ಕಿತ್ತೂರ ಚನ್ನಮ್ಮನ ಜೀವನಾಧಾರಿತ, ಗತವೈಭವ ಸಾರುವ ಬೃಹತ್ ನಾಟಕಕ್ಕೆ ಮಠಾಧೀಶರಿಂದ ಅದ್ದೂರಿ ಚಾಲನೆ
ಬೆಳಗಾವಿ : ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿಯಾದ ಕಿತ್ತೂರ ಚನ್ನಮ್ಮನ, ಗತವೈಭವ ಸಾರುವ ಹಾಗೂ ಚನ್ನಮ್ಮನ ಜೀವನಾಧಾರಿತ ಬೃಹತ್ ನಾಟಕಕ್ಕೆ ನಗಾರಿ ಬಾರಿಸುವ ಮೂಲಕ ಎಲ್ಲ ಮಠಾಧೀಶರು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಅದ್ದೂರಿಯಾಗಿ ಚಾಲನೆ ನೀಡಿದರು.

ಇದೇ ವೇಳೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಶ್ರೀ ಸೇರಿ ಕೆಲ ಸ್ವಾಮೀಜಿ ಗಳು ಮಾತನಾಡಿ, ಅನೇಕ ಸೃಷ್ಟಿ ಮಾಡಿದ ನಗರ ಬೆಳಗಾವಿಯಾಗಿದ್ದು, ಫೇಸ್ ಬುಕ್ ಲೈವ್ ನೋಡುವ ಇಂದಿನ ದಿನಗಳಲ್ಲಿ ಚನ್ನಮ್ಮನ ನಾಟಕ ನೋಡಲು ಸಾವಿರಾರು ಜನ ಆಗಮಿಸಿರುವದು ಹೆಮ್ಮೆಯ ವಿಚಾರವಾಗಿದೆ. ಒಂದು ಹೆಣ್ಣು ಮನಸ್ಸು ಮಾಡಿದರೆ ಬ್ರಿಟಿಷ್ ರನ್ನು ಸೆದೆ ಬಡೆಯಲು ಸಾಧ್ಯ ಎನ್ನುವದನ್ನು ಚೆನ್ನಮ್ಮ ಸಾಧಿಸಿ ತೋರಿಸಿದ್ದಾರೆ. ಅವರ ಇತಿಹಾಸ ಇಲ್ಲಿ ಪ್ರದರ್ಶನದ ಮಾಡುತ್ತಿರುವದು ರಮೇಶ ಪರವಿನಾಯ್ಕರ ಹಾಗೂ ರವಿ ಪಾಟೀಲ ಅವರ ಕಾರ್ಯವನ್ನು ಶ್ಲಾಘಿಸಿದರು.

ಮಲಯಶಾಂತ ನಗರಿ ಶ್ರೀಗಳು ಮಾತನಾಡಿ, ಮೊದಲು ಮುಂಬಯಿ ಕರ್ನಾಟಕ ಅಂತಾ ಗುರುತಿಸಿಕೊಳ್ಳುವದು ಇಲ್ಲ ಇವಾಗ, ನಾವು ಕಿತ್ತೂರು ಕರ್ನಾಟಕದವರು ಎಂಬುವದನ್ನು ತೋರಿಸಿಕೊಡುವ ಕಾಲ ಬಂದಿದೆ. ಚನ್ನಮ್ಮನ ಇತಿಹಾಸ ಸಾರಲು ಮುಂದಾಗಿರುವ ರಮೇಶ ಪರವಿನಾಯ್ಕರ ಹಾಗೂ ರವಿ ಪಾಟೀಲ ಅವರ ಕಾರ್ಯ ಈ ಪ್ರದರ್ಶನದ ಸಾಹಸಕ್ಕೆ ನಾವು ಚೀರ ಋಣಿ, ದೇಶ ಕಟ್ಟಿದ ತಾಯಿ ಚನ್ನಮ್ಮಗೆ ಶರಣು ಎಂದು ನುಡಿದರು.

ಬೆಳಗಾವಿಯ ರುದ್ರಾಕ್ಷಿ ಮಠದ ಅಲ್ಲಮಪ್ರಭು ಶ್ರೀಗಳು ಮಾತನಾಡಿ, ಚನ್ನಮ್ಮ ತಾಯಿ ಜಂಗಮರ ಪೂಜೆ ಇಲ್ಲದೆ ಪ್ರಸಾದ ಸ್ವೀಕರಿಸುತ್ತಿರಲಿಲ್ಲ. ಅಂತ ತಾಯಿ ಇತಿಹಾಸ ಇಲ್ಲಿ ಸಾರುತ್ತಿರುವದು ಹೆಮ್ಮೆ ವಿಷಯ ಎಂದರು.

ಹುಕ್ಕೇರಿ ಹಿರೇಮಠ ಶ್ರೀಗಳು ಮಾತನಾಡಿ, ಚನ್ನಮ್ಮ ನಾಟಕ ನೋಡಲು ಎಲ್ಲರಿಗೂ ಅವಕಾಶ ನೀಡಿರುವ ಡಾ. ರವಿ ಪಾಟೀಲ ಅವರ ಕಾರ್ಯಕ್ಕೆ ಮೆಚ್ವುಗೆ ವ್ಯಕ್ತಪಡಿಸಿದರು. ಹಾಗೂ ಚನ್ನಮ್ಮನ ಈ ನಾಟಕ ಪ್ರದರ್ಶನಕ್ಕೆ ರಮೇಶ ಪರವಿನಾಯ್ಕರ ಸತತ ಒಂದು ವರೆ ವರ್ಷ ಶ್ರಮವಹಿಸಿದ್ದಾರೆ. ಅವರ ಶ್ರಮ ಇಂದು ಸ್ವಾರ್ಥವಾಗಿದೆ ಎಂದು ನುಡಿದರು.
ಡಾ. ರವಿ ಪಾಟೀಲ ಮಾತನಾಡಿ, 25 ಸಾವಿರ ಜನ ಸೇರಿದ್ದಾರೆ. ಈ ನಾಟಕ ಯಶಸ್ಸು ಆಗಿದೆ ಎಂದು ಭಾವಿಸುತ್ತೇನೆ. ತಮ್ಮೇಲ್ಲರ ಆಶಿರ್ವಾದ ಹೀಗೆ ನನ್ನ ಮೇಲೆ ಇರಲಿ ಎಂದು ನುಡಿದರು.

ಸುನಿತಾ ದೇಸಾಯಿ ಸೂತ್ರಸಂಚಲನೆ ಮಾಡಿದರು. ಕುದುರೆ ಆನೆಗಳಿಗೆ ತರಬೇತಿ ನೀಡಿದ್ದ ಪ್ರವೀಣ ಮತ್ತು ಬಲಿರಾಮ ಅವರನ್ನು ಹಾಗೂ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿದ ಡಾ. ರವಿ ಪಾಟೀಲ ಅವರನ್ನು ಸತ್ಕರಿಸಲಾಯಿತು.

ಈ ವೇಳೆಯಲ್ಲಿ ವಿಭೂತಿಮಠದ ಶ್ರೀಗಳು ಬೆಂಗಳೂರು, ಕೊಣ್ಣೂರ ಮರಡಿಮಠದ ಶ್ರೀಗಳು, ಶಿವಪೂಜೆಮಠದ ಶ್ರೀಗಳು, ಬಸವರಾಜ ರೊಟ್ಟಿ ಸೇರಿದಂತೆ ಅನೇಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
