ಲಕ್ಷ್ಮೀ ಜಾತ್ರೆ: ಅಂತರ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಶರ್ಯತ್ತು
Lakshmi Jatre
ಮಾಂಜರಿ 10: ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ಲಕ್ಷ್ಮೀ ಜಾತ್ರೆಯ ಅಂಗವಾಗಿ ಏರಿ್ಡಸಿದ್ದ ಅಂತರ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಮಾನಕಾಪುರ ಗ್ರಾಮದ ದಾದಾ ಮಹಾರಾಜ ಎಂಬುವರ ಎತ್ತಿನಗಾಡಿ ಪ್ರಥಮ ಸ್ಥಾನ ಪಡೆದು 20,001 ರೂ ಬಹುಮಾನ ತನ್ನದಾಗಿಸಿಕೊಂಡಿತು.
ಪೇಲು ಹರೇಲ ಆಡಿ ದ್ವಿತೀಯ 15001 ಹಾಗೂ ಹರ್ಷದ ವಾಡಕರ ಎಂಬುವರ ಗಾಡಿ ತೃತೀಯ ಸ್ಥಾನ ಪಡೆದು 10,001 ರೂ ಬಹುಮಾನ ಪಡೆದುಕೊಂಡರು. ಕುದುರೆ ಗಾಡಿ ಶರ್ಯತ್ತಿನಲ್ಲಿ ಯಡೂರವಾಡಿಯ ಚಿದಾನಂದ ಇಂಗಳೆ ಪ್ರಥಮ, ನಿಖಿಲ ಮಾನೆ ಯಡೂರವಾಡಿ ದ್ವಿತೀಯ ಮತ್ತು ಸೋಮನಾಥ ಹರೇಲ ಮಾನಕಾಪುರ ಎಂಬುವರ ಗಾಡಿ ತೃತೀಯ ಸ್ಥಾನ ಬಹುಮಾನ ಪಡೆದರು.ಎತ್ತು ಹಿಡಿದುಕೊಂಡು ಓಡುವ ಸ್ಪರ್ಧೆಯಲ್ಲಿ ಸೊನ್ಯಾ ನಾಗರಾಳ ಪ್ರಥಮ, ಹರನ್ಯಾ ನಾಗರಾಳ ದ್ವಿತೀಯ ಮತ್ತು ಸಂಕೇತ ಮಾನೆ ಲೋಕುರ ತೃತೀಯ ಸ್ಥಾನ ಪಡೆದರು. ಓಡುವ ಸ್ಪರ್ಧೆಯಲ್ಲಿ ರಾಹುಲ ಚವ್ಹಾಣ ಸಾಂಗಲಿ ಪ್ರಥಮ, ಶಿವಾನಂದ ನಾಯಿಕ ದ್ವಿತೀಯ ಮತ್ತು ಶಹಾಜಿ ಧನಗರ ಎಂಬುವರು ತೃತೀಯ ಸ್ಥಾನ ಬಹುಮಾನ ಪಡೆದರು. ವಿಜೇತರಿಗೆ ಕಮಿಟಿ ಸದಸ್ಯರು ಹಾಗೂ ಗ್ರಾಮದ ಗಣ್ಯರು ಬಹುಮಾನ ವಿತರಿಸಿದರು. ಶರ್ಯತ್ತು ವೀಕ್ಷಿಸಲು ಗಡಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸದಾಶಿವ ಪಾಟೀಲ, ದತ್ತಾ ಪವಾರ,ದೀಪಕ ಮಾನೆ,ಸದಾಶಿವ ಸಾವಳೆ,ರಾಜು ಚವ್ಹಾನ,ಕಿಟಲ್ ಯಳವಂತೆ,ಗುರಲಿಂಗ ಮಾನೆ,ಪಿಂಟು ಚುಪಡೆ,ಬಾಳಕೃಷ್ಣ ಮಾನೆ, ರಾಜು ಖಾರಬಾರಿ, ವಿನಾಯಕ ಮಾನೆ, ಬಾಪು ಪೂಜಾರಿ, ಕುಮಾರ ಸನದಿ, ಸಂತೋಷ ಬೆಡಗೆ, ಕೆದಾರಿ ಇಂಗಳೆ,ಅಪ್ಪು ಕಾನಡೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 