ಎನ್‌ಎಮ್‌ಎಮ್‌ಎಸ್ ಪರೀಕ್ಷೆ ಸದುಪಯೋಗಿಸಿಕೊಳ್ಳಿ: ಸಾವಳಗಿ
Make the most of the NMMS exam: Savalagi
ತಾಳಿಕೋಟೆ 12: ಎನ್‌ಎಮ್‌ಎಮ್‌ಎಸ್ ಪರೀಕ್ಷೆ 8 ನೇಯ ವರ್ಗದಲ್ಲಿ ಓದುವ ಮಕ್ಕಳಿಗಾಗಿ ಸರಕಾರದ ಸ್ಕಾಲರಶಿಪ್‌ಗಾಗಿ ಸ್ಪರ್ಧಾತ್ಮಕ
ಪರೀಕ್ಷೆ ಆಗಿದ್ದು ಒಟ್ಟು 90 ಅಂಕದ ಎರಡು ಪೇಪರ್ ಬರೆಯಬೇಕು. ಅದರಲ್ಲಿ ಉತ್ತೀರ್ಣರಾದರೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಗಳಂತೆ ನಾಲ್ಕು ವರ್ಷ ಸರಕಾರ ಸ್ಕಾಲರ್ಶಿಪ್ ನೀಡುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಬಲಬರುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ಕೆ.ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹತ್ತನೆ ವರ್ಗದ ವಿದ್ಯಾರ್ಥಿನಿಯರು ಆರಂಭದಿಂದ ಸರಿಯಾಗಿ ಅಭ್ಯಾಸ ಮಾಡಿ ವಿಷಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು, ಪರೀಕ್ಷೆ ಹತ್ತಿರ ಬಂದಾಗ ಓದಿದರಾಯಿತು ಎಂಬ ತಾತ್ಸಾರ ಮಾಡಬಾರದು, ಪ್ರತಿದಿನ ಆದಿನದ ಅಭ್ಯಾಸ ಮುಗಿಸಬೇಕು, ಗ್ರಹ ಕಾರ್ಯ ತಪ್ಪದೇ ಮಾಡಬೇಕು ಎಂದು ತಿಳಿಸಿದರು.
ಎನ್‌ಎಮ್‌ಎಮ್‌ಎಸ್ ನೋಡಲ್ ಅಧಿಕಾರಿ ಅಮೋಘಸಿದ್ದ ಬಗಲಿ ಎನ್‌ಎಮ್‌ಎಮ್‌ಎಸ್ ಪರೀಕ್ಷಾ ವಿವರ ತಿಳಿಸಿದರು. 8ನೇ ವರ್ಗದಲ್ಲಿ ಓದು ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಇದರ ಸದುಪಯೋಗ ಪಡೆಬೇಕು ಅದಕ್ಕಾಗಿ ಎಲ್ಲರು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯ ಡಾ.ಅನಿಲಕುಮಾರ ಇರಾಜ, ಶಿಕ್ಷಕರಾದ ಪಿ.ಬಿ.ದೇಶಮುಖ, ಎಮ್.ಎಮ್.ಕಾಂಬಳೆ, ಪಿ.ಪಿ.ಬಸರಕೋಡ, ಎಮ್.ವಾಯ್.ಕೇಸರಿ, ಪಿ.ಎಮ್. ಬೆಳಗಲ್ಲ ಸಹನಾ ಕಶೆಟ್ಟಿ, ಎಮ್. ವಾಯ್.ಚಲವಾದಿ, ಹರೀಶ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 