ಮಹಾವೀರ ಜಯಂತಿ ನಿರ್ಲಕ್ಷ ದೋರಣೆ ತೋರಿದ ದಂಡಾಧಿಕಾರಿ
ಹುಕ್ಕೇರಿ, 30 : ಭಗವಾನ್ ಮಹಾವೀರ ಜಯಂತಿ ನಿಮಿತ್ಯವಾಗಿ ಪೂರ್ವಬಾವಿ ಸಭೆ ಕರೆದು ವೇಳೆಯನ್ನು ನಿಗದಿಪಡಿಸಲಾಗಿದೆ ಆದರೂ ಕೂಡ ತಾಲೂಕ ದಂಡಾಧಿಕಾರಿ ಹಾಗೂ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬಾರದೆ ಮಹಾವೀರ ಜಯಂತಿಗೆ ಅಸಡ್ಡೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ದಂಡಾಧಿಕಾರಿಗಳ ಕಚೇರಿ ಮುಖ್ಯದ್ವಾರಕ್ಕೆ ಬೀಗ ಹಾಕಿ ನಮ್ಮ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಸ್ಥಳೀಯ ಜೈನ ಸಮಾಜದ ಮುಖಂಡರು ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ತಾಲೂಕ ದಂಡಾಧಿಕಾರಿಗಳ ಕಚೇರಿ ತಾಲೂಕ ಆಡಳಿತದಿಂದ ನೆರವೇರಿಸಬೇಕಾಗಿತ್ತು ಸಮಯಕ್ಕೆ ಬಾರದೆ ಇರುವುದರಿಂದ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಜೈನ ಸಮಾಜದವರು ಪೂಜೆ ಸಲ್ಲಿಸಿದರು ಹಾಗಾದರೆ ತಾಲೂಕ ದಂಡಾಧಿಕಾರಿಗಳ ಕಚೇರಿ ಯನ್ನು ಏಕೆ ಆಯ್ಕೆ ಮಾಡಿದರು ಈ ಸಮುದಾಯಕ್ಕೆ ಹೀನಾಯವಾಗಿ ಆಗಬೇಕೆಂದು ಹೀಗೆ ಮಾಡಿದರಾ.? ಮಿನಿ ವಿಧಾನಸೌಧ ಮುಂಭಾಗದಲ್ಲಿ ಧ್ವಜಾರೋಹನ ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಇಲ್ಲದಿರುವುದು ಕಂಡು ಅಲ್ಲೇ ಧ್ವಜಾರೋಹಣ ಕಟ್ಟಿಯ ಮೇಲೆ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪೂಜೆ ನೆರವೇರಿಸ ಬೇಕಾಯಿತು ಅಹಿಂಸೆ ಶಾಂತಿ ಪಾಲನೆ ಮಾಡುವವರಿಗೆ ಈ ರೀತಿ ಮಾಡುವುದು ಸರಿಯೇ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜೈನ ಸಮುದಾಯದ ಮುಖಂಡರು ಮಹಿಳೆಯರು ತಹಶೀಲ್ದಾರ್ ನಡೆಯನ್ನು ಖಂಡಿಸಿ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಮಹಾವೀರ ವಸಂತ್ ನಿಲಜಗಿ ಇವರು ತೀವ್ರವಾಗಿ ಖಂಡಿಸಿದ್ದಾರೆ ಮೇಲಧಿಕಾರಿಗಳು ಹುಕ್ಕೇರಿ ತಾಲೂಕ ಅಧಿಕಾರಿಗಳ ಮೇಲೆ ಯಾವ ರೀತಿ ಕ್ರಮ ಜರುಗಿಸುತ್ತಾರೆ ಎಂಬುದು ಕಾದು ನೋಡಬೇಕು. ಕೆಲವು ಸೀಮಿತ ಪತ್ರಕರ್ತರಿಗೆ ಮಾತ್ರ ಅವಮಾನ ನೀಡುತ್ತಾರೆ ಪ್ರಾದೇಶಿಕ ಪತ್ರಿಕೆ ಹಾಗೂ ಕೆಲ ಮಾಧ್ಯಮದವರನ್ನು ನೋಡು ನೋಡುದ ಹಾಗೆ ಇರುತ್ತಾರೆ ಹಾಗೂ ಇದೇ ರೀತಿ ಯಾವುದೇ ಸಮುದಾಯಕ್ಕೆ ಈ ರೀತಿ ಆಗಬಾರದು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗುರುಶಾಂತ ಪಾವಟೆ ತಾಲೂಕ ಆರೋಗ್ಯಧಿಕಾರಿ ಉದಯ ಕುಡಚಿ ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್‌ಐ ವಿಠ್ಠಲ್ ನಾಯಕ. ಅರ್ಜುನ್. ಎಎಸ್‌ಐ ಎಸ್ ಸಿ ಮಠಪತಿ. ಮಹಾವೀರ ನೀಲಜಿಗೆ ಸಂಜು ನೀಲಜಿಗಿ ಬಾಹುಬಲಿ ನಾಗನೂರಿ ಆರ್ ಪಿ ಚೌಗಲಾ ನ್ಯಾಯವಾದಿಗಳು ಸಂಜು ಮಗದುಮ್ ನ್ಯಾಯವಾದಿಗಳು ಬಿ ಬಿ ಚೌಗಲಾ ಅಧ್ಯಕ್ಷರು ಹರಿಹಂತ ಬ್ಯಾಂಕ್, ಹುಲ್ಲೋಳಿ ಚಿನ್ನಪ್ಪ ಸಪ್ತಸಾಗರ್ ರವೀಂದ್ರ ಚಾಗಲಾ ಸುಭಾಷ್ ಬಸ್ತವಾಡ ಶಾಂತಿನಾಥ್ ಮಗದುಮ್ ಗೀತಾ ಬಸ್ತವಾಡ ವೇಣುತಾಯಿ ಚೌಗಲಾ ಮಂಜುಳಾ ಅಡಕೆ ಸುಮಾ ಬಿಲ್ಲ ಹಾಗೂ ಜೈನು ಸಮಾಜದ ಮುಖಂಡರು ಗಣ್ಯಮಾನ್ಯರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು