ವಿವಿಧ ಕಟ್ಟಡ ಕಾಮಗಾರಿಗಳಿಗೆ ಜ್ಯೋತಿ ಪಾಟೀಲ ಗುದ್ದಲಿ ಪೂಜೆ
ಲೋಕದರ್ಶನ ವರದಿ
ಮೂಡಲಗಿ 11: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯ ಕಟ್ಟಡದ ಆವರಣದಲ್ಲಿ 3.48 ಕೋಟಿ ವೆಚ್ಚದಲ್ಲಿ ವಿವಿಧ ಕಟ್ಟಡ ಕಾಮಗಾರಿಗಳಿಗೆ ಗುರುವಾರದಂದು ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಧೀಶರಾದ ಜ್ಯೋತಿ ಪಾಟೀಲ ಅವರು ಗುದ್ದಲಿ ಪೂಜೆ ನೆರೆವೇರಿಸಿದರು.
ನ್ಯಾಯವಾಧಿಗಳ ಸಂಘದ ಅಧ್ಯಕ್ಷ ಎಸ್ ಎಸ್ ಗೋಡಿಗೌಡರ, ಉಪಾಧ್ಯಕ್ಷ ಎಲ್ ಬಿ ಒಡೆಯರ್, ಪ್ರಧಾನ ಕಾರ್ಯದರ್ಶಿ ಬಿ ವಾಯ್ ಹೆಬ್ಬಾಳ, ಸಹ ಕಾರ್ಯದರ್ಶಿ ಎಸ್ ಎಸ್ ತುಪ್ಪದ, ರವಿ ಶಾಬನ್ನವರ, ನ್ಯಾಯವಾಧಿಗಳಾದ ಎಲ್ ವಾಯ್ ಅಡಿಹುಡಿ, ಕೆ ಎಲ್ ಹುಣಶ್ಯಾಳ, ಎ ಬಿ ಬಾಗೋಜಿ, ಆರ್ ಆರ್ ಬಾಗೋಜಿ, ವಿ ವಿ ನಾಯಕ್, ವಿ ಸಿ ಗಾಡವಿ, ಎಸ್ ಎಲ್ ಪಾಟೀಲ, ವಿ ಕೆ ಪಾಟೀಲ್ ಹಾಗೂ ನ್ಯಾಯಲದ ಸಿಬ್ಬಂದಿಗಳಾದ ಸುರೇಶ ಹುಲ್ಲೊಳಿ, ಶಂಕರ ತುಕ್ಕನ್ನವರ ಮತ್ತು ಅನೇಕರು ಉಪಸ್ಥಿತರಿದ್ದರು.