ಅಂತರರಾಷ್ಟ್ರೀಯ

ಮೆಕ್ಸಿಕನ್ ಅಧ್ಯಕ್ಷರಿಗೂ ಅಮರಿಕೊಂಡ ಕೊರೋನ ಸೋಂಕು

ಮೆಕ್ಸಿಕನ್ ಅಧ್ಯಕ್ಷರಿಗೂ ಅಮರಿಕೊಂಡ ಕೊರೋನ ಸೋಂಕು

ಮಾಸ್ಕೋ, ಜನವರಿ 25 :  ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರಿಗೂ ಕರೋನ ಸೋಂಕು ಅಮರಿಕೊಂಡಿದೆ. ಸೌಮ್ಯ ರೋಗಲಕ್ಷಣಗಳು ಕಾಣಿಸಿಕೊಂಡಿದೆ , ಕೋವಿಡ್ 19 ಸೋಂಕಿಗೆ ಒಳಗಾಗಿದ್ದೇನೆ ಎಂದು ತಿಳಿಸಲು  ವಿಷಾದಿಸುವೆ ಎಂದು ಅವರು ಸಾಮಾಜಿಕ ಜಾಲ ತಾಣದ ಮೂಲಕ ಮೂಲಕ  ಮಾಹಿತಿ ಬಹಿರಂಗಪಡಿಸಿದ್ದಾರೆ. ರೋಗಲಕ್ಷಣಗಳು ಸೌಮ್ಯವಾದರೂ ನಾನು ಈಗಾಗಲೇ ವೈದ್ಯಕೀಯ ಚಿಕಿತ್ಸೆಯಲ್ಲಿದ್ದು  ಆಶಾವಾದಿಯಾಗಿದ್ದೇನೆ ಎಂದು  ಅಧ್ಯಕ್ಷರು ಭಾನುವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಮೆಕ್ಸಿಕೊದ ಆಂತರಿಕ ಕಾರ್ಯದರ್ಶಿ ಓಲ್ಗಾ ಸ್ಯಾಂಚೆ   ಕಾರ್ಡೆರೊ ಅವರು  ಇಂದಿನಿಂದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರನ್ನು  ಪ್ರತಿನಿಧಿಸಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದರು. 




ಸುದ್ದಿ ಓದಿ