ಪಜಾಪಂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಯೋಜನೆಗಳ ಅರಿವು ಅವಶ್ಯಕ: ಮಂಟೂರ
ಮೂಡಲಗಿ 16: ಪರಿಶಿಷ್ಟ ಜಾತಿ ್ಘ ಪರಿಶಿಷ ಪಂಗಡ ಘಟಕದ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಶೈಕ್ಷಣಿಕ ಯೋಜನೆಗಳ ಅರಿವು ಹೊಂದುವುದು ಅವಶ್ಯವಿದ್ದು ಇಂದು ಸಮಾಜದಲ್ಲಿ ಕಡೆಗಣಿಸಲ್ಪಟ್ಟ ವರ್ಗಗಳು ಸಹಿತ ಶಿಕ್ಷಣದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ್ಘ ಆರ್ಥಿಕ ರಂಗದಲ್ಲಿ ಬಲಗೊಳ್ಳುವ ಉದ್ದೇಶದಿಂದ ಸರಕಾರ ಉಚಿತ ಶಿಕ್ಷಣದ ಜೊತೆಗೆ ಎಸ್.ಎಸಿ ಎಸ್.ಟಿ ಸಮುದಾಯಕ್ಕೆ ಪ್ರತ್ಯೇಕ ವಸತಿನಿಲಯಗಳು, ಊಟದ ವ್ಯವಸ್ಥೆ, ಶಿಷ್ಯವೇತನ ಹಾಗೂ ಪ್ರತಿಭಾ ಫ್ರೋತ್ಸಾಹಧನ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದರ ಲಾಭವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಬಳಸಿಕೊಳ್ಳುವುದು ಅವಶ್ಯವಿದೆ ಎಂದು ಸಂಜೀವ ಆರ್ ಮಂಟೂರ ಹೇಳಿದರು.
ರೂರಲ್ ಡೆವೆವೆಲಪ್ಮೆಂಟ್ ಸೊಸೈಟಿಯ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಸಮಾಜ ಕಾರ್ಯ ಮಹಾವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ್ಘ ಪರಿಶಿಷ ಪಂಗಡ ಘಟಕದ ಅಡಿಯಲ್ಲಿ ‘ವಿದ್ಯಾರ್ಥಿಗಳಿಗೆ ಸರಕಾರದ ಯೋಜನೆಗಳ ಅರಿವು ಹಾಗೂ 2022-23 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಉಪನ್ಯಾಸಕಿ ಗೀತಾ ಹೀರೆಮಠ ಮಾತನಾಡಿ ಸರಕಾರದ ಯೋಜನೆಗಳು ಪ್ರತಿಭಾವಂತ ವಿದ್ಯಾರ್ಥಿಗಳ ಅಧ್ಯಯನಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದ್ದು ಅದರ ಸದ್ಬಳಕೆ ಮಾಡಿಕೊಂಡು ಅನೇಕ ವಿದ್ಯಾರ್ಥಿಗಳ ಪ್ರತಿಭಾವಂತಿಕೆಯ ವ್ಯಕ್ತಿತ್ವ್ವ ಬೆಳಿಸಿಕೊಳ್ಳುವಲ್ಲಿ ಸರಕಾರಿ ಯೋಜನೆಗಳು ಮಹತ್ವ ಪಡೆದುಕೊಂಡಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಪ್ರಾಚಾರ್ಯ ಎಸ್.ಬಿ ಗೋಟುರೆ ಮಾತನಾಡಿ ಸರಕಾರ ನಮ್ಮ ದೇಶದ ಶಿಕ್ಷಣ ರಂಗದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು ಅದರಲ್ಲಿ ಎಸ್.ಸಿ ಹಾಗೂ ಎಸ್.ಟಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಅನೇಕ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿದೆ ಅದರ ಪ್ರಯೋಜನೆಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವುದು ಅವಶ್ಯವಿದೆ ಎಂದರು.
ಉಪನ್ಯಾಸಕ ಮುತ್ತಣ್ಣ ವಡೆಯರ, ರಾಜು ಪತ್ತಾರ, ಪ್ರಕಾಶ ಚೌಡಕಿ, ಎಸ್.ವ್ಹಿ.ವಗ್ಗಾ, ಸಚೀನ ಮುಗಳಖೋಡ, ಮಲ್ಲಪ್ಪಾ ಪಾಟೀಲ ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿನಿ ಅರ್ಿತಾ ಚಿಕ್ಕೋಡಿ ನಿರೂಪಿಸಿದರು. ಉಪನ್ಯಾಸಕ ಪ್ರವೀಣ ದೇಸಾಯಿ ಸ್ವಾಗತಿಸಿದರು. ವಿದ್ಯಾರ್ಥಿ ನಿಂಗರಾಜ ದಾನಿಹಾಳ ವಂದಿಸಿದರು.