ಲೋಕಸಭೆ : ಮೊದಲ ಹಂತದ ಮತದಾನ ಮುಕ್ತಾಯ

ದೇಶದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಇಂದು (ಏಪ್ರಿಲ್ 19) ಮೊದಲನೇ ಹಂತದಲ್ಲಿ ಮತದಾರ ಅಭ್ಯರ್ಥಿಗಳ ಭವಿಷ್ಯವನ್ನೇ ಬರೆದಿದ್ದಾನೆ. ಕೇಂದ್ರಾಡಳಿತ ಪ್ರದೇಶಗಳು ಸೇರಿ 21 ರಾಜ್ಯಗಳ 102 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಅಂತ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ತಮಿಳುನಾಡಿನ 39 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನವಾಗಿದ್ದು, ರಾಜಕೀಯ ನಾಯಕರು, ಗಣ್ಯರಿಂದ ಹಿಡಿದು ಸಿನಿಮಾ ನಟ, ನಟಿಯರು ಮತಚಲಾಯಿಸಿದ್ದಾರೆ. ಇನ್ನು ಕೆಲ ಕಡೆಗಳಲ್ಲಿ ಅಹಿತಕರ ಘಟನೆ ಹೊರತುಪಡಿಸಿ ಉಳಿದೆಡೆ ಶಾಂತಿಯುತವಾಗಿ ಮತದಾನ ನಡೆದಿದೆ.

 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಕ್ಷೇತ್ರಗಳಿಗೆ ಇಂದು ನಡೆದಿದ್ದ ಲೋಕಸಭಾ ಚುನಾವಣೆಯ (Lok Sabha Elections 2024) ಮೊದಲ ಹಂತದ ಮತದಾನ ಮತದಾನ (Voting) ಅಂತ್ಯವಾಗಿದೆ. ಇದರೊಂದಿಗೆ 102 ಕ್ಷೇತ್ರಗಳ ಒಟ್ಟು 1625 ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಿದೆ. 9 ಲೋಕಸಭಾ ಸ್ಥಾನಗಳನ್ನು (Lok Sabha Constituencies) ಹೊಂದಿರುವ ಈಶಾನ್ಯದ ಆರು ರಾಜ್ಯಗಳು, ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳು, ಲಕ್ಷದ್ವೀಪದ 1 ಕ್ಷೇತ್ರ, ಅರುಣಾಚಲ ಪ್ರದೇಶದ 2, ಬಿಹಾರದ 4, ಅಸ್ಸಾಂನ 4, ಛತ್ತೀಸ್‌ಗದ 1, ಮಧ್ಯಪ್ರದೇಶದ 6, ಮಹಾರಾಷ್ಟ್ರದ 5, ಮಣಿಪುರದ 2, ಮೇಘಾಲಯದ 2, ಮಿಜೋರಾಂದ 1, ನಾಗಾಲ್ಯಾಂಡ್‌ನ 1, ರಾಜಸ್ಥಾನದ 12, ಸಿಕ್ಕಿಂನ 1, ತ್ರಿಪುರಾದ 1, ಉತ್ತರ ಪ್ರದೇಶದ 8, ಉತ್ತರಾಖಂಡದ 5, ಪಶ್ಚಿಮ ಬಂಗಾಳದ 3, ತಮಿಳುನಾಡಿನ 39, ಅಂಡಮಾನ್ ಮತ್ತು ನಿಕೋಬಾರ್‌ನ 1, ಜಮ್ಮು ಮತ್ತು ಕಾಶ್ಮೀರದ 1, ಲಕ್ಷದ್ವೀಪದ 1 ಮತ್ತು ಪುದುಚೇರಿಯ 1 ಲೋಕಸಭಾ ಕ್ಷೇತ್ರಕ್ಕೆ ನಡೆದ  ಮತದಾನ ಮುಕ್ತಾಯವಾಗಿದೆ.

ಇಂದು(ಏಪ್ರಿಲ್ 19) ಬೆಳಗ್ಗೆ 7 ಗಂಟೆ ನಡೆದಿದ್ದ ಮತದಾನ ಪ್ರಕ್ರಿಯೆ ಇದೀಗ ಮುಗಿದಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಯಶಸ್ವಿಯಾಗಿ ಅಂತ್ಯವಾದಂತಾಗಿದೆ. ಇನ್ನು ಮೊದಲ ಹಂತದಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಪರ್ಸೆಂಟ್ ಮತದಾನವಾಗಿದೆ ಎನ್ನುವುದು ಇನ್ನೂ ಚುನಾವಣೆ ಆಯೊಗ ಅಧಿಕೃತವಾಗಿ ತಿಳಿಸಿಲ್ಲ. ಬದಲಿಗೆ 5 ಗಂಟೆ ವರೆಗಿನ ಅಂಕಿ-ಅಂಶ ಸಿಕ್ಕಿದೆ.

ಇಂದು (ಏಪ್ರಿಲ್ 19) ದೇಶದಲ್ಲಿ ಲೋಕಸಭಾ ಚುನಾವಣೆಯ ಮೊದಲನೇ ಹಂತ ಮತದಾನ ಮುಕ್ತಾಯವಾಗಿದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿ 21 ರಾಜ್ಯಗಳ 102 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಅಂತ್ಯವಾಗಿದ್ದು, ಕೆಲ ಕಡೆಗಳಲ್ಲಿ ಅಹಿತಕರ ಘಟನೆ ಹೊರತುಪಡಿಸಿ ಉಳಿದೆಡೆ ಶಾಂತಿಯುತವಾಗಿ ಮತದಾನ ನಡೆದಿದೆ.