ಗದಗ 13: ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ತುರ್ತ ವೈದ್ಯಕೀಯ, ಪೊಲೀಸ ನೆರವು, ಚಿಕಿತ್ಸೆ, ಕಾನೂನು ನೆರವು ಹಾಗೂ ಸಮಾಲೋಚನೆಯನ್ನು ಒಂದೇ ಸೂರಿನಡಿ ಒದಗಿಸುವ 'ಸಖಿ' ಕೇಂದ್ರದ ಕಟ್ಟಡ ಕಾಮಗಾರಿಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಭೂಮಿ ಪೂಜೆ ನೆರವೇರಿಸಿದರು.
ಶಾಸಕ ಎಚ್.ಕೆ.ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗದಗ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಎಚ್ ಪಾಟೀಲ, ಶಾಸಕರಾದ ಕಳಕಪ್ಪ ಬಂಡಿ, ಜಿ.ಪಂ. ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ಗದಗ ತಾ.ಪಂ. ಸದಸ್ಯೆ ಮುಮ್ತಾಜ್ ಬಿ ನದಾಫ್, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಸಿ.ಇ.ಓ ಡಾ. ಆನಂದ್ ಕೆ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಶ್ರೀನಾಥ ಜೋಶಿ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಪಿ.ಎಸ್. ಭೂಸರಡ್ಡಿ, ಪ್ರಾಚಾರ್ಯ ಶ್ರೀನಿವಾಸ ದೇಶಪಾಂಡೆ, ಜಿಲ್ಲಾಸ್ಪತ್ರೆ ಸರ್ಜನ್ ಡಾ. ಬಿ.ಸಿ. ಕರಿಗೌಡರ, ವೈದ್ಯಕೀಯ ಅಧಿಕ್ಷಕ ಡಾ. ಪಲ್ಲೇದ, ಜಿ.ಎಸ್. ಡಾ. ಬಿಜ್ಜಳ , ಮಹಿಳಾ ಮತ್ತು ಅಭಿವೃದ್ಧಿ ಉಪನಿದರ್ೇಶಕಿ ಅಕ್ಕಮಹಾದೇವಿ ಕೆ.ಎಚ್., ನಿಮರ್ಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ.ವಿ. ಶಿರೋಳ, ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಜಿಲ್ಲಾಸ್ಪತ್ರೆ, ಜಿಮ್ಸ್ನ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು. ಗದಗ ಜಿಲ್ಲಾಸ್ಪತ್ರೆ ಕಟ್ಟಡದ ಹಿಂಭಾಗದಲ್ಲಿ 49 ಲಕ್ಷ ರೂ. ವೆಚ್ಚದಲ್ಲಿ 1892 ಚ. ಅಡಿ ಕಟ್ಟಡವನ್ನು ನಿರ್ಮಿತಿ ಕೇಂದ್ರ ನಿರ್ಮಾಣ ಮಾಡಲಿದ್ದು ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ, ಪರೀಕ್ಷೆ, ಎಫ್. ಐ ಆರ್. ದಾಖಲು, ಕಾನೂನು ರಕ್ಷಣೆ, ಸಮಾಲೋಚನೆ, ವಸತಿ ಮುಂತಾದ ಉಚಿತ ಸೌಲಭ್ಯಗಳನ್ನು ಈ ಘಟಕದಿಂದ ದಿನದ 24 ಗಂಟೆಗಳು ಲಭ್ಯವಿವೆ.