ಕರಿ ಹರಿದ ಬಿಳಿ ಎತ್ತು ಸಂಭ್ರಮಿಸಿದ ರೈತರು
Karahunnimme- Chimmad News
ಚಿಮ್ಮಡ 11; ರೈತರ ಹಬ್ಬವಾದ ಕಾರ ಹುಣ್ಣಿಮೆ ನಿಮಿತ್ಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರಿ ಹರಿಯುವ ಸ್ಪರ್ದೆಯಲ್ಲಿ ಬಿಳಿ ಎತ್ತು ಕರಿ ಹರಿಯುವ ಮೂಲಕ ವಿಜಯ ಸಾಧಿಸಿತು.
ಬುಧವಾರ ಸಂಜೆ ಗ್ರಾಮದ ಪ್ರಮುಖ ಬೀದಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕರಿ ಹರಿಯುವ ಸ್ಪರ್ದೆಯಲ್ಲಿ ಕೆಂಪು ಎತ್ತು ಹಾಗೂ ಬಿಳಿ ಎತ್ತುಗಳನ್ನು ಸ್ಪರ್ದೆಗೆ ಅಣಿಗೊಳಿಸಲಾಗಿತ್ತು. ಗ್ರಾಮದ ಪ್ರಮುಖರಿಂದ ತೆಂಗಿನಕಾಯಿ ಒಡೆಯುವ ಮೂಲಕ ಸ್ಪರ್ದೆಗೆ ಚಾಲನೆ ನೀಡಲಾಯಿತು. ಮೊದಲು ಕೆಂಪು ಎತ್ತು ಪ್ರಥಮಸ್ಥಾನದಲ್ಲಿತ್ತಾದರು ಬಿಳಿ ಎತ್ತು ಅದನ್ನು ಹಿಂದಿಕ್ಕಿ ಮುನ್ನುಗ್ಗುವ ಮೂಲಕ ಕರಿ ಹರಿಯಿತು. ಬಿಳಿ ಎತ್ತು ಕರಿ ಹರಿದರೆ ಫಲವತ್ತಾದ ಬೆಳೆ ಬಂದು ರೈತರಿಗ ಲಾಭ ಬರುವುದೆಂಬ ಪ್ರತೀತಿ ಇದ್ದು ಕರಿ ಹರಿಯುತ್ತಲೇ ಯುವಕರು, ರೈತರು ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಬಿ.ಎಸ್. ಪಾಟೀಲ, ಆರ್.ಎಂ.ಬಗನಾಳ, ಅಣ್ಣಪ್ಪಗೌಡ ಪಾಟೀಲ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪುಜಾರಿ, ಅಶೋಕ ಧಡೂತಿ, ದುಂಡಪ್ಪಾ ಪಾಟೀಲ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಪಿಕೆಪಿಎಸ್ ಬ್ಯಾಂಕ್ ನಿರ್ದೆಶಕರು ಸೇರಿದಂತೆ ಹಲವಾರು ಪ್ರಮುಖರೊಂದಿಗೆ ಸಾವಿರಾರು ಜನ ರೈತರು ಉಪಸ್ಥಿತರಿದ್ದರು. ಬನಹಟ್ಟಿ ಏಎಸ್ಸೈ ಶಿವಪ್ಪಾ ಹುದ್ದಾರ ರವರ ನೇತ್ರತ್ವದಲ್ಲಿ ಸೂಕ್ತ ಬಂದೋಬಸ್ತ ಏರ‌್ಪಡಿಸಲಾಗಿತ್ತು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 