ಜಹೀರ್ ಹಮ್ಜವಿಗೆ ಕರುನಾಡ ಭೂಷಣ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿ
ಕೊಪ್ಪಳ: ಪಕ್ಕದ ಗೋವಾ ರಾಜ್ಯದ ಸಾಕಳಿ ನಗರದಲ್ಲಿ ಇದೇ ನವ್ಹಂಬರ್: 03ರಂದು ಜರುಗಿದೆ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಂಭ್ರಮ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕೊಡಮಾಡಿದ ಕರುನಾಡ ಭೂಷಣ ಪ್ರಶಸ್ತಿಯನ್ನು ಕೊಪ್ಪಳದ ಸ್ಟಾರ ಚಿತ್ರಮಂದಿದಲ್ಲಿ ಕಾರ್ಯನಿರ್ವಹಿಸುತ್ತೀರುವ ಚಿತ್ರ ಪ್ರದರ್ಶಕ(ಆಪರೇಟರ್) ಸೈಯದ್ ಜಹೀರ್ ಹುಸೇನ್ ಹಮ್ಜವಿ ರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ನವ್ಹಂಬರ್: 03 ರಂದು ಸಾಕಳಿ ನಗರದಲ್ಲಿ ಜರುಗಿದ ಕಾರ್ಯಕ್ರಮದ ಉದ್ಘಾಟನೆಯನ್ನು ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ ಸಾವಂತ್ ನೆರವೇರಿಸಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಕೊಪ್ಪಳದ ಸ್ಟಾರ ಚಿತ್ರಮಂದಿದಲ್ಲಿ ಕಳೆದ ಐದು ದಶಕದಿಂದ ಕಾರ್ಯನಿರ್ವಹಿಸುತ್ತೀರುವ ಚಿತ್ರ ಪ್ರದರ್ಶಕ(ಆಪರೇಟರ್) ಸೈಯದ್ ಜಹೀರ್ ಹುಸೇನ್ ಹಮ್ಜವಿ ಅವರ ಉತ್ತಮ ಹಾಗೂ ಸೇವೆಯನ್ನು ಪರಿಗಣಿಸಿ ಸದರಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಬೆಳಗಾವಿಯ ಡಾ. ಪ್ರಭಾಕರ ಕೋರೆ ಸೇರಿದಂತೆ ಗೋವಾ ರಾಜ್ಯದ ಜನಪ್ರತಿನಿಧಿಗಳು ಅಧಿಕಾರಿಗಳು, ಗೋವಾ ಕನ್ನಡಿಗರ ವಿವಿಧ ಸಂಘಗಳ ಪದದಾದಿಕಾರಿಗಳು ಮಠಾಧೀಶರು ಅಲ್ಲದೇ ಸಮ್ಮೇಳನದ ಅಧ್ಯಕ್ಷ ಪ್ರಭು ರತ್ನಾಕರ, ಸಂಘಟಕ ಮಹೇಶಬಾಬು ಸುವರ್ೆ, ಗೋವಾ ಕನ್ನಡಿಗರ ರಾಜ್ಯಾಧ್ಯಕ್ಷ ಹನುಮಂತರಡ್ಡಿ ಶಿರೂರು, ಎಸ್.ಹೆಚ್.ಪಾಟೀಲ್ ಅನೇಕರು ಭಾಗವಹಿಸಿದ್ದರು.
ಗೋವಾದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ನವ್ಹಂಬರ್: 03 ರಂದು ಜರುಗಿದ ಸಾಂಸ್ಕೃತಿಕ ಸಂಭ್ರಮಾಚರಣೆಯಲ್ಲಿ ಸೈಯದ್ ಜಹೀರ್ ಹುಸೇನ್ ಹಮ್ಜವಿ ಕರುನಾಡ ಭೂಷಣ ಪ್ರಶಸ್ತಿ ಲಭಿಸಿರುವದಕ್ಕೆ ಜಿಲ್ಲೆಯ ವಿವಿಧ ಸಂಘಟನೆಗಳು ಹರ್ಷವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 