ಮುಧೋಳ

ಆತ್ಮಸಂಕಲ್ಪ ಪರಿಶ್ರಮದಿಂದ ಜಯ ಸಾಧ್ಯ: ಶ್ರೀಹರ್ಷ ದೇವರಡ್ಡಿ

ಆತ್ಮಸಂಕಲ್ಪ ಪರಿಶ್ರಮದಿಂದ ಜಯ ಸಾಧ್ಯ:  ಶ್ರೀಹರ್ಷ ದೇವರಡ್ಡಿ

ಮುಧೋಳ 05: ಆತ್ಮಸಂಕಲ್ಪ ಹಾಗೂ ನಿರಂತರ ಪರಿಶ್ರಮದಿಂದ ಗುರಿ ಮುಟ್ಟಲು ಸಾಧ್ಯವೆಂದು ಇತ್ತೀಚಿಗೆ ಪ್ರಾನ್ಸ್ನಲ್ಲಿ ನಡೆದ ಅಂತರಾಷ್ಟ್ರೀಯ ಪ್ಯಾರಾ ಶೂಟಿಂಗ್ ವಿಶ್ವಕಪ್ದಲ್ಲಿ ಭಾರತಕ್ಕೆ ಚಿನ್ನ ತಂದು ಕೊಟ್ಟು ಶೂಟರ್ ಶ್ರೀಹರ್ಷ ದೇವರಡ್ಡಿ ಹೇಳಿದರು.

   ಸೋಮವಾರ ನಗರದ ಪ್ರತಿಷ್ಠಿತ ತ್ರಿವೇಣಿ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮನಾಥ ಶಾಲಾ  ಆವರಣದಲ್ಲಿ ನಡೆದ ವಿಶೇಷ ಉಪನ್ಯಾಸ ಹಾಗೂ ಪ್ರಾನ್ಸ್ದಲ್ಲಿ ನಡೆದ ಅಂತರಾಷ್ಟ್ರೀಯ ಪ್ಯಾರಾ ಶೂಟಿಂಗ್ ವಿಶ್ವಕಪ್ದಲ್ಲಿ ಭಾರತಕ್ಕೆ ಚಿನ್ನ ತಂದು ಕೊಟ್ಟ ಅಂತರಾಷ್ಟ್ರೀಯ ಪ್ಯಾರಾ ಶೂಟರ್ ಶ್ರೀ ಹರ್ಷ ದೇವರಡ್ಡಿಯವರಿಗೆ ಸತ್ಕಾರ ಸಮಾರಂಭ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಅವರು ಮಾತನಾಡಿದರು.

   ನಮ್ಮ ಗುರಿ ದೊಡ್ಡದಾಗಿರಬೇಕು, ತಲುಪುವ ಸಂದರ್ಭದಲ್ಲಿ ಸಾಕಷ್ಟು ಅಡೆತಡೆಗಳು ಬರುತ್ತಿದ್ದು ಎದೆಗುಂದದೆ ಮುನ್ನುಗ್ಗುವ ಗುಣವನ್ನು ನಾವು ಬೆಳೆಸಬೇಕು. ಒಂದು ಗೆಲುವು ಸಿಗಬೇಕಾದರೆ ಸಾಕಷ್ಟು ಸೋಲನ್ನು ಕಾಣಬೇಕಾಗುತ್ತದೆ. ಸೋಲು ಗೆಲುವಿನ ಮೆಟ್ಟಿಲಂತೆ ಸಮಾನವಾಗಿ ಸ್ವಿಕಾರ ಮಾಡಿದರೆ ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ನಾನೋರ್ವ ವಿಶೇಷಚೇತನವಾಗಿದ್ದರೂ ಪ್ರಾರಂಭದಲ್ಲಿ ಎಲ್ಲರ ಜೊತೆಯಲ್ಲಿ ಏನಾದರೂ ಗೆಲ್ಲಬೇಕು ಎನಿಸಿತು ಈಗ ಎಲ್ಲರಿಗಿಂತ ಏನಾದರೂ ಹೊಸದನ್ನು  ಸಾಧಿಸಬೇಕು ಎಂಬ ಛಲ ನನ್ನಲ್ಲಿ ಮೂಡಿದಾಗ  ನನ್ನಲ್ಲಿರುವ ಗೆಲ್ಲುವ ಹುಮ್ಮಸ್ಸು ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ವಿದ್ಯಾರ್ಥಿಗಳಾದ ನೀವು ಎಲ್ಲವೂ ಇದ್ದು ದಿಟ್ಟ ಪರಿಶ್ರಮ ಆತ್ಮವಿಶ್ವಾಸದೊಂದಿಗೆ ಗುರಿಯತ್ತ ಹೆಜ್ಜೆ ಹಾಕಿ ಜಯ ನಿಮ್ಮದಾಗುತ್ತದೆ ಎಂದು ಅವರು ಹೇಳಿದರು.

   ತ್ರಿವೇಣಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಶಿಶಿರ ಎಸ್.ಮಲಘಾಣ ಮಾತನಾಡಿ ಸಾಧನೆ ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ ನಾವು ಸಾಧನೆ ಮಾಡಿದ ಸಾವಿರಾರು ಸಾಧಕರನ್ನು ನೋಡಿ ಕಳಿಯುವುದರ ಜೊತೆಗೆ ಕಣ್ಮುಂದೆ ಇರುವ ಸಾಧಕರ ಸಾಧನೆಯ ಸ್ಪೂರ್ತಿ ನಮ್ಮನ್ನು ಮತ್ತಷ್ಟು ಮೇಲೆಕ್ಕೆ ತೆಗೆದುಕೊಂಡು ಹೋಗುತ್ತದೆ ಈ ಕಾರಣಕ್ಕಾಗಿ ನಾವು ಸಾಧನೆ ಮಾಡಿದ ಸಾಧಕರ ಆದರ್ಶಗಳ ಜೊತೆಗೆ ಬದುಕಬೇಕು ಎಂದು ಹೇಳಿದರು.

   ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ಮಾತನಾಡಿ ಒಂದನ್ನು ಪಡೆಯಬೇಕಾದರೆ ಮತ್ತೊಂದನ್ನು ತ್ಯಾಗಮಾಡಬೇಕಾಗುತ್ತದೆ.ಶೇ 90ರಷ್ಟು ದೇಹದ ಅಂಗಹಾನಿಯಾದರೂ ದೃತಿಗೆಡದೆ ನಿರಂತರ ಪ್ರಯತ್ನದ ಜೊತೆಗೆ ಪತ್ನಿಯ ಸಹಕಾರ 2024ರಷ್ಟು ಪ್ಯಾರೀಸ್ದಲ್ಲಿ ನಡೆಯುವ ಪ್ಯಾರಾಓಲಂಪಿಕ್ಸ್ಗೆ ಅರ್ಹತೆ ತಂದುಕೊಟ್ಟಿದ್ದು ಅವರ ಸಾಧನೆ  ದಿಟ್ಟತನ ನಮಗೆ ಮಾದರಿಯಾಗಿದೆ ಎಂದು ಹೇಳಿದರು.

  ಪ್ರಾಚಾರ್ಯ ಡಾ.ಎಸ್.ಖಾನ್, ಆಡಳಿತಾಧಿಕಾರಿ ಮಲ್ಲು ಕಳ್ಳೆನ್ನವರ,ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ, ಶೀಕ್ಷಕರಾದ ಪ್ರವೀಣ ಭಾಜಿ, ವೆಂಕಣ್ಣ ಅಳ್ಳಿಮಟ್ಟಿ, ಅಶೋಕ ದೇವರಡ್ಡಿ, ಬಾಬು ಸೇರದಿಂತೆ ಶಿಕ್ಷಕರು, ವಿದ್ಯಾಥರ್ಿಗಳು ಇದ್ದರು 

ಸುದ್ದಿ ಓದಿ