ಹುಕ್ಕೇರಿ

ಕಕ್ಷಿದಾರ ಉಚಿತ ಕಾನೂನು ವ್ಯವಸ್ಥೆ ಲಾಭ ಪಡೆಯಲಿ: ಸಂಕಣ್ಣವರ

ಕಕ್ಷಿದಾರ ಉಚಿತ ಕಾನೂನು ವ್ಯವಸ್ಥೆ ಲಾಭ ಪಡೆಯಲಿ: ಸಂಕಣ್ಣವರ

ಹುಕ್ಕೇರಿ 10: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಬೇಕು ಎಂದು ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕಾರಣ ಪ್ರತಿಯೊಬ್ಬ ಕಕ್ಷಿದಾರ ಇದರ ಪ್ರಯೋಜನ ಪಡೆಯುವಂತೆ ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಸಲಹೆ ನೀಡಿದರು,  

     ಸೋಮವಾರದಂದು ಸ್ಥಳೀಯ ಕೋರ್ಟ ಆವರಣದ ಇ-ಲೈಬ್ರರಿ ಹಾಲದಲ್ಲಿ ಹುಕ್ಕೇರಿ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ತಾಲೂಕಾಡಳಿತ ವತಿಯಿಂದ ಜರುಗಿದ ಕಾನೂನು ಸೇವೆಗಳ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರಣ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತ್ತದೆ ಎಂದರು. 

       ಸಿವ್ಹಿಲ್ ನ್ಯಾಯಾಧೀಶ ಆದಿತ್ಯ ಕಲಾಲ ಅವರು ಮಾತನಾಡಿ ಸಂವಿಧಾನದ ಅಡಿಯಲ್ಲಿ ಸಿಗುವ ನ್ಯಾಯವನ್ನು ಪಡೆಯಲು ನ್ಯಾಯವಾದಿಗಳಲ್ಲಿ ಹೋರಾಟ ಮನೋಭಾವ ಇರಬೇಕು. ಇದರ ಜೊತೆಗೆ ಮಾಧ್ಯಮಗಳ ಸಹಕಾರ ಅವಶ್ಯವಾಗಿದೆ.ಇದಕ್ಕೆ ಇತ್ತೀಚೆಗೆ ನಡೆದ ರೈತರ ಹೋರಾಟದಲ್ಲಿ ನ್ಯಾಯವಾದಿಗಳ ಮತ್ತು ಮಾಧ್ಯಮದವರ ಪಾತ್ರ ಬಹುಮುಖ್ಯ ಪಾತ್ರ ವಹಿಸಿದೆ ಎಂಬುದು ಜನ ಜನಿತವಾಗಿದೆ ಎಂದರು. 

        ನ್ಯಾಯವಾದಿಗಳ ಸಂಘದ ಅದ್ಯಕ್ಷ ಕೆ.ಬಿ.ಕುರಬೇಟ ಮಾತನಾಡಿ ನಾವು ಪರಿಸರದಿಂದ ಗಾಳಿ, ನೀರು, ಬೆಳಕನ್ನು ಉಚಿತವಾಗಿ ಪಡೆಯುವಂತೆ ಬಡ ಜನರಿಗೂ ಉಚಿತವಾಗಿ ನ್ಯಾಯ ಸಿಗಬೇಕು ಎನ್ನುವ ಉದ್ದೇಶದಿಂದ ಉಚಿತ ಕಾನೂನು ಸೇವಾ ಸಮಿತಿಗಳನ್ನು ರಚಿಸಲಾಗಿದೆ. ಇದರ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು. ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಜಿನರಾಳಿ ಮತ್ತು ಕೆ.ಪಿ ಶಿರಗಾಂವಕರ ುಪನ್ಯಾಸ ನೀಡಿದರು.  ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ನ್ಯಾಯಾಲಯದಲ್ಲಿ ಪುರಸ್ಕಾರ ಪಡೆದ ನ್ಯಾಯದೇವತೆ ಚಿತ್ರ ಬಿಡಿಸಿದ ಕಲಾಶಿಕ್ಷಕ ಎಸ್‌.ಜಿ.ಬಿಜಾಪೂರೆ ಅವರನ್ನು ಸತ್ಕರಿಸಿದರು. 

     ತಹಸೀಲ್ದಾರ ಬಲರಾಮ ಕಟ್ಟಿಮನಿ, ಸಿಡಿಪಿಒ ಹೊಳೆಪ್ಪಾ ಎಚ್, ಅಪರ ಸರಕಾರಿ ವಕೀಲ ಅನೀಲ ಕರೋಶಿ, ತಹಸಿಲ್ದಾರ ಬಲರಾಮ ಕಟ್ಟಿಮನಿ, ಪಿ.ಎಸ್‌.ಆಯ್ ಎಚ್‌.ಕೆ.ಪಾಟೀಲ, ವಕೀಲರಾದ ವಿಠ್ಠಲ ಗಸ್ತಿ, ರಾಮಚಂದ್ರ ಜೋಶಿ, ಎಸ್‌.ಎ.ಏಗನ್ನವರ ಮತ್ತಿತರರಿದ್ದರು. ವಕೀಲರಾದ ಎಸ್‌.ಸಿ.ತೇಲಿ ಸ್ವಾಗತಿಸಿ, ನಿರೂಪಿಸಿದರು. ಲಾವಣ್ಯ ಸಂಸುದ್ದಿ ವಂದಿಸಿದರು. 


ಸುದ್ದಿ ಓದಿ