ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಉಪನ್ಯಾಸ ಕಾರ್ಯಕ್ರಮ

ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಉಪನ್ಯಾಸ ಕಾರ್ಯಕ್ರಮ Lecture program by Karnataka Vidyavardhaka Sangha

ಲೋಕದರ್ಶನ ವರದಿ 

ಧಾರವಾಡ 30 : ವೃದ್ಧಾಪ್ಯವು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅನಿವಾರ್ಯವಾಗಿ ಬರುವ ಘಟ್ಟ. ಇದನ್ನು ಸಮರ​‍್ಕವಾಗಿ ಎದುರಿಸುವುದು ಸವಾಲಿನ ಕೆಲಸ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಇಮೆರಿಟಸ್ ಪ್ರೊಫೆಸರ್ ಡಾ. ಗೀತಾ ಮಹಾಲೆ ಹೇಳಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮತ್ತು ಮಕ್ಕಳ ಮಂಟಪವು ಜೀರಿಗವಾಡ ಗ್ರಾಮದಲ್ಲಿ ಆಯೋಜಿಸಿದ್ದ ‘ವೃದ್ಧಾಪ್ಯದಲ್ಲಿ ಮಹಿಳೆಯರ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳು’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. 

ಮುಂದುವರೆದು ಮಾತನಾಡಿದ ಅವರು, ವೃದ್ಧಾಪ್ಯದಲ್ಲಿ ಮಹಿಳೆಯರ ದೈಹಿಕ ಆರೋಗ್ಯ ಕ್ಷೀಣಿಸುವ ಜೊತೆಗೆ ಮಾನಸಿಕ ಸ್ಥೈರ್ಯವೂ ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಪ್ರತಿಯೊಬ್ಬ ಮಹಿಳೆಯೂ ಮೊದಲೇ ಮಾನಸಿಕವಾಗಿ ಸಿದ್ಧರಾಗಿರಬೇಕೆಂದರು. 

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಚಕ್ರಸಾಲಿ ಮಾತನಾಡಿ, “ವೃದ್ಧಾಪ್ಯದ ಸಮಸ್ಯೆಯನ್ನು ವೈಯಕ್ತಿಕ ಮಟ್ಟದಲ್ಲಿ ಸಮರ್ಥವಾಗಿ ಎದುರಿಸಲು ಸಾಮಾಜಿಕ ಮನೋಧೋರಣೆ ಬದಲಾಗಬೇಕು. ಸಮಾಜವು ವೃದ್ಧರನ್ನು ನಿರ್ಲಕ್ಷಿಸದೆ, ಅವರಲ್ಲಿರುವ ಶಕ್ತಿ ಹಾಗೂ ಸಾಮರ್ಥ್ಯಗಳನ್ನು ಗುರುತಿಸಿ ಉತ್ತೇಜಿಸಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ದೇಶಪಾಂಡೆ ಮಾತನಾಡಿ, ವೃದ್ಧರನ್ನು ಸರಿಯಾಗಿ ನೋಡಿಕೊಳ್ಳುವುದು ಪ್ರತಿಯೊಂದು ಕುಟುಂಬದ ಆದ್ಯ ಕರ್ತವ್ಯ.ಈ ನಿಟ್ಟಿನಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು ಎಂದರು. ವೇದಿಕೆಯಲ್ಲಿ ಗೀತಾ ಗೋವನಕೊಪ್ಪ ಹಾಗೂ ಗಣಪತಿ ಹುಣಸಿಮರದ ಉಪಸ್ಥಿತರಿದ್ದರು. 

ಮಹಿಳಾ ಮತ್ತು ಮಕ್ಕಳ ಮಂಟಪದ ಸಂಚಾಲಕಿ ಡಾ.ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಡಾ.ವಿ. ಶಾರದಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಅರುಣಾ ಹಳ್ಳಿಕೇರಿ ಅತಿಥಿಗಳನ್ನು ಪರಿಚಯಿಸಿದರು. ರುದ್ರಾಕ್ಷಿ ಹಟ್ಟಿಹೊಳಿ ನಿರೂಪಿಸಿದರೆ. ಸುಜಾತಾ ಪರ್ವತ ದೇವರಮಠ ವಂದನಾರೆ​‍್ಣ ಸಲ್ಲಿಸಿದರು. ಕಸ್ತೂರಿ  ಪ್ರಾರ್ಥಿಸಿದರು. 

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಜೀರಿಗವಾಡದ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.