ಅಂತರರಾಷ್ಟ್ರೀಯ

ಮೆಕ್ಸಿಕೊದಲ್ಲೂ ಕಾಣಿಸಿಕೊಂಡ ಬ್ರಿಟನ್ ಹೊಸ ಮಾದರಿ ಕೊರೋನ ಸೋಂಕು

ಮೆಕ್ಸಿಕೊದಲ್ಲೂ ಕಾಣಿಸಿಕೊಂಡ ಬ್ರಿಟನ್  ಹೊಸ ಮಾದರಿ ಕೊರೋನ ಸೋಂಕು

ಮೆಕ್ಸಿಕೊ ಸಿಟಿ, ಜನವರಿ 11:ಮೆಕ್ಸಿಕೊದಲ್ಲಿ ಬ್ರಿಟನ್ ನಲ್ಲಿ ಕಾಣಿಸಿಕೊಂಡ  ಹೊಸ ರೂಪಾಂತರಿ ಕೊರೋನ ಸೋಂಕಿನ ಮೊದಲ ಪ್ರಕರಣ ವರದಿಯಾಗಿದೆಎಂದು ತಮೌಲಿಪಾಸ್ ರಾಜ್ಯದ ಆರೋಗ್ಯ ಕಾರ್ಯದರ್ಶಿ ಗ್ಲೋರಿಯಾ ಮೊಲಿನಾ ಗ್ಯಾಂಬೊವಾ ಹೇಳಿದ್ದಾರೆ. ಅಧಿಕಾರಿಯ ಪ್ರಕಾರ, ಕಳೆದ ಡಿಸೆಂಬರ್ 29 ರಂದು ಮೆಕ್ಸಿಕೊ ನಗರದಿಂದ ರಾಜ್ಯಕ್ಕೆ ಆಗಮಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರೊಬ್ಬರಲ್ಲಿ ಬಿ 117 ಎಂದು ಕರೆಯಲ್ಪಡುವ ಹೊಸ ಸೋಂಕು ದೃಡಪಟ್ಟಿದೆ ಎಂದರು. ಒಂದೇ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಹೇಳಿದರು. ಡಿಸೆಂಬರ್‌ನಲ್ಲಿ, ಯುಕೆ ದೇಶದಲ್ಲಿ ಹೊಸ ರೂಪಾಂತರಿ  ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಘೋಷಿಸಿತ್ತು. ಮೇಲಾಗಿ ಇದು ಶೇಕಡ  70 ವೇಗವಾಗಿ ಹರಡಲಿದೆ ಎಂಬ ಮಾಹಿತಿ ಎಲ್ಲರನ್ನು ಬೆಚ್ಚಿಬೀಳಿಸಿದೆ. 



ಸುದ್ದಿ ಓದಿ