ಲೆಬನಾನ್ ಪ್ರತಿಭಟನೆಯಲ್ಲಿ 70 ಮಕ್ಕಳಿಗೆ ಗಾಯ: ಯುನಿಸೆಫ್
ಬೈರುತ್, ಜನವರಿ 31 :ಲೆಬನಾನ್‌ನ ಟ್ರಿಪೊಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕನಿಷ್ಠ 70 ಮಕ್ಕಳು ಗಾಯಗೊಂಡಿದ್ದಾರೆ ಯುನಿಸೆಫ್ ವರದಿ ಮಾಡಿದೆ. ಲೆಬನಾನ್‌ನ ಎರಡನೇ ಅತಿದೊಡ್ಡ ನಗರವಾದ ಟ್ರಿಪೋಲಿಯಲ್ಲಿ ಒಂದು ವಾರ ಕಾಲ ಜರುಗಿದ ಪ್ರತಿಭಟನೆಯಲ್ಲಿ 70 ಮಕ್ಕಳಿಗೆ ಗಾಯಗಳಾಗಿವೆ. ಟ್ರಿಪೋಲಿಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯೇ ಈಘಟನೆಗೆ ಕಾರಣವಾಗಿದೆ.ತುರ್ತು ವರದಿಗಳ ಪ್ರಕಾರ, ಒಂದು ವಾರದ ಅವಧಿಯಲ್ಲಿ ಕನಿಷ್ಠ 70 ಮಕ್ಕಳು ಗಾಯಗೊಂಡಿದ್ದಾರೆ ಎಂದು ಯುನಿಸೆಫ್‌ನ ಲೆಬನಾನಿನ ಶಾಖೆ ತಿಳಿಸಿದೆ. ಸ್ಪುಟ್ನಿಕ್ ವರದಿ ಮಾಡಿದಂತೆ ಪೊಲೀಸರ ಘರ್ಷಣೆಯ ಮಧ್ಯೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಗಾಯಗೊಂಡಿದ್ದ 15 ಬಾಲಕನನ್ನು ಟ್ರಿಪೋಲಿಯಿಂದ ಸ್ಥಳಾಂತರಿಸಲಾಗಿದೆ. ಈ ನಡುವೆ ಇಂತಹ ಪ್ರತಿಭಟನೆಗಳಲ್ಲಿ ಅಪ್ರಾಪ್ತ ವಯಸ್ಕರು ಭಾಗವಹಿಸುವುದು ಸರಿಯಲ್ಲ ಯುನಿಸೆಫ್ ಎಚ್ಚರಿಕೆ ನೀಡಿದೆ ಮತ್ತು ಹಿಂಸೆ ಮತ್ತು ಆಕ್ರಮಣಶೀಲತೆಯ ಅಭಿವ್ಯಕ್ತಿಗಳ ವಿರುದ್ಧ ಮಕ್ಕಳನ್ನು ಕಾಪಾಡುವಂತೆ ಪೋಷಕ ಸಮುದಾಯಕ್ಕೆ ಕರೆ ನೀಡಿದೆ, ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸಿ, ಅವರ ಆರೋಗ್ಯವನ್ನು ಕಾಪಾಡುವ ಹೊಣೆಗಾರಿಕೆ ಬಗ್ಗೆಯೂ ಒತ್ತಿ ಹೇಳಿದೆ.