ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ನೀಡಿದ ಮಾದೇವಪ್ಪ ಏವೂರ
ಲೋಕದರ್ಶನ ವರದಿ
ಇಂಡಿ 30 : ತಾಲ್ಲೂಕಿನ ತೆನ್ನಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆನಾಲ್ ಹೂಳು ತೆಗೆಯುವ ಕಾಮಗಾರಿ ಸ್ಥಳಕ್ಕೆ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಹಾದೇವಪ್ಪ ಏವೂರ ರವರು ಬೇಟಿ ನೀಡಿ ಕಾಮಗಾರಿ ಸ್ಥಳದಲ್ಲಿರುವ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ ಮಾಡಿದರು. ಸದರಿ ಕಾಮಗಾರಿ ಸ್ಥಳದಲ್ಲಿ 16 ಜನ ಮಹಿಳೆಯರು, 4 ಜನ ಪುರುಷರು ಒಟ್ಟು 20 ಜನ ಕೂಲಿಕಾರರು ಹಾಜರಿದ್ದರು.
ಬೇಸಿಗೆ ಅವಧಿಯಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಕೂಲಿಕಾರರ ಹಿತದೃಷ್ಟಿಯಿಂದ ಪ್ರತಿಶತ 30 ಅ ರಷ್ಟು ಕಡಿತ ಮಾಡಿ ಅನುಕೂಲ ಮಾಡಲಾಗಿದೆ. ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೂ ಕೆಲಸದಲ್ಲಿ ರಿಯಾಯಿತಿಯನ್ನು ನೀಡಲಾಗಿದೆ. ಹಾಗೂ ಪ್ರತಿನಿತ್ಯ ಕೆಲಸಕ್ಕೆ ಬರುವಂತೆ ತಿಳಿಸಿ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗವನ್ನು ಪಡೆದುಕೊಳ್ಳಿ ಎಂದು ಮಾಹಿತಿ ತಿಳಿಸಿದರು, ಹಾಗೂ ಪ್ರತಿನಿತ್ಯ ಎರಡು ಹೊತ್ತು ಓಒಒಖ ಮೂಲಕ ಫೇಸ್ ಅಥೆಂಟಿಕೇಶನ್ ಮೂಲಕ ಹಾಜರಾತಿ ಪಡೆದು ನಿಮಗೆ ಕೂಲಿಮೊತ್ತ ಪಾವತಿಸಲಾಗುವುದು ಎಂದು ತಿಳಿಸಿದರು.
ಪಂಚಾಯತ್ ಎಲ್ಲಾ ಸಿಬ್ಬಂದಿಗಳು, ಎಲ್ಲಾ ಕೂಲಿಕಾರರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಯೋಜನೆ ಅಡಿಯಲ್ಲಿ ಹೆಚ್ಚಿನ ವಿಮಾ ರಕ್ಷಣೆಗಾಗಿ ನೋಂದಾವಣಿ ಮಾಡಿಕೊಳ್ಳಲು ಕೂಲಿಕಾರರಿಗೆ ಪ್ರೇರೇಪಿಸಿದರು.ತದನಂತರ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ಸಿಬ್ಬಂದಿಗಳ ಹಾಜರಾತಿ, ಸಿಬ್ಬಂದಿಗಳ ಕಾರ್ಯ ವೈಖರಿ, ಕುಡಿಯುವ ನೀರಿನ ಸಮಸ್ಯೆ, ತೆರಿಗೆ ವಸೂಲಾತಿ, ಇ ಕೆ ವಾಯ ಎಸ್ ಪ್ರಗತಿ, ಇತರ ವಿಷಯಗಳ ಕುರಿತು ಚರ್ಚಿಸಿ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಗತಿ ಸಾಧಿಸಲು ಸೂಚಿಸಿದರು.ಈ ಸಂದರ್ಭದಲ್ಲಿ ತಾಲೂಕ ಐಈಸಿ ಸಂಯೋಜಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶೋಭಾ ಹೊರಪೇಟೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಗ್ರಾಮ ಕಾಯಕ ಮಿತ್ರ , ನರೇಗಾ ಯೋಜನೆಯ ಕೂಲಿಕಾರರು ಹಾಜರಿದ್ದರು.