ಅಂತರರಾಷ್ಟ್ರೀಯ

ಮಾಲ್ಡೀವ್ಸ್‌: ಭಾರತ ಪ್ರವಾಸಿಗಳಿಗೆ ನೋ ಎಂಟ್ರಿ

ಮಾಲ್ಡೀವ್ಸ್‌:  ಭಾರತ ಪ್ರವಾಸಿಗಳಿಗೆ  ನೋ ಎಂಟ್ರಿ

ಮಾಲೆ, ಮೇ 12:  ಕೊರೊನಾ   ಸಾಂಕ್ರಾಮಿಕದ  ಎರಡನೇ  ಅಲೆ  ವ್ಯಾಪಿಸುತ್ತಿರುವ   ಹಿನ್ನಲೆಯಲ್ಲಿ ಮಾಲ್ಡೀವ್ಸ್‌  ಸರ್ಕಾರ  ಪ್ರಮುಖ ನಿರ್ಧಾರ   ತೆಗೆದುಕೊಂಡಿದೆ.  ಭಾರತ  ಸೇರಿದಂತೆ  ದಕ್ಷಿಣ ಏಷ್ಯಾ ದೇಶಗಳ ಪ್ರವಾಸಿಗರಿಗೆ   ಅದು   ತಾತ್ಕಾಲಿಕ ನಿಷೇಧ  ವಿಧಿಸಿದೆ. 

ನಿಷೇಧ  ಮೇ 13 ರ ಗುರುವಾರದಿಂದ ಜಾರಿಗೆ ಬರಲಿದೆ. ಈ  ಸಂಬಂಧ  ಮಾಲ್ಡೀವ್ಸ್ ವಲಸೆ  ವಿಭಾಗ  ಟ್ವಿಟರ್‌ಮೂಲಕ  ಹೇಳಿಕೆ ಬಿಡುಗಡೆ ಮಾಡಿದೆ.

"ದಕ್ಷಿಣ ಏಷ್ಯಾದ ದೇಶಗಳಿಗೆ  ಸೇರಿದ   ಪ್ರವಾಸಿಗರು   ಮಾಲ್ಡೀವ್ಸ್‌     ಪ್ರವೇಶವನ್ನು   ತಾತ್ಕಾಲಿಕವಾಗಿ  ಅಮಾನತುಗೊಳಿಸುತ್ತಿದ್ದೇವೆ. ಎಲ್ಲಾ ರೀತಿಯ ವೀಸಾ ಹೊಂದಿರುವವರಿಗೆ  ಈ ನಿಯಮಗಳು ಅನ್ವಯವಾಗಲಿವೆ.  ನಿಷೇಧ   ಮೇ 13 ರಿಂದ ಜಾರಿಗೆ ಬರಲಿದೆ. ಕಳೆದ 14 ದಿನಗಳಲ್ಲಿ  ದಕ್ಷಿಣ ಏಷ್ಯಾ  ದೇಶಗಳಲ್ಲಿ  ಪ್ರಯಾಣಿಸಿರುವ ಇತರ ದೇಶಗಳ ಪ್ರವಾಸಿಗರಿಗೂ ಈ ನಿಯಮಗಳು ಅನ್ವಯವಾಗಲಿವೆ  ”ಎಂದು ಮಾಲ್ಡೀವ್ಸ್ ವಲಸೆ ವಿಭಾಗ  ಟ್ವೀಟ್ ಮಾಡಿದೆ. ಈ ನಿಷೇಧದ ಬಗ್ಗೆ ಅಲ್ಲಿನ ಭಾರತದ ಹೈಕಮಿಷನ್ ಪ್ರತಿಕ್ರಿಯಿಸಿ ಮಾಲ್ಡೀವ್ಸ್ ನಿರ್ಧಾರ  ಉಭಯ ದೇಶಗಳ ನಡುವಿನ ವಾಯು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ,  ಹಾಗಾಗಿ ಇಲ್ಲಿರುವ  ಭಾರತೀಯರನ್ನು ಸ್ವದೇಶಕ್ಕೆ  ವಾಪಸ್ ಕಳುಹಿಸಲು ವ್ಯವಸ್ಥೆ ಮಾಡಬೇಕು ಎಂದು ರಾಯಭಾರ ಕಚೇರಿ  ಸೂಚಿಸಿದೆ. 

ಭಾರತದಿಂದ  ಮಾಲ್ಡೀವ್ಸ್‌ಗೆ  ಪ್ರತಿವರ್ಷ  ಲಕ್ಷಾಂತರ   ಮಂದಿ ಪ್ರವಾಸಿಗರು  ವಿಹಾರಕ್ಕೆ  ತೆರಳುತ್ತಾರೆ.  ಇತ್ತೀಚಿನ ಕೊರೊನಾ ಮೊದಲ  ಅಲೆಯಿಂದಾಗಿ  ಸ್ವಲ್ಪಮಟ್ಟಿಗೆ ತಗ್ಗಿದ ನಂತರ  ಮತ್ತೆ ಸಿನಿಮಾ  ಸೆಲೆಬ್ರಿಟಿಗಳು ಸತತವಾಗಿ ಮಾಲ್ಡೀವ್ಸ್‌ಗೆ ತೆರಳುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.

ಸುದ್ದಿ ಓದಿ