ಶಾಯಿರಿ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿ ಮತ್ತು ಪತ್ರಕರ್ತರು ಸೇರಿದಂತೆ ಹಲವರಿಗೆ ಸನ್ಮಾನ
Many including poets and journalists honored at Shayari Multilingual Poetry Festival
ಕೊಪ್ಪಳ 16: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ರವಿವಾರ ಜರುಗಿದ ಶಾಯಿರಿ ಮತ್ತು ಬಹುಭಾಷಾ ಕವಿಗೋಷ್ಠಿ ಸಮಾರಂಭದಲ್ಲಿ ಜಿಲ್ಲೆಯ ಹಿರಿಯ ಉರ್ದು ಸಾಹಿತಿ ಹಾಗೂ ಕವಿ ಮತ್ತು ನಿವೃತ್ತ ಪ್ರಾಧ್ಯಾಪಕ ಅನ್ವರ್ ಹುಸೇನ್ , ಹಿರಿಯ ಪತ್ರಕರ್ತ ಸಾಧಿಕ್ ಅಲಿ ಹಾಗೂ ಮೈಸೂರಿನ ಸಮಾಜ ಸೇವಕ ಹಾಗೂ ಸಾಹಿತಿ ತಾಹಿರ ಅಲಿ ಸೇರಿದಂತೆ ಕೊಪ್ಪಳದ ಸರಕಾರಿ ಉರ್ದು ಪ್ರೌಢಶಾಲೆಯ ನಿವೃತ್ತ ಸಹ ಶಿಕ್ಷಕಿ ಶಮೀಮುನ್ನಿಸಾ ಬೇಗಮ್ ಹೊನಗುಂದ, ಮತ್ತು ಯಾಸ್ಮಿನ್ ಬೇಗಮ್ ಹಾಗೂ ಅಜೀಮಾ ಬೇಗಂ ರವರಿಗೆ ಸನ್ಮಾನಿಸಲಾಯಿತು .
ಶ್ರೀ ನಿಮಿಷಾಂಬ ಪ್ರಕಾಶನ ಹಾಗೂ ಶ್ರೀ ನಿಮಿಷಾಂಬ ಆರ್ಟ್ ಗ್ಯಾಲರಿ ಸಂಘಟನೆಗಳಿಂದ ಏರಿ್ಡಸಿದ ಶಾಹಿರಿ ಬಹುಭಾಷಾ ಕವಿಗೋಷ್ಠಿ ಸಮಾರಂಭದಲ್ಲಿ ಜಿಲ್ಲೆಯ ಕನ್ನಡ ಮತ್ತು ಉರ್ದು ಕವಿಗಳು ಸಾಹಿತಿಗಳು ಚಿಂತಕರು ಪಾಲ್ಗೊಂಡಿದ್ದರು ಹಿರಿಯ ಸಮಾಜ ಸೇವಕ ಕಿನ್ನಾಳ ಗ್ರಾಮದ ವೆಂಕಟರಾವ್ ದೇಸಾಯಿ ಸಮಾರಂಭದ ಉದ್ಘಾಟನೆ ನೆರವೇರಿಸಿದರೆ ಹಿರಿಯ ಪತ್ರಕರ್ತ ಹಾಗೂ ಕನ್ನಡ ಸಾಹಿತಿ ಜಿಎಸ್ ಗೋನಾಳ ಅಧ್ಯಕ್ಷತೆ ವಹಿಸಿದ್ದರು ಸಾಹಿತಿ ಶ್ರೀನಿವಾಸ್ ಚಿತ್ರಗಾರ ವಿದ್ಯಾವತಿ ಚಿತ್ರಗಾರ ಮಂಜುನಾಥ ಚಿತ್ರಗಾರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಉರ್ದು ಕನ್ನಡ ಕವಿಗಳು ತಮ್ಮ ತಮ್ಮ ಕವನ ವಾಚನ ಮಾಡಿದರು, ನಂತರ ಎಲ್ಲರಿಗೂ ಪ್ರಮಾಣ ಪತ್ರ ವಿತರಣೆ ಮಾಡಿ ಸನ್ಮಾನಿಸಿ ಶುಭ ಕೋರಲಾಯಿತು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 