ಅರಸರವರ ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ: ಮಂಜುಳಾ ನಾಯಿಕ
ಹುಕ್ಕೇರಿ 13: ಅಗಷ್ಟ 20ರಂದು ದಿವಂಗತ ಡಿ, ದೇವರಾಜ ಅರಸುರವರ 109ನೇ ಜನ್ಮ ದಿನಾಚಾರಣೆಯನ್ನು ಹುಕ್ಕೇರಿ ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವದು ಎಂದು ಹುಕ್ಕೇರಿ ತಹಸಿಲ್ದಾರ ಮಂಜುಳಾ ನಾಯಿಕ ಹೇಳಿದರು.
ಅವರು ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಅಗಷ್ಟ 20 ರಂದು ಜರಗಲಿರುವ ದಿವಂಗತ ಡಿ ದೇವರಾಜ ಅರಸ ರವರ ಜನ್ಮ ದಿನಾಚಾರಣೆಯನ್ನು ನಗರದ ಕೋಟೆ ಭಾಗದ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಸಭಾ ಭವನದಲ್ಲಿ ಅರ್ಥಪೂರ್ಣವಾಗಿ ಜರುಗಿಸಲಾಗುವದು ಹಾಗೂ ಅಗಷ್ಟ 14 ರಂದು ಹರ ಘರ ತಿರಂಗಾ ಸಮಾರಂಭವನ್ನು ತಾಲೂಕಿನ ಪ್ರತಿ ಮನೆಗಳ ಮೇಲೆ ತಿರಂಗಾ ದ್ವಜ ಹಾರಿಸಿ ಸಂಭ್ರಮಿಸ ಬೇಕು ಎಂದರು.
ಸಭೆಯಲ್ಲಿ ಹಿಂದೂಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎಮ್ ಡಿ ಪಾಟೀಲ, ಸಮಾಜ ಕಲ್ಯಾಣ ಅಧಿಕಾರಿ ಎಚ್ ಎ ಮಾಹುತ, ಬಿ ಆರ್ ಸಿ ಎ ಎಸ್ ಪದ್ಮನ್ನವರ, ಎಮ್ ಡಿ ಪಾಟೀಲ, ಸಿದ್ದು ನಾಯಿಕ, ಸಂತೋಷ ರಾಮಗೋನಟ್ಟಿ, ಎ ಆಯ್ ನಾಯಿಕವಾಡಿ,ಎ ಎಸ್ ಆಯ್ ಎ ಎಸ್ ಸನದಿ, ಅರಣ್ಯ ಅಧಿಕಾರಿ ಬಿ ಎಲ್ ಸನದಿ, ಇ ಸಿ ಪಾರ್ಥನಹಳ್ಳಿ, ಟಿ ಎಮ್ ಸಿ ಮ್ಯಾನೇಜರ ಮಲ್ಲಿಕಾರ್ಜುನ ಗುಡಿಕೇತರ ಮೊದಲಾದವರು ಉಪಸ್ಥಿತರಿದ್ದರು.