ಅಂತರರಾಷ್ಟ್ರೀಯ

ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್- ಕಮಲಾ ಹ್ಯಾರಿಸ್ ಮಹತ್ವದ ಮಾತುಕತೆ

ಫ್ರೆಂಚ್ ಅಧ್ಯಕ್ಷ  ಮ್ಯಾಕ್ರನ್- ಕಮಲಾ ಹ್ಯಾರಿಸ್ ಮಹತ್ವದ ಮಾತುಕತೆ

ಮಾಸ್ಕೋ, ಫೆಬ್ರವರಿ 16 : ಕರೋನಸೊಂಕು ನಿವಾರಣೆ,   ಹವಾಮಾನ ಬದಲಾವಣೆ ಮತ್ತು ಇತರೆ ವಿಷಯ ಕುರಿತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ  ಅಮೆರಿಕ ಉಪಾಧ್ಯಕ್ಷೆ  ಕಮಲಾ ಹ್ಯಾರಿಸ್  ಮಹತ್ವದ ಮಾತುಕತೆ ನಡೆಸಿದ್ದಾರೆ. ದೂರವಾಣಿ ಸಂಭಾಷಣೆಯ ಮೈಲಕ ಈ  ಮಾತುಕತೆ ನಡೆಸಲಾಗಿದೆ  ಎಂದು ಶ್ವೇತಭವನ ತಿಳಿಸಿದೆ. ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರು ಇಂದು ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿ, ಅಮೆರಿಕ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ಬದ್ಧತೆ ವ್ಯಕ್ತಪಡಿಸಿದ್ದಾರೆ. ಜನವರಿ ಅಂತ್ಯದಲ್ಲಿ, ನೂತನ ಅಧ್ಯಕ್ಷ  ಅಧ್ಯಕ್ಷ ಜೋ ಬೈಡೆನ್  ಮ್ಯಾಕ್ರನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದರು.  ಜಾಗತಿಕ ಆರ್ಥಿಕ ಚೇತರಿಕೆ ಮತ್ತು ಸಾಂಕ್ರಾಮಿಕ, ಹವಾಮಾನ ಬದಲಾವಣೆ, ಮತ್ತು ಚೀನಾ, ಮಧ್ಯಪ್ರಾಚ್ಯದಲ್ಲಿನ   ಪರಿಸ್ಥಿತಿ,  ವಿದೇಶಾಂಗ ನೀತಿ ವಿಚಾರದಲ್ಲಿ ಪರಸ್ಪರ ಸಹಕಾರದಿಂದ ಕೆಲಸ ಮಾಡಲು ಉಭಯ ನಾಯಕರು ಸಮ್ಮತಿಸಿದ್ದರು. 


ಸುದ್ದಿ ಓದಿ