ಕನ್ನಡ ಹೋರಾಟಗಾರ ವಿರುದ್ಧ ಗುಂಡಾ ಕಾಯ್ದೆ ಕೇಸ : ಬೆಳಗಾವಿ ಪೊಲೀಸರ, ಸರಕಾರದ ವಿರುದ್ದ ಕನ್ನಡಿಗರ ಎಚ್ಚರಿಕೆ, ಹೋರಾಟದ ಬಗ್ಗೆ ಸಭೆ

ಕನ್ನಡ ಹೋರಾಟಗಾರ ವಿರುದ್ಧ ಗುಂಡಾ ಕಾಯ್ದೆ ಕೇಸ : ಬೆಳಗಾವಿ ಪೊಲೀಸರ, ಸರಕಾರದ ವಿರುದ್ದ ಕನ್ನಡಿಗರ ಎಚ್ಚರಿಕೆ, ಹೋರಾಟದ ಬಗ್ಗೆ ಸಭೆ

ಬೆಳಗಾವಿ, ಫೆ, 11 : ಬೆಳಗಾವಿಯಲ್ಲಿ ರಾಜ್ಯ ಸರಕಾರ ನಡೆಸಿದ ಅಧಿವೇಶನದ ವಿರುದ್ದವಾಗಿ ಎಮ್‍ಇಎಸ್ ಹಮ್ಮಿಕೊಂಡಿದ್ದ ಮಹಾಮೇಳಾವಾ ವೇಳೆ ಎಮ್‍ಇಎಸ್ ಮುಖಂಡರ ಮುಖಕ್ಕೆ ಮಸಿ ಬಳೆದಿದ್ದ ಕನ್ನಡಪರ ಹೋರಾಟಗಾರರ ವಿರುದ್ದ ಬೆಳಗಾವಿ ಪೊಲೀಸರು ಗುಂಡಾ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿರುವದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸರಕಾರದ ಹಾಗೂ ಬೆಳಗಾವಿ ಪೊಲೀಸರ ವಿರುದ್ದ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಅನಿಯಾಗಿದ್ದು, ಈ ಕುರಿತು ರೂಪರೇಷೆಗಳ ಸಭೆ ನಡೆಸಲಾಯಿತು.


ಬೆಳಗಾವಿಯ ಕನ್ನಡಪರ ಹೋರಾಟಗಾರರಾದ ಸಂಪತ್ ಕುಮಾರ್ ದೇಸಾಯಿ ಹಾಗೂ ಅನಿಲ್ ದಡ್ಡಿಮನಿ ವಿರುದ್ಧ ಗುಂಡಾ ಕಾಯ್ದೆ ಅಡಿಯಲ್ಲಿ ಕೇಸು ದಾಖಲು ಮಾಡಲಾಗಿದೆ. ಕಳೆದ 2021ರ ಡಿಸೆಂಬರ್‍ನಲ್ಲಿ ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್‍ಗೆ ನುಗ್ಗಿ ಎಂಇಎಸ್ ಮುಖಂಡ ದೀಪಕ್ ದಳವಿಯ ಮೇಲೆ ಸಂಪತ್ ಕುಮಾರ್ ದೇಸಾಯಿ ಹಾಗೂ ಅನಿಲ್ ದಡ್ಡಿಮನಿ ಈ ಇಬ್ಬರು ಕನ್ನಡಪರ ಹೋರಾಟಗಾರರು ಮಸಿ ಬಳಿದಿದ್ದರು. ಇದಲ್ಲದೇ ಪೀರಣವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು.

   ಬೆಳಗಾವಿಯ ಅಧಿವೇಶನ ವಿರುದ್ದವಾಗಿ ನಾಡದ್ರೋಹಿ ಎಮ್‍ಇಎಸ್ ಮಹಾಮೇಳಾವಾ ಹಮ್ಮಿಕೊಂಡಿದ್ದ ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದ ಬಳಿಕಿ ಈ ಇಬ್ಬರು ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿ, ಜೈಲಿಗೆ ರವಾನಿಸಿದ್ದರು. ಬಳಿಕ ಬಿಡುಗಡೆಯಾಗಿದ್ದರು. ಇದೀಗ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದಕ್ಕೆ ಆ ಇಬ್ಬರು ಯುವಕರ ವಿರುದ್ಧ ಬೆಳಗಾವಿ ಪೊಲೀಸರು ಗುಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಇಬ್ಬರು ಕನ್ನಡಪರ ಹೋರಾಟಗಾರರ ವಿರುದ್ದ ಬೆಳಗಾವಿ ಪೊಲೀಸರು ಜಾರಿ ಮಾಡಿರುವ ನೋಟಿಸ್ ನೋಡಿ ಕನ್ನಡಪರ ಹೋರಾಟಗಾರರಿಗೆ ಶಾಕ್ ಆಗಿದ್ದು, ನಗರದ ಟಿಳಕವಾಡಿ ಪೆÇಲೀಸ್ ಠಾಣೆಯಿಂದ ಅನಿಲ್ ದಡ್ಡಿಮನಿಗೆ ಕಾರಣ ಕೇಳಿ ನೋಟಿಸ್ ನೀಡಿದರೇ, ಎಪಿಎಂಸಿ ಠಾಣೆಯಿಂದ ಸಂಪತ್‍ಕುಮಾರ್ ದೇಸಾಯಿಗೆ ಕಾರಣ ಕೇಳಿ ಎಂದು ನೋಟಿಸ್ ನೀಡಲಾಗಿದೆ.

    ಚುನಾವಣೆ ವೇಳೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಮುಚ್ಚಳಿಕೆ ನೀಡುವಂತೆ ನೋಟಿಸ್ ಕೊಡಲಾಗಿದೆ. 50 ಸಾವಿರ ರೂ. ಮೊತ್ತದ ಸ್ವಯಂ ಮುಚ್ಚಳಿಕೆ ಹಾಗೂ ಇಷ್ಟೇ ಮೊತ್ತದ ಇಬ್ಬರು ಜಾಮೀನುದಾರರಿಂದ ಮುಚ್ಚಳಿಕೆ ಪಡೆಯುವಂತೆ ನೋಟಿಸ್ ನೀಡಲಾಗಿದೆ. ಇದು ಕನ್ನಡಪರ ಹೋರಾಟಗಾರ ಆಕ್ರೋಶಕ್ಕೆ ಕಾರಣವಾಗಿದೆ.

    ಇವೇಲ್ಲ ಬೆಳವಣಿಗೆಯನ್ನು ಕಂಡ ಬೆಳಗಾವಿ ಕನ್ನಡಪರ ಸಂಘಟನೆಗಳು ಮುಖಂಡರು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ನಡೆಸಿದ್ದು, ಬೆಳಗಾವಿ ಪೊಲೀಸರ ಮತ್ತು ರಾಜ್ಯ ಸರಕಾರದ ವಿರುದ್ದ ಹೋರಾಟಕ್ಕೆ ಸಿದ್ದವಾಗಿ, ಹೋರಾಟದ ರೂಪುರೇಷಗಳನ್ನು ಸಿದ್ದಪಡಿಸುತ್ತಿದ್ದಾರೆ. ಈ ಸಭೆಯ ನೇತೃತ್ವ ವನ್ನು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹಾಗೂ ರಾಜ್ಯ ಸಂಚಾಲಕ ಮಹದೇವ ತಳವಾರ ವಹಿಸಿದ್ದರು. ಇಂದಿನ ಈ ಸಭೆಯಲ್ಲಿ ಶ್ರೀವಾಸ್ ತಾಳುರಕರ್, ವಾಜೀದ ಹಿರೇಕೂಡಿ, ಮಹೇಶ ಹಟ್ಟಿಹೊಳಿ, ಕಸ್ತೂರಿ ಭಾವಿ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

     ಸಭೆಯ ಬಳಿಕ ದೀಪಕ ಗುಡಗನಟ್ಟಿ ಹಾಗೂ ಮಹಾದೇವ ತಳವಾರ ಇವರು ಮಾತನಾಡಿ, ಈ ಇಬ್ಬರು ಕನ್ನಡಪರ ಹೋರಾಟಗಾರರು ಬೇರೆ ರಾಜ್ಯಕ್ಕೆ ಹೋಗಿ ಯಾವ ಕಾರ್ಯ ಮಾಡಿಲ್ಲ ಕನ್ನಡ ನೆಲವಾದ ಬೆಳಗಾವಿಯಲ್ಲಿ ಕನ್ನಡ ಕಾಯುವ ಕೆಲಸ ಮಾಡಿದವರ ವಿರುದ್ದ ಸರಕಾರ ಮತ್ತು ಪೊಲೀಸ ಇಲಾಖೆ ಗುಂಡಾ ಕೇಸು ದಾಖಲಿಸುವ ಮೂಲಕ ಕನ್ನಡಪರ ಹೋರಾಟವನ್ನು ಹತ್ತಿಕ್ಕುವ ಕೆಲವವನ್ನು ಸರಕಾರ ಮತ್ತು ಪೊಲೀಸ ಇಲಾಖೆ ಮಾಡುತ್ತಿದ್ದೆ. ಈ ರೀತಿಯ ಹೋರಾಟವನ್ನು ನಾವು ಖಂಡಿಸುತ್ತೇವೆ. ಈ ಕೆಲಸವನ್ನು ಇಲ್ಲಿಗೆ ಸರಕಾರ ಬಿಡಬೇಕು. ಇಲ್ಲವಾದಲ್ಲಿ ಮುಂದೆ ಉಗ್ರವಾದ ಹೋರಾಟಕ್ಕೆ ಅವಕಾಶ ನೀಡದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. ಅಲ್ಲದೆ ಈ ಕುರಿತು ನಗರ ಪೊಲೀಸ ಆಯುಕ್ತರನ್ನು ನಾವು ಬೇಟ್ಟಿ ಮಾಡುವದಾಗಿ ತಿಳಿಸಿದರು. 

ಸುದ್ದಿ ಓದಿ