ಕನ್ನಡ ಬಾರದ ಬೆಳಗಾವಿ ಮಹಾಪೌರ, ಉಪ ಮಹಾಪೌರರ ಆಯ್ಕೆ : ಬಿಜೆಪಿ ವಿರುದ್ದ ಕರವೇ ಕೆಂಡಾಮಂಡಲ : ಕಾಂಗ್ರೆಸ್ ನಿಂದ ಸಭಾತ್ಯಾಗ

ಕನ್ನಡ ಬಾರದ ಬೆಳಗಾವಿ ಮಹಾಪೌರ, ಉಪ ಮಹಾಪೌರರ ಆಯ್ಕೆ : ಬಿಜೆಪಿ ವಿರುದ್ದ ಕರವೇ ಕೆಂಡಾಮಂಡಲ : ಕಾಂಗ್ರೆಸ್ ನಿಂದ ಸಭಾತ್ಯಾಗ

ಬೆಳಗಾವಿ, ಫೆ, 6 : ಕನ್ನಡ ಮಾತನಾಡಲು ಬಾರದ ಹಾಗೂ ಬರಿಯಲು ಬಾರದವರನ್ನು ಬೆಳಗಾವಿ ಮಹಾನಗರ ಪಾಲಿಕೆಗೆ ಮಹಾಪೌರ ಹಾಗೂ ಉಪ ಮಹಾಪೌರರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಮರಾಠಿಗರಿಗೆ ಮನೆ ಹಾಕಿದೆ ಎಂದು ಬಿಜೆಪಿ ವಿರುದ್ದ ಕರವೇ ಕೆಂಡಾಮಂಡಲವಾಗಿದೆ. 

     ಸೋಮವಾರ ಮಧ್ಯಾಹ್ನ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಹಾಗೂ ಉಪ ಮಹಾಪೌರರ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ ಮಹಾಪೌರರನ್ನಾಗಿ ಶೋಭಾ ಸೋಮಾನಾಚೆ ಹಾಗೂ ಉಪ ಮಹಾಪೌರ ರನ್ನಾಗಿ ರೇಷ್ಮಾ ಪಾಟೀಲ ಇವರನ್ನು ಆಯ್ಕೆ ಮಾಡಲಾಯಿತು.

   ಆದರೆ ಇವರು ಕನ್ನಡ ಮಾತನಾಡಲು ಹಾಗೂ ಬರಿಯಲು ಬಾರದವರಾಗಿರುವದು ಆಯ್ಕೆ ಮಾಡಿರುವದು ಬೆಳಗಾವಿ ಕರ್ನಾಟಕ ರಕ್ಷಣಾ ವೇದಿಕೆ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹಾಗೂ ರಾಜ್ಯ ಸಂಚಾಲಕ ಮಹಾದೇವ ತಳವಾರ ಮಾತನಾಡಿ, ನಾವು ಮಹಾಪೌರ ಅಥವಾ ಉಪ ಮಹಾಪೌರ ಒಟ್ಟು ಒಂದು ಸ್ಥಾನವನ್ನು ಕನ್ನಡದವರಿಗೆ ನೀಡುವಂತೆ ಒತ್ತಾಯ ಮಾಡಿದ್ದೇವು. ಆದರೆ ಬಿಜೆಪಿ ಮತ ಬ್ಯಾಂಕ್ ಗೋಸ್ಕರ ಮರಾಠಿಗರಿಗೆ ಮನೆ ಹಾಕಿದೆ ಎಂದು ಬಿಜೆಪಿ ವಿರುಎ ಕೆಂಡ ಕಾರಿದ್ದಾರೆ. 

ಕನ್ನಡ ಪ್ರಶ್ನೆಗೆ ಮೌನವೇ ಉತ್ತರ : ಕನ್ನಡ ಬಾರದ ಮಹಾಪೌರ


    ಇತಿಹಾಸ ನಿರ್ಮಿಸಿದ ಬೆಳಗಾವಿಯ ಮೊದಲ ಬಿಜೆಪಿ ಮಹಾಪೌರ ಶೋಭಾ ಸೋಮನಾಚೆ ಅವರಿಗೆ ಮಾಧ್ಯಮದವರು ಸೋಮವಾರ ಪಾಲಿಕೆ ಸಭಾಂಗಣದಲ್ಲಿ ಕನ್ನಡ ಭಾಷೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಲು ತಿಣುಕಾಡಿದ ಘಟನೆ ನಡೆದಿದೆ.

    ಸೋಮವಾರ ಮಧ್ಯಾಹ್ನ 3 ಗಂಟೆಗೆ ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಸದಸ್ಯರನ್ನು ಉದ್ದೇಶಿಸಿ, ಧನ್ಯವಾದ ಸಮರ್ಪಣಾ ಭಾಷಣವನ್ನು ಮರಾಠಿಯಲ್ಲಿ ಬರೆದು ತಂದು ಕನ್ನಡದಲ್ಲಿ ವಾಚಿಸಿದರೆ, ಉಪ ಮಹಾಪೌರ ರೇಷ್ಮಾ ಪಾಟೀಲ ಅವರು ತಾವು ಬರೆದು ತಂದದ್ದನ್ನು ಓದುವುದಕ್ಕೂ ಕಷ್ಟ ಪಡುತ್ತಿದ್ದುದು ಕಾಣಸಿಗುತ್ತಿತ್ತು. ನಂತರ ಮಾಧ್ಯಮದವರು ಕೇಳಿದ ಕನ್ನಡ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಮೌನವಾಗಿಯೇ ಅವರಿಬ್ಬರೂ ಉಳಿದದ್ದು ಭಾರೀ ಕುತೂಹಲಕ್ಕೆ ಕಾರಣವಾಯಿತು.

ಕನ್ನಡ ಮಹಾಪೌರ ಇಲ್ಲದನ್ನು ಪ್ರಶ್ನಿಸಿದ ಹೋರಾಟಗಾರ ಪೊಲೀಸ್ ವಶಕ್ಕೆ

    ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಚುನಾವಣೆ ನಡೆದು ಬಿಜೆಪಿ ಬಹುಮತ ಹೊಂದಿರುವ ಪಾಲಿಕೆಯ ಮಹಾಪೌರ-ಉಪ ಮಹಾಪೌರ ಪಟ್ಟಕ್ಕೆ ಮರಾಠಿ ಭಾಷಿಕರನ್ನು ಆಯ್ಕೆ ಮಾಡಿರುವ ಕ್ರಮವನ್ನು ವಿರೋಧಿಸಿ ಪಾಲಿಕೆ ಮುಖ್ಯಧ್ವಾರದ ಬಳಿ ಪ್ರತಿಭಟನೆಗೆ ಮುಂದಾದ ಕನ್ನಡ ಪರ ಹೋರಾಟಗಾರನನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ಯ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ಪಾಲಿಕೆ ಬೆಳಗಾವಿ ಮಹಾಪೌರರ ಆಯ್ಕೆ ವಿರುದ್ಧ ಸೋಮವಾರ ಪ್ರತಿಭಟನೆಗೆ ಮುಂದಾದರು. ಈ ವೇಳೆ ಸ್ಥಳದಲ್ಲಿದ್ದ ಮಾರ್ಕೇಟ್ ಪೊಲೀಸರು ಆತನನ್ನು ವಶಕ್ಕೆ ಪಡೆದು ತಮ್ಮೊಂದಿಗೆ ಕೊಂಡೊಯ್ದರು.

ಕೇವಲ ಮೂವರು ಇದ್ದರೂ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಪುಂಡ ಎಮ್‍ಇಎಸ್

     ಕಳೆದ ಬಾರಿ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಂಗಾಲ ಕಂಪನಿ ಎಮ್‍ಇಎಸ್ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ರೀತಿ ಇಂದು ನಡೆದ ಪಾಲಿಕೆ ಮಹಾಪೌರ ಚುನಾವಣಾ ವೇಳೆ ನಾಡದ್ರೋಹಿ ಘೋಷಣೆಗಳನ್ನು ಕೂಗಿದೆ.

     ಮಹಾನಗರ ಪಾಲಿಕೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಅಧಿಕಾರ ಚುಕ್ಕಾಣಿ ಹಿಡಿದು ನಾಡದ್ರೋಹಿ ಚಟುವಟಿಕೆ ನಡೆಸಿಕೊಂಡು ಬಂದಿದ್ದ ಎಂಇಎಸ್ ಈಗ ಕಂಗಾಲಾಗಿದ್ದು, ಸದ್ಯ ಮೂವರು ಸದಸ್ಯರನ್ನು ಹೊಂದಿರುವ ಎಮ್‍ಇಎಸ್, ಇಂದು ನಡೆದ ಮಹಾಪೌರ ಚುನಾವಣೆಗೆ ಪಾಲಿಕೆ ಆವರಣದಲ್ಲಿ ಬರುತ್ತಿದ್ದಂತೆ ಮತ್ತೇ ನಾಡದ್ರೋಹಿ ಘೋಷಣೆ ಕೂಗಿ ಉದ್ಧಟತನ ಪ್ರದರ್ಶಿಸಿದರು. ಪಾಲಿಕೆಯಲ್ಲಿ ಈ ಹಿಂದೆ ಗಡಿ ವಿಚಾರ ಹಾಗೂ ಭಾಷಾ, ಜಾತಿ ಲೆಕ್ಕಾಚಾರವನ್ನು ಮುಂದೆ ಇಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಂಡು ಬರುತ್ತಿದ್ದ ನಾಡದ್ರೋಹಿ ಎಮ್‍ಇಎಸ್ ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆಯಡಿ ಚುನಾವಣೆ ನಡೆದಿರುವ ಹಿನ್ನೆಲೆಯಲ್ಲಿ ಧೂಳಿಪಟವಾಗಿದೆ.

     ಆದರೆ ಕೇವರ ಮೂರು ಸದಸ್ಯರನ್ನು ಹೊಂದಿರುವ ಎಮ್‍ಇಎಸ್ ಉಪಮಹಾಪೌರ ಸ್ಥಾನಕ್ಕಾಗಿ ತನ್ನ ಅಭ್ಯರ್ಥಿ ವೈಶಾಲಿ ಬಾತ್ಕಂಡೆ ಅವರಿಗೆ ನಾಮಪತ್ರ ಸಲ್ಲಿಸಲು ಸೂಚಿಸಿತ್ತು. ಅದರಂತೆ ಪಾಲಿಕೆಗೆ ಬಂದ ಮೂವರು ಎಮ್‍ಇಎಸ್ ಸದಸ್ಯರು ಬೆಂಗಾವಿ, ನಿಪ್ಪಾಣಿ, ಕಾರವಾರ, ಬೀದರ, ಬಾಲ್ಕಿ ಸಯುಕ್ತ ಮಹಾರಾಷ್ಟ್ರ ಆಗಬೇಕು ಎನ್ನುವ ನಾಡದ್ರೋಹಿ ಘೋಷಣೆಗಳನ್ನು ಕೂಗಿದರು. ಅಲ್ಲದೆ ಮಹಾಪೌರ ಸ್ಥಾನಕ್ಕೆ ಸ್ಪರ್ಧೆ ಮಾಡಿ ಕೇವಲ ನಾಲ್ಕು ಮತಗಳನ್ನು ಪಡೆದು ಸೋತ ಸುಣ್ಣದಂತಾಗಿದೆ ಎಮ್‍ಇಎಸ್.

ಮಹಾಪೌರ ಚುನಾವಣೆ ಭಹಿಷ್ಕರಿಸಿದ ಕಾಂಗೈ : ಅಭಯ್ ಖಂಡನೆ

   ಬೆಳಗಾವಿ ಪಾಲಿಕೆಯಲ್ಲಿ ಸೋಮವಾರ ಮಧ್ಯಾಹ್ನ ಗಂಟೆಗೆ ನಡೆದ ಮಹಾಪೌರ ಚುನಾವಣೆ ಸಂದರ್ಭದಲ್ಲಿ ತಮ್ಮ ಸದಸ್ಯತ್ವದ ಪದಗ್ರಹನ ಆಗುವರೆಗೆ ಮಾತ್ರ ಆಸಿನರಾದ ಕಾಂಗ್ರೆಸ್ ನಗರಸೇವಕರು ಮಹಾಪೌರ ಆಯ್ಕೆ ವೇಳೆಯನ್ನು ಸಭಾತ್ಯಾಗ ಮಾಡಿ ಹೊರ ನಡೆದ ಘಟನೆ ಇಂದು ನಡೆಯಿತು.

    ಮಹಾಪೌರ ಮತ್ತು ಉಪಮಹಾಪೌರ ಸೋಮವಾರ ಮಧ್ಯಾಹ್ನ ಆಯ್ಕೆ ವೇಳೆ ನಡೆದ ಈ ಸಭಾತ್ಯಾಗ ಘಟನೆಯನ್ನು ದಕ್ಷೀಣ ಶಾಸಕ ಅಭಯ ಪಾಟೀಲ ಖಂಡಿಸಿದರು. ಬಳಿಕ ಸಭೆಯಲ್ಲಿ ಮಾತನಾಡಿದ ಅಭಯ್, ಈ ರೀತಿಯ ಸಭಾತ್ಯಾಗದ ಘಟನೆ ಬೆಳಗಾವಿ ಇತಿಹಾಸದಲ್ಲಿ ಎಂದು ನಡೆದಿಲ್ಲ. ಈ ರೀತಿಯ ಘಟನೆ ನಡೆದಿರುವದು ಖಂಡನೀಯ ಎಂದರು. ಅಲ್ಲದೆ ಬೆಳಗಾವಿಯನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಎಲ್ಲರು ಸೇರಿ ಕಾರ್ಯ ಮಾಡೋನ ಎಂದು ಹೇಳಿದ್ದೇವು. ಆದರೆ ಅವರು ಸಭಾತ್ಯಾಗ ಮಶಾಡಿದರು. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ನುಡಿದರು. 

ಸುದ್ದಿ ಓದಿ