ಮನೆಯ ಮೇಲ್ಛಾವಣಿ ಕುಸಿದು ಬಿದ್ದು ವೃದ್ದೆ ಸಾವು : ಸವದತ್ತಿ ತಾಲೂಕಿನಲ್ಲಿ ಹೃದಯವಿದ್ರಾವಕ ಘಟನೆ
ಬೆಳಗಾವಿ : ಮನೆಯ ಮೇಲ್ಛಾವಣಿ ಕುಸಿದು ಬಿದ್ದು ವೃದ್ದೆಯೊಬ್ಬರು ಜೀವಂತ ಸಮಾಧಿ ಯಾಗಿರುವ ಹೃದಯವಿದ್ರಾವಕ ಘಟನೆಯೊಂದು ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದಲ್ಲಿಂದು ವರದಿಯಾಗಿದೆ.

ಈ ದುರ್ಘಟನೆಯಲ್ಲಿ ಶಾಂತವ್ವ ಶಿವಮೂರ್ತಯ್ಯ ಹಿರೇಮಠ್ (60) (ಸಾಕಿನ್ ಕರಿಕಟ್ಟಿ ತಾಲೂಕು ಸವದತ್ತಿ) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ 7.30ರ ಸುಮಾರಿಗೆ ಇವರ ಮನೆಯ ಮೇಲ್ಚಾವಣಿಯು ಆಕಸ್ಮಿಕ ವಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಕುರಿತು UDR ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.