ಪಾಲಬಾವಿಯ ವೀರಭದ್ರೇಶ್ವರ ದೇವಸ್ಥಾನ ಕಮಿಟಿಯಿಂದ ಶಾಸಕ ಬಸನಗೌಡ ಪಾಟೀಲ (ಯತ್ನಾಳ್) ಸನ್ಮಾನ
MLA Basanagouda Patil (Yathnal) felicitated by the Veerabhadreshwara Temple Committee of Palabavi
ಪಾಲಬಾವಿ 10 : ರಾಯಬಾಗ ತಾಲೂಕು ಪಾಲಬಾವಿ ಗ್ರಾಮದ ಶೇಗುಣಶಿ ತೋಟದಲ್ಲಿ ಪ್ರತಿಷ್ಠಾಪನೆಗೊಂಡಿರುವ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ, ಕಳಸಾರೋಹಣ, ಲಕ್ಷ ದೀಪೋತ್ಸವ ಹಾಗೂ ಮಹಾತ್ಮರಿಂದ ಸತಂಗ ಸಮ್ಮೇಳನದಲ್ಲಿ ಭಾಗವಹಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ವೀರಭದ್ರೇಶ್ವರ ದೇವಸ್ಥಾನ ಕಮಿಟಿಯ ಮುಖ್ಯಸ್ಥರು ಅಗ್ರಾಣಿ ಶೇಗುಣಶಿ ಸೇರಿಕೊಂಡು ಕಮಿತಿಯವರು ಶಾಲು ಹೊದಿಸಿ ಹೂಮಾಲೆ ಹಾಕಿ ಗೌರವಿಸಿ ಸನ್ಮಾನಿಸಿದರು.
ಕೂಡಲಸಂಗಮ ಲಿಂಗಾಯತ ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಇಂಚಗೇರಿ ಮಠದ ಸಮರ್ಥ ಸದ್ಗುರು ಶಶಿಕಾಂತ ಗುರೂಜಿ, ದೇವಸ್ಥಾನದ ಪೂಜ್ಯರು ಶರಣಪ್ಪನವರು ಸನ್ನಿಧಾನ ವಹಿಸಿದ್ದರು.ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಯುವ ವಾಗ್ಮಿ ಲಕ್ಷ್ಮಣ ಯಡ್ರಾಂವಿ ಮಾತನಾಡಿದರು. ವೀರಭದ್ರೇಶ್ವರ ವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಶೇಗುಣಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಭೂದಾನಿ ಅಣ್ಣಾಸಾಬಗೌಡ ಪಾಟೀಲ, ನಿಂಗಪ್ಪ ಫಿರೋಜ, ಶಿವಪ್ಪ ಕಾಡಶೆಟ್ಟಿ, ಸುರೇಶ ಹೊಸಪೇಟಿ, ಲಕ್ಷ್ಮಣ ಕೂಡಲಗಿ, ಮಲ್ಲಿಕಾರ್ಜುನ ಖಾನಗೌಡ, ಗಿರೆಪ್ಪ ಬಳಗಾರ, ಗುರುಪಾದ ಚೌಗಲಾ, ಪ್ರಕಾಶ ಉಮರಾಣಿ, ಪಿಎಸ್‌ಐ ಮಾಳಪ್ಪ ಪೂಜಾರಿ, ಪ್ರಕಾಶ ಉಮರಾಣಿ,ಬಸಪ್ಪ ತೇಗೂರ, ಶ್ರೀಶೈಲ ಮರಡಿ, ರಮೇಶ ಮರಡಿ, ರಂಗಪ್ಪ ಶೇಗುಣಶಿ, ಚೆನ್ನಪ್ಪ ಬಳಗಾರ, ಶಿವಪುತ್ರ ಬಡಿಗೇರ, ಶಿವಪ್ಪ ಶೇಗುಣಸಿ, ಭರಮಪ್ಪ ಮಾನಶೆಟ್ಟಿ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಅಲ್ಲಮಪ್ರಭು ತೇಗೂರ, ಅಗ್ರಾಣಿ ಸೇಗುಣಶಿ, ಇಮಾಮ್ ಸಣದಿ, ಸಂಗಪ್ಪ ತುಪ್ಪದ, ಶ್ರೀಶೈಲ ಕೆಸರುಗೊಪ್ಪ, ಸಂಜೀವ್ ತೇಗೂರ, ಮಹಾದೇವ ಮಾದಗೊಂಡ, ಷಣ್ಮುಖ ತೇರದಾಳ, ಚಿದಾನಂದ ನಿಂಗನೂರ, ಪ್ರಕಾಶ ಪಾಟೀಲ, ರುದ್ರ್ಪ ಭದ್ರಶೆಟ್ಟಿ, ಶಿವಲಿಂಗ ಬಾಗೇವಾಡಿ, ಹುಲೆಪ್ಪ ತೇಗೂರ, ಯೋಧ ಮಯೂರ್ ಶಿವಾಪುರ, ಪರ್ಪ ಮಗದುಮ್ಮ, ಸಂಗಪ್ಪ ತುಪ್ಪದ, ಮಲ್ಲಪ್ಪ ಕೆಸರಗೋಪ್ಪ, ಕಲ್ಲಪ್ಪ ಮರಡಿ, ಶಿವಲಿಂಗ ಉಳ್ಳಾಗಡ್ಡಿ ಉಪಸ್ಥಿತರಿದ್ದರು.
ಪಾಲಬಾವಿ ಗ್ರಾಮದ ಶೇಗುಣಶಿ ತೋಟದಲ್ಲಿರುವ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ, ಕಳಸಾರೋಹಣ, ಲಕ್ಷ ದೀಪೋತ್ಸವ ಹಾಗೂ ಮಹಾತ್ಮರಿಂದ ಸತಂಗ ಸಮ್ಮೇಳನದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ (ಯತ್ನಾಳ್) ಅವರನ್ನ ಗೌರವಿಸಿ ಸನ್ಮಾನಿಸುತ್ತಿರುವುದು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 