ಅಂತರರಾಷ್ಟ್ರೀಯ

ಘಾನಾ ಮೃಗಾಲಯದಲ್ಲಿ ಸಿಂಹದಿಂದ ವ್ಯಕ್ತಿ ಬಲಿ

ಘಾನಾ ಮೃಗಾಲಯದಲ್ಲಿ ಸಿಂಹದಿಂದ ವ್ಯಕ್ತಿ ಬಲಿ

ಅಕ್ರಾ, ಆಗಸ್ಟ್ 29 : ಇಲ್ಲಿನ ಘಾನಾದ ರಾಷ್ಟ್ರೀಯ ಮೃಗಾಲಯದಲ್ಲಿ ಮಧ್ಯವಯಸ್ಕ ವ್ಯಕ್ತಿಯನ್ನು ಸಿಂಹವೊಂದು ಕೊಂದಿದೆ ಎಂದು ಘಾನಾದ ಅರಣ್ಯ ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.

ರಾಜಧಾನಿಯ ಹಸಿರು ಬೆಲ್ಟ್‌ಗಳಲ್ಲಿ ಒಂದಾದ ಅಚಿಮೋಟಾ ಅರಣ್ಯದಲ್ಲಿರುವ ಮೃಗಾಲಯದ ಸಿಂಹಗಳ ಆವರಣಕ್ಕೆ ಭದ್ರತಾ ಬೇಲಿಗಳನ್ನು ಹಾರಿ ಒಳನುಗ್ಗಿದ ವ್ಯಕ್ತಿಯನ್ನು ಭಾನುವಾರ ನಿಯಮಿತ ಗಸ್ತಿನಲ್ಲಿದ್ದ ಮೃಗಾಲಯದ ಅಧಿಕಾರಿಗಳು ಗುರುತಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

“ಆವರಣದ ಒಳಗಿನ ಬೇಲಿಯಲ್ಲಿ ನುಸುಳಿ ಒಳನುಗ್ಗಿದ ವ್ಯಕ್ತಿ ಸಿಂಹದ  ದಾಳಿಯಿಂದ ತೀವ್ರ ಗಾಯಗೊಂಡು ರಕ್ತಸ್ರಾವದಿಂದ  ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಮತ್ತು ದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ” ಎಂದು ಹೇಳಲಾಗಿದೆ

ಆಯೋಗವು “ಮೃಗಾಲಯದಿಂದ ಯಾವುದೇ ಸಿಂಹವು ತಪ್ಪಿಸಿಕೊಂಡಿಲ್ಲ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದೆ. , ಒಳನುಗ್ಗಿದ ವ್ಯಕ್ತಿಯ ಉದ್ದೇಶ ತಿಳಿದಿಲ್ಲ ಮತ್ತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುದ್ದಿ ಓದಿ