ಶ್ರೀನಿವಾಸ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಲೋಕದರ್ಶನ ವರದಿ
ಮೂಡಲಗಿ 02: ಇಲ್ಲಿನ ಶ್ರೀ ಶ್ರೀನಿವಾಸ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜೀವ ವಿಮಾ ನಿಗಮ ಗೋಕಾಕದ ಅಭಿವೃದ್ಧಿ ಅಧಿಕಾರಿ ಸಯ್ಯದ್ ಬಾಸಿತ್ ಅಲಿ ಆಗಮಿಸಿದ್ದರು. ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕದ ಏಕೀಕರಣಕ್ಕೆ ಕಾರಣರಾದ ಹಿರಿಯರನ್ನು ಹಾಗೂ ಕನ್ನಡ ಸಾಹಿತ್ಯಕ್ಕೆ ವಿವಿಧ ಮಹನೀಯರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಪ್ರಾಚಾರ್ಯ ಮನೋಜ ಭಟ್, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಹಾಜರಿದ್ದರು.
ಕನ್ನಡದ ಕವಿ, ಲೇಖಕರು ಹಾಗೂ ಕರ್ನಾಟಕ ರಾಜ್ಯ ಉದಯವಾದ ಕುರಿತಾಗಿ ವಿದ್ಯಾರ್ಥಿಗಳಾದ ಮಲ್ಲಪ್ಪ, ಸಚಿನ್, ಮಲ್ಲು, ಪ್ರತೀಕ್ಷಾ, ಭವಾನಿ, ನೇಹಾ ಹಾಗೂ ಶಿಕ್ಷಕಿ ಶ್ವೇತಾ ಮಾತನಾಡಿದರು.
ವಿದ್ಯಾರ್ಥಿಗಳಾದ ಅರ್ಚನಾ, ಸೃಷ್ಟಿ, ಅಭಿನಯಾ, ಸಹನಾ, ವೈಷ್ಣವಿ, ನಾಗವೀರೇಂದ್ರ, ಸಾಗರ, ಸಂತೋಷ, ಪ್ರಣಯ, ಸೃಜನ, ಅರ್ಿತಾ, ತನುಶ್ರೀ, ಸಾನಿಯಾ, ಫಾತಿಮಾ ಹಾಗೂ ಹನುಮಂತ ಸೋರಗಾಂವಿ ಕನ್ನಡದ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಶಿಕ್ಷಕಿ ಪ್ರೇಮಾ ಪ್ರಾರ್ಥನಾ ಗೀತೆ ಹಾಡಿದರು. ವಿದ್ಯಾರ್ಥಿಗಳಾದ ಶ್ರೇಯಾ ಸ್ವಾಗತಿಸಿ, ಸುಶ್ಮಿತಾ ವಂದಿಸಿದರು. ಸಹನಾ ನಿರೂಪಿಸಿದರು.