ಉತ್ತರ ಕರ್ನಾಟಕ ಲಕ್ಷಾಂತರ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ
Lakhs of devotees from North Karnataka trek to Srisailam
ಇಂಡಿ 04 : ಪ್ರತಿ ವರ್ಷ ಯುಗಾದಿ ಸಂದರ್ಭದಲ್ಲಿ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ಉತ್ತರ ಕರ್ನಾಟಕದ ಭಕ್ತರು ಪಾದಯಾತ್ರೆ ಮೂಲಕ ಈ ಜಾತ್ರೆ ಹೋಗುವುದು ಸಂಪ್ರದಾಯ. ಕೆಲವರು ತಮ್ಮೂರಿನಿಂದ ಹೋಳಿ ಹಬ್ಬದಂದು ಅಥವಾ ಮಾರನೇ ದಿವಸ ತಮ್ಮ ತಮ್ಮ ಗ್ರಾಮಗಳಿಂದ ಮಲ್ಲಯ್ಯನ ಕಂಬಿಗಳನ್ನು ಹೊತ್ತುಕೊಂಡು ಭಕ್ತರು ಪಾದಯಾತ್ರೆ ಪ್ರಾರಂಭಿಸುತ್ತಾರೆ.ಕೈಯಲ್ಲೊಂದು ಕೋಲು; ಬೆನ್ನಿಗೊಂದು ಚೀಲ. ಮಲ್ಲಯ್ಯನ ಸ್ಮರಿಸುತ್ತ ನೆತ್ತಿ ಸುಡುವಂಥ ಉರಿಬಿಸಿಲು ಲೆಕ್ಕಿಸದೆ ಬರಿಗಾಲಲ್ಲಿ ಅವರೆಲ್ಲ ಹೆಜ್ಜೆ ಹಾಕುತ್ತಿದ್ದಾರೆ.ವಿಜಾಪುರ, ಬಾಗಲಕೋಟೆ ಜಿಲ್ಲೆಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ತೆರಳುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಈಗ ಈ ಭಾಗದ ಯಾವ ರಸ್ತೆಗಳಲ್ಲಿ ನೋಡಿದರೂ ಶ್ರೀಶೈಲಕ್ಕೆ ಹೊರಟ ಪಾದಯಾತ್ರಿಗಳ ದಂಡು ಕಂಡು ಬರುತ್ತದೆ.ಪ್ರತಿ ವರ್ಷ ಯುಗಾದಿ ಸಂದರ್ಭದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ. ಉತ್ತರ ಕರ್ನಾಟಕದ ಭಕ್ತರು ಪಾದಯಾತ್ರೆ ಮೂಲಕ ಈ ಜಾತ್ರೆ ಹೋಗುವುದು ಸಂಪ್ರದಾಯ. ಕೆಲವರು ತಮ್ಮೂರಿನಿಂದ ಒಂದು ತಿಂಗಳು ಮುಂಚಿತವಾಗಿ (500ರಿಂದ 650 ಕಿ.ಮೀ) ಪಾದಯಾತ್ರೆ ಆರಂಭಿಸುತ್ತಾರೆ. ಯಾತ್ರಿಗಳು ಆಂಧ್ರದ ಅನಂತಪುರದ ಮೂಲಕ ದಟ್ಟ ಕಾಡು ದಾರಿಯಲ್ಲಿ ನಡೆದು ಶ್ರೀಶೈಲ ತಲುಪುತ್ತಾರೆ.ಶ್ರೀಶೈಲ ಕರ್ನೂಲ್ ಜಿಲ್ಲೆಯಲ್ಲಿದೆ. ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಇದೂ ಒಂದು. ಇದು ಶಿವನ ವಾಸಸ್ಥಾನ ಎಂಬ ನಂಬಿಕೆ ಭಕ್ತರಲ್ಲಿ ಇದೆ.
ಮಲ್ಲಿಕಾರ್ಜುನ ದೇವಸ್ಥಾನ ಕೃಷ್ಣಾ ನದಿಯ ಬದಿಯ ‘ಸಿರಿಗಿರಿ’ ಬೆಟ್ಟದಲ್ಲಿದೆ. ಇಲ್ಲಿಗೆ ಬರುವ ಭಕ್ತರಲ್ಲಿ ಹೆಚ್ಚಿನವರು ಕರ್ನಾಟಕ ಹಾಗೂ ಮಹಾರಾಷ್ಟ್ರದವರು.ಅನಂತಪುರದಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಸುಮಾರು 80 ಕಿ ಮೀ ಅಂತರದಲ್ಲಿದೆ. ಈ ದೂರ ಕ್ರಮಿಸಲು 18 ಗಂಟೆ ಬೇಕು. ದುರ್ಗಮ ದಾರಿಯಲ್ಲಿ ಪಾದಯಾತ್ರೆ ಮೂಲಕ ಭಕ್ತರು ಶ್ರೀಶೈಲಕ್ಕೆ ತೆರಳುತ್ತಾರೆ. ಪಾದಯಾತ್ರಿಗಳಿಗೆ ಮಾರ್ಗ ಮಧ್ಯದಲ್ಲಿ ಊಟ, ಉಪಹಾರ, ತಂಪು ಪಾನೀಯ, ಚಹಾ ವ್ಯವಸ್ಥೆ ಇರುತ್ತದೆ. ಉಚಿತ ವೈದ್ಯಕೀಯ ತಪಾಸಣೆ, ಓಷಧೋಪಚಾರವೂ ಇರುತ್ತದೆ.ಶ್ರೀಶೈಲಕ್ಕೂ ಉತ್ತರ ಕರ್ನಾಟಕಕ್ಕೂ ನಂಟು. ಮಹಾರಾಷ್ಟ್ರದ ಸೊಲ್ಲಾಪುರದ ಶ್ರೀಸಿದ್ಧೇಶ್ವರನು ಶ್ರೀಶೈಲ ಮಲ್ಲಿಕಾರ್ಜುನನ ಭಕ್ತ.
ಶ್ರೀಶೈಲಕ್ಕೆ ತೆರಳಿದ್ದ ಸಿದ್ಧೇಶ್ವರನಿಗೆ ಮಲ್ಲಿಕಾರ್ಜುನನ ದರ್ಶನವಾಗಲಿಲ್ಲವಂತೆ. ಆಗ ಅವನು ಅಲ್ಲಿನ ಕೊಳ್ಳಕ್ಕೆ ಹಾರಲು ಮುಂದಾಗಿದ್ದ. ಆಗ ಮಲ್ಲಿಕಾರ್ಜುನನೇ ಬಂದು ಅವನನ್ನು ರಕ್ಷಿಸಿದ ಎಂಬ ಪ್ರತೀತಿ ಇದೆ. ಶ್ರೀಶೈಲದಲ್ಲಿ ‘ಸಿದ್ಧಯ್ಯನ ಕೊಳ್ಳ’ ಸ್ಥಳ ಈಗಲೂ ಇದೆ. ಈ ಕಾರಣಕ್ಕೆ ಸೊಲ್ಲಾಪುರದ ಸಿದ್ಧೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಹಾಗೂ ನಂದಿಕೋಲು ತಲುಪಿದ ನಂತರವೇ ಯುಗಾದಿ ಸಂದರ್ಭದಲ್ಲಿ ಶ್ರೀಶೈಲದಲ್ಲಿ ಮಲ್ಲಿಕಾರ್ಜುನನಿಗೆ ಅಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಆರಂಭಿಸುವ ಪರಿಪಾಠ ರೂಢಿಯಲ್ಲಿದೆ. ಪಲ್ಲಕ್ಕಿ, ನಂದಿಕೋಲು ಹೊತ್ತು ಸೊಲ್ಲಾಪುರದ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಾರೆ.ಚಂದ್ರಮಾನ ಯುಗಾದಿಯ ದಿನ ಶ್ರೀಶೈಲದಲ್ಲಿ ಜರುಗುವ ರಥೋತ್ಸವದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುತ್ತಾರೆ.
ಅದರಂತೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಿಂದ ನೂರಾರು ಭಕ್ತರು ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ತೆರಳಿದರು. ಅವರ ಪಾದಯಾತ್ರೆ ಸುಖಕರವಾಗಿ ಎಂದು ಶುಭ ಹಾರೈಸಲು ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಾಲಯದಿಂದ ಗ್ರಾಮದ ಹೋರ ವಲಯದಲ್ಲಿ ಇರುವ ಹನುಮಾನ್ ಮಂದಿರದವರಿಗೆ ವಾದ್ಯ ವೃಂದ ಸಂಗೀತ ನೃತ್ಯ ವೈಭವದ್ದೊಂದಿಗೆ ಹಾಗೂ ಮುತ್ತೈದೆಯರು ಸೇರಿ ಪಾದಯಾತ್ರೆಗಳನ್ನು ಬಿಳ್ಕೊಡುವುದು ಸಾಂಪ್ರದಾಯವಾಗಿದೆ.
1) ಪಾದಗಳಿಗೆ ಕಟ್ಟಿಗೆ ಕಟ್ಟಿಕೊಂಡು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಿಂದ ಸುಮಾರು ಐದುನೂರು ಕೀಲೋಮೀಟರ್ ದೂರ ಇರುವ ಸುಕ್ಷೇತ್ರ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆಯಲು ಹೋಗುತ್ತಿದ್ದು ನನಗೆ ಗಂಡು ಮಗ ಬೇಕು ಎಂದು ಹರಕೆ ಹೊತ್ತು ಹೋಗಿದೆ, ಈಗ ಗಂಡು ಮಗು ಕೂಡಾ ಆಗಿದೆ.ಹರಿಕೆ ಮುಟ್ಟಿಸಲು ಇದು ಎರಡನೇ ವರ್ಷ ನಾನು ಪಾದಗಳಿಗೆ ಕಟ್ಟಿಗೆ ಕಟ್ಟಿಕೊಂಡು ಪಾದಯಾತ್ರೆ ಹೋಗುತ್ತಿದ್ದೆನೆ. ಪರಶುರಾಮ ಶಿದರಾಯ ಮೇತ್ರಿ ತಡವಲಗಾ ಗ್ರಾಮ ಇಂಡಿ ತಾಲೂಕು ವಿಜಯಪೂರ ಜಿಲ್ಲೆ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 