ಭಾವನಗರ ಬಳಿ ಭೂಕುಸಿತ : ಮಣ್ಣಿನಡಿ ಬಸ್, ಟ್ರಕ್ ಸಮಾಧಿ
ಶಿಮ್ಲಾ, ಆಗಸ್ಟ್ 11 ಇಲ್ಲಿನ ಶಿಮ್ಲಾ ಮತ್ತು ಕಿನ್ನೌರ್ ಜಿಲ್ಲೆಯ ಭಾವನಗರ ಗಡಿ ಬಳಿ ಭಾರಿ ಭೂಕುಸಿತ ಸಂಭವಿಸಿದೆ.
ಭೂ ಕುಸಿತದಿಂದಾಗಿ ಪ್ರಯಾಣಿಕರಿದ್ದ ಬಸ್ ಮತ್ತು ಟ್ರಕ್ ಗಳು ಮಣ್ಣಿನಡಿ ಹೂತು ಹೋಗಿದೆ. ಬುಧವಾರ 11: 45ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಬಸ್ಸಿನಲ್ಲಿ ಸುಮಾರು 40 ರಿಂದ 50 ಜನರು ಇರಬಹುದೆಂದು ನಿರೀಕ್ಷಿಸಲಾಗಿದೆ. ಭಾವನಗರ ಮತ್ತು ರೆಕಾಂಗ್ ಪಿಯೊದಿಂದ ರಕ್ಷಣಾ ಕಾರ್ಯಪಡೆ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.