ಅಂತರರಾಷ್ಟ್ರೀಯ

ಕೋವಿಡ್ ವಿರುದ್ಧ ಮುಂದಿನ ವಾರ ಸ್ಪುಟ್ನಿಕ್ ವಿ ಲಸಿಕೆ ನೀಡಿಕೆ : ಮೆಕ್ಸಿಕೋ ಅಧ್ಯಕ್ಷ

ಕೋವಿಡ್  ವಿರುದ್ಧ ಮುಂದಿನ ವಾರ ಸ್ಪುಟ್ನಿಕ್ ವಿ ಲಸಿಕೆ ನೀಡಿಕೆ : ಮೆಕ್ಸಿಕೋ ಅಧ್ಯಕ್ಷ

ಮೆಕ್ಸಿಕೋ ನಗರ, ಜ 30 :ಕೋವಿಡ್ ಸೋಂಕಿನ ವಿರುದ್ಧ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಕಾರ್ಯಕ್ರಮ ಮುಂದಿನ ವಾರ ಆರಂಭವಾಗುವ ನಿರೀಕ್ಷೆಯಿದೆ ಎಂದು ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದ್ದಾರೆ.   "ಈ ಸ್ಪುಟ್ನಿಕ್ ವಿ ಲಸಿಕೆ ಮುಂಬರುವ ದಿನಗಳಲ್ಲಿ ದೇಶಕ್ಕೆ ಲಭ್ಯವಾಗಲಿದ್ದು,   ಮುಂದಿನ ವಾರ ವಿತರಣೆಗಳು ಪ್ರಾರಂಭವಾಗಲಿವೆ ಎಂದು ನಾನು ನಂಬುತ್ತೇನೆ" ಎಂದು ಅಧ್ಯಕ್ಷರು ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಶುಕ್ರವಾರ ತಡರಾತ್ರಿ ಹೇಳಿದ್ದಾರೆ. ಮುಂದಿನ ಎರಡು ತಿಂಗಳುಗಳಲ್ಲಿ ದೇಶ 24 ಮಿಲಿಯನ್ ಡೋಸ್ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ.  ಇದೇ 13 ರಿಂದ ದೇಶದ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಅಧಿಕಾರಿಗಳು ಆರಂಭಿಸಿದ್ದಾರೆ.

 


ಸುದ್ದಿ ಓದಿ