ರಾಚವಿವಿ ಖೋ-ಖೋ ತಂಡಕ್ಕೆ ಆಯ್ಕೆ
ಮೂಡಲಗಿ 21: ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ಪೂರ್ಣಿಮಾ ಬಿದರಿ ಹಾಗೂ ನೀಲವ್ವ ಕಬ್ಬೂರ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಖೋ-ಖೋ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ಅಲ್ಲದೇ, ಅಕ್ಷತಾ ಸಪ್ತಸಾಗರ ಹಾಗೂ ರೂಪಾ ನಂದಗಾಂವಮಠ ಅವರು ಮೀಸಲು ಆಟಗಾರ್ತಿಯರಾಗಿ ಆಯ್ಕೆಯಾಗಿರುತ್ತಾರೆ. ಅವರಿಗೆ ಕಾಲೇಜು ಅಭಿವೃದ್ಧಿ ಮಂಡಳಿಯ ಸರ್ವ ಸದಸ್ಯರು, ಪ್ರಾಂಶುಪಾಲ ಶಾನೂರ ಕುಮಾರ ಗಾಣಿಗೇರ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರವಿ ಗಡದನ್ನವರ, ತಂಡದ ನಿವರ್ಾಹಕ ಚೇತನ್ ರಾಜಾ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಯವರು ಅಭಿನಂದನೆಗಳನ್ನು ತಿಳಿಸಿದ್ದಾರೆ