ಕೊರೋನ: 8.4 ಮಿಲಿಯನ್ ಡೋಸ್ ಲಸಿಕೆ ಖರೀದಿಗೆ ಮುಂದಾದ ಮಾಲಿ
ಮಾಸ್ಕೋ, ಜನವರಿ 23 :ಕರೋನ ಸೋಂಕು ನಿವಾರಣೆ ಮತ್ತು ಜನರ ಪ್ರಾಣ ಕಾಪಾಡಲು ಮಾಲಿ 8.4 ಮಿಲಿಯನ್ ಡೋಸ್ ಲಸಿಕೆ ಖರೀದಿಸಲು ತೀರ್ಮಾನ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಲಸಿಕೆ ಖರೀದಿ, ಮಾರ್ಚ್‌ನಲ್ಲಿ ನಡೆಯಲಿದ್ದು ನಂತರ ಲಸಿಕಾ ಅಭಿಯಾನ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದೆ ಎಂದೂ ವರದಿಯಾಗಿದೆ., ಇತರ ಆಫ್ರಿಕನ್ ರಾಷ್ಟ್ರಗಳಂತೆ ದೇಶವು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಆರಿಸಿಕೊಂಡಿದೆ ಏಕೆಂದರೆ ಅದನ್ನು ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಿಡುವ ಅಗತ್ಯವಿಲ್ಲ. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಏಕಾಏಕಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು ಜಗತ್ತಿನಲ್ಲಿ ಇಲ್ಲಿಯವರೆಗೆ, ವಿಶ್ವದಾದ್ಯಂತ 98.1 ದಶಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ, 2.1 ದಶಲಕ್ಷಕ್ಕೂ ಹೆಚ್ಚು ಸಾವು-ನೋವುಗಳಾಗಿವೆ ಎಂದೂ ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ (ಜೆಎಚ್‌ಯು) ತಿಳಿಸಿದೆ.