ಯರನಾಳದ ಕಾಳಿಕಾಮಠ ಲಿಟಲ್ ಇಂಡಿಯಾ ಆಗಿದೆ: ಶ್ರೀಗಳು
ಹುಕ್ಕೇರಿ 13: ತಾಲೂಕಿನ ಯರನಾಳದ ಕಾಳಿಕಾ ಮಠವು ಚಿಕ್ಕ ಭಾರತ ವಾಗಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.ಅವರು ಇಂದು ಯರನಾಳದ ಬ್ರಹ್ಮಾನಂದ ಅಜ್ಜನವರ ದಿವ್ಯ ಸಾನಿಧ್ಯದಲ್ಲಿ ಮೂರು ದಿನಗಳ ಕಾಲ ಜರಗುವ ಜಾತ್ರಾ ಮಹೋತ್ಸವ ಅಂಗವಾಗಿ ಚಂಡಿಕಾ ಹೋಮ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಬ್ರಹ್ಮಾನಂದ ಅಜ್ಜನವರಿಗೆ ಪೇಟಾ ಧರಿಸಿ ಗೌರವ ಸಮರ್ಿಸಿ ಮಾತನಾಡಿದ ಚಂದ್ರಶೇಖರ ಮಹಾಸ್ವಾಮಿಗಳು ಯರನಾಳದ ಬ್ರಹ್ಮಾನಂದ ಸ್ವಾಮಿಗಳ ಕಾಳಿಕಾ ಮಠವು ಚಿಕ್ಕ ಭಾರತವಾಗಿದೆ ಹೃದಯದಿಂದ ಬರುವ ವಾಣಿಗಳು ಭಕ್ತ ಪಾಲಿಗೆ ಅಮೃತ ನುಡಿಗಳಾಗಿವೆ ಅದರಂತೆ ತ್ರಿವೆಣಿ ಸಂಗಮದಂತೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಅಪಾರ ಭಕ್ತರು ಶ್ರೀಗಳ ಆಶಿರ್ವಾದ ಪಡೆಯುತ್ತಾರೆ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಬ್ರಹ್ಮಾನಂದ ಸ್ವಾಮಿಗಳು ಮಹಿಳೆಯರಿಗೆ ಗೌರವ ಕೋಡುವ ದೇಶ ವೆಂದರೆ ಅದು ಭಾರತ ಅದಕ್ಕೆ ಭಾರತ ಮಾತಾ ಕೀ ಜೈ ಎನ್ನುತ್ತೆವೆ, ತಾಯಿ, ತಂಗಿ , ಅಕ್ಕ, ಹೆಂಡತಿ ಎಲ್ಲರಿಗೂ ಗೌರವ ಕೊಡಬೇಕು ಅಂದಾಗ ನಮ್ಮ ದೇಶದ ಹಿರಿಮೆ ಜಗತ್ತಿಗೆ ಹರಡುತ್ತದೆ ಎಂದರು. ಮಹಾ ಚಂಡಿಕಾ ಹೋಮದಲ್ಲಿ ಅಗ್ನಿ ಆಹುತಿ ನೇರವೇರಿಸಿದ ಅಥಿತಿಗಳಿಗೆ ಗೌರವ ಸಮರ್ಿಸಲಾಯಿತು.
ಈ ಸಂದರ್ಭದಲ್ಲಿ ಮಠದ ರೂವಾರಿ ಮುಕುಂದ ಮಠದ, ಶಂಕರಯ್ಯಾ ಮಠದ, ಆನಂದ ಹೋಸಮನಿ, ಕಲ್ಲಪ್ಪ ಕಮತಿ, ಆನಂದ ವಸ್ತ್ರದ, ಗೋಪಾಲ ಮಠದ, ಹರಿಕೃಷ್ಣಾ, ಅಭಿನವ,ಯಲ್ಲಾಪುರದ ವೇದ ಅದ್ಯಾಯನ ಪಂಡಿತರರಾದ ರಾಮಕೃಷ್ಣ ಭಟ್ಟರ, ಗಣಪತಿ ಭಟ್ಟ, ವಿಶ್ವನಾಥ ಮತ್ತು ಶ್ರೀ ಮಠದ ಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಶುಕ್ರವಾರ ಮದ್ಯಾಹ್ನ ಕಾಳಿಕಾ ಮಾತೆಯ ಉತ್ಸಮೂರ್ತಿಯ ರಥೋತ್ಸವ ಜರುಗಲಿದೆ