂಲಕವು ಜನ-ಮನದಲ್ಲಿ ಸ್ಥಾಯಿಯಾಗಿದ್ದಾರೆ.ಪೂಜ್ಯ ಜಽಽ ಮರಿಶಾಂತವೀರ ಶಿವಯೋಗಿಗಳವರು ಸಂಸ್ಥಾನ ಗವಿಮಠದ ಪರಂಪರೆಯ 16ನೇ ಪೀಠಾಧಿಪತಿಗಳು ಇಂದಿನ ಗದಗಜಿಲ್ಲೆಗೆ ಸೇರಿದಗಜೇಂದ್ರಗಡತಾಲೂಕಿನ ಸೂಡಿ ಶಿವಯೋಗಿಗಳವರ ಜನ್ಮಸ್ಥಳ.ಅಲ್ಲಿಯಜುಕ್ತಿಹಿರೇಮಠದ ಬಸವಲಿಂಗಯ್ಯ ಹಾಗೂ ಶಾಂತಮ್ಮ ದಂಪತಿಗಳವರಲ್ಲಿ ಜನಿಸಿ ಬಂದವರು ಮರಿಶಾಂತವೀರ ಶಿವಯೋಗಿಗಳವರು
ಜನ್ಮ ದಿನಾಂಕ: 03-12-1888್ವ ಆರಂಭದ ಪ್ರಾಥಮಿಕ ಶಿಕ್ಷಣವನ್ನು ಸೂಡಿಯಲ್ಲಿ ಪೂರೈಸಿದರು ಸೋಲ್ಲಾಪುರದಲ್ಲಿ ಕೆಲಕಾಲ ಅಧ್ಯಯನ ಮಾಡಿದ ಪೂಜ್ಯರುತದನಂತರ ಸುಮಾರು 15 ವರ್ಷಗಳ ವಾರಣಾಸಿಯಲ್ಲಿದ್ದು ಸಂಸ್ಕೃತ, ನ್ಯಾಯಶಾಸ್ತ್ರ, ವ್ಯಾಕರಣ, ತರ್ಕಶಾಸ್ತ್ರ ಮುಂತಾದ ವಿಷಯಗಳನ್ನು ತಪಸ್ಸಿನಂತೆ ಅಧ್ಯಯನ ಮಾಡಿದರುಜೊತೆಗೆಆಯುರ್ವೇದ ಹಾಗೂ ಯೋಗಾಭ್ಯಾಸವನ್ನು ಮಾಡಿದರು.
ಈ ರೀತಿಯಾಗಿ ವಿದ್ವತ್ ತಪಸ್ಸಿನಂತೆ ಅಧ್ಯಯನ ಮಾಡಿ ಪಂಡಿತ್ತೋತ್ತಮರಾಗಿ ಸ್ವಗ್ರಾಮಕ್ಕೆ ಮರಳಿದರು.ಶ್ರೀ ಗವಿಮಠದ 15ನೇ ಪೀಠಾಧಿಪತಿಗಳಾಗಿದ್ದ ಲಿಂಽಽ ಜಽಽ ಶಿವಶಾಂತವೀರ ಶಿವಯೋಗಿಗಳು ಬರೆದಿಟ್ಟಿದ್ದ ವಿಲ್ ಪ್ರಕಾರ ಹಾಗೂ ಕೊಪ್ಪಳ ಭಕ್ತರಅಪೇಕ್ಷೆ ಹಾಗೂ ಆಗ್ರಹದ ಮೇರೆಗೆ 1844ನೇ ದುಂದುಭಿನಾಮ ಸಂವತ್ಸರದ ಮಾರ್ಗಶಿರ ಬಹುಳ ದಶಮಿ ಬುಧವಾರ ್ಲ13-12-1922್ವರಂದು ಶ್ರೀ.ಮ.ನಿ.ಪ್ರ.ಜಽಽ ಮರಿಶಾಂತವೀರ ಶಿವಯೋಗಿಗಳು ಎಂಬ ಅಭಿದಾನದಿಂದಶ್ರೀ ಗವಿಮಠದ ಪೀಠಾಧಿಪತಿಗಳಾದರು. ಅನ್ನದಾಸೋಹ, ಅಕ್ಷರದಾಸೋಹ ಹಾಗೂ ಆಧ್ಯಾತ್ಮದಾಸೋಹಗಳನ್ನು ನಿತ್ಯನಿರಂತರವಾಗಿಸಿಕೊಂಡ ಬಂದಂತಹಎಲ್ಲ ಶಿವಯೋಗಿಗಳಂತೆ ಇವರು ಸಹಾ ತ್ರಿವಿಧ ದಾಸೋಗಳನು ಮುಂದುವರೆಸಿಕೊಂಡು ಬಂದರು.ಶ್ರೀಮಠದ ಘನತೆಗೆಅಪಾರ ಮೇರಗುತಂದ ಮಹಿಮಾಶೀಲರು ಕನ್ನಡ, ಸಂಸ್ಕೃತ, ತತ್ವಶಾಸ್ತ್ರ,ತರ್ಕಶಾಸ್ತ್ರ, ವ್ಯಾಕರಣಾಧಿಶಾಸ್ತ್ರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದವರಾಗಿದ್ದರು ಅನೇಕ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಪೂಜ್ಯರುಆಯಾ ಭಾಷೆಗಳ ಅನೇಕ ಗ್ರಂಥಗಳನ್ನು ಸಂಗ್ರಹಿಸಿದ್ದರು.ಓದುಅವರಿಗೊಂದುತಪಸ್ಸಾಗಿತ್ತು ಸದಾಅವರ ಹಸ್ತದಲ್ಲೊಂದುಗ್ರಂಥಇರುತ್ತಿತ್ತು.
ಆಗಿನ ಸಂದರ್ಭದಲ್ಲಿ ನಾಡಿನಲ್ಲಿ ಪ್ರಕಟಗೊಳ್ಳುತ್ತಿದ್ದ ಧಾರ್ಮಿಕ ಹಾಗೂ ವಿದ್ವತ್ ಪತ್ರಿಕೆಗಳಲ್ಲದೇ ದೈನಂದಿನ ಪತ್ರಿಕೆಗಳನ್ನು ಸಹ ತರಿಸುತ್ತಿದ್ದರು. ವಿದ್ಯಾರ್ಥಿಗಳಿಗಾಗಿಒಂದು ವಾಚನಾಲಯವನ್ನೇ ಸ್ಥಾಪನೆ ಮಾಡಿದ್ದರು. ಷಡ್ದರ್ಶನತೀರ್ಥ ಪಂಽ ವಾಯ್.ನಾಗೇಶಶಾಸ್ತ್ರಿಗಳು ಬನ್ನಿಕೊಪ್ಪದ ಪಂಽಽ ಅಮರನಾಥ ಶಾಸ್ತ್ರಿಗಳು ಗೊಂಡಬಾಳದ ಶೀವಲಿಂಗಪ್ಪಯ್ಯ ಶಾಸ್ತ್ರಿಗಳು ದ್ಯಾಂಪೂರಚನ್ನ ಕವಿಗಳು ಕಲ್ಲಿನಾಥ ಶಾಸ್ತ್ರಿಗಳು ಸಂಗನಾಳಿನ ಪಂಽಽ ನಾಗಭೂಷಣ ಶಾಸ್ತ್ರಿ ಸಿದ್ಧಯ್ಯ ಪುರಾಣಿಕರು ಮುಂತಾದ ಪಂಡಿತೋತ್ತಮರೊಂದಿಗೆ ಶ್ರೀಮಠದಲ್ಲಿ ಆಗಾಗ ಶಿವಾನುಭವಗೋಷ್ಠಿ ಸಂವಾದ ಮುಂತಾದ ಕಾರ್ಯಕ್ರಮಗಳು ನೆರವೇರುತ್ತಲೇ ಇರುತ್ತಿದ್ದವು. ಈ ರೀತಿಯಾಗಿ ಸಾಮಾಜಿಕ-ಧಾರ್ಮಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸದಾತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡಿದ್ದ ಪೂಜ್ಯರು “ಸಮಾಜೋಧಾರ್ಮಿಕ ಕಾರ್ಯವೇ” ಅವರ ನಿತ್ಯಕಾರ್ಯವಾಗಿತ್ತು. ತಮ್ಮ ಸಹಜ ವೃಧ್ಯಾಪ್ಯ ಸಂದರ್ಭದಲ್ಲಿ ಶ್ರೀ.ಮ.ನಿ.ಪ್ರ.ಜಽಽ ಶಿವಶಾಂತ ಶಿವಯೋಗಿಗಳಿಗೆ ಶ್ರೀಮಠದ ಪಟ್ಟಾಧಿಕಾರವನ್ನ್ಲು26-05-1966್ವರಂದು ನೀಡಿದರು. ಸಮಗ್ರ 45ವರ್ಷಗಳ
ಕಾಲ ಉಗ್ರ ತಪಸ್ವಿಗಳಾಗಿ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಶೀಲಾಚರಣೆಯ ಲಿಂಗಾಂಗ ಸಾಮರಸ್ಯದಲ್ಲಿ ಶಿವಾನುಭವಿಗಳಾಗಿ ತ್ರಿವಿಧದಾಸೋಹ ಮೂರ್ತಿಗಳಾಗಿ ಪೀಠದ ಬೆಳಕನ್ನು ಬೆಳಗಿದ ಜಽಽ ಮರಿಶಾಂತವೀರ ಶಿವಯೋಗಿಗಳವರು ಸಾವಿರದ ಒಂಭತ್ತು ನೂರ ಅರವತ್ತೇಳನೆಯ ಜುಲೈ ತಿಂಗಳಿನ ಒಂದನೆಯ ದಿನಾಂಕದಂದು ್ಲ01-07-1967್ವ ಲಿಂಗವ ಪೂಜಿಸುತ್ತಲೇ ಆ ಲಿಂಗದ ಬೆಳಕಿನಲ್ಲಿಯೇ ಬೆರೆತು ಲಿಂಗೈಕ್ಯರಾದರು. ಪೂಜ್ಯರ ಗದ್ದುಗೆ ಶ್ರೀ ಗವಿಮಠದ ಮೇಲ್ಭಾಗದಲ್ಲಿದ್ದು ನಿತ್ಯ ಪೂಜೆಗೊಳ್ಳುತ್ತಲಿದೆ. ಮಹಾಶಿವಯೋಗಳ ಸನಿಹದಲ್ಲಿದ್ದು ಅಧ್ಯಯನ ಮಾಡುವ ಸದಾವಕಾಶ ದೊರಕ್ಕಿದ್ದೊಂದು ನನ್ನ ಪುಣ್ಯ. ಸನ್ನಿಧಿಯ ಶ್ರೀ ಚರಣಗಳಿಗೆ ಸಹಸ್ರ - ಸಹಸ್ರ - ನಮನವನ್ನರ್ಪಿಸಿ ಕೃತಾರ್ಥನಾಗುವೆ.